Sunday, April 22, 2012

"ಹುಟ್ಟುವ ಪ್ರತಿ ಮಗುವೂ, by birth, ವಿಜ್ಞಾನಿಯೇ!"

 
'Putani Vijnana' Function (at Hotel Malligi), Hospet on 22-4-2012.. 
Teachers from all districts of Karnataka attended.
KJVS Jt Secretary SM Shashidhar, 'Putani Vijnana' Chief Challakere Yarriswamy, 
National Awardee Teacher Malla Reddy from Chikmagalur and Pandurangappa Nidasosi in the photo.





"ಹುಟ್ಟುವ ಪ್ರತಿ ಮಗುವೂ, by birth,  ವಿಜ್ಞಾನಿಯೇ; ಯಾವ ಮಗುವೂ ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಬೆಂಕಿ ಸುಡುತ್ತದೆ ಎಂದು ಹೇಳಿದರೆ, ಅದನ್ನೂ ಮುಟ್ಟಿಯೇ ಮನದಟ್ಟು ಮಾಡಿಕೊಳುತ್ತದೆ. ನಮ್ಮ ಶಿಕ್ಷಣ, ನಮ್ಮ ಸಮಾಜ ಮಗುವಿನಲ್ಲಿರುವ ಕುತೂಹಲವನ್ನು ಅರಳಿಸುವ  ಕೆಲಸ ಮಾಡಬೇಕು. ದುರದೃಷ್ಟವಶಾತ್ ಅವು  ಕುತೂಹಲವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. "

"ಜ್ಯೋತಿಷ್ಯ ಪಂಡಿತರು, ವಾಸ್ತು ,  ಪ್ರಳಯ , ಪುನರ್ಜನ್ಮ, ಭೂಕಂಪ   ಪಂಡಿತರು, ಪವಾಡ ಪುರುಷರು ಟೀವಿಯಂಥ ಪ್ರಬಲ ಮಾಧ್ಯಮವನ್ನು ಬಳಸಿಕೊಂಡು ವ್ಯವಸ್ಠಿತವಾಗಿ ಜನರ ಬ್ರೇನ್ ವಾಷ್  ಮಾಡುತ್ತಿದ್ದಾರೆ. ಜನರ ಅಜ್ಣಾನ, ನೋವು, ಸಂಕಟಗಳೇ ಅವರ ಬಂಡವಾಳ!  ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಒಂದು ವಿಶ್ವಾಸಾರ್ಹತೆ ಇರುತ್ತೆ ಅಂತ ನಮ್ಮ ಜನರೂ ಅಂಥ ವಿಷಯಗಳನ್ನು ನಂಬಿ ಮೌಢ್ಯದ   ದಾಸರಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜನರಲ್ಲಿ ವೈಜ್ಣಾನಿಕ ಮನೋಭಾವ ಬೆಳೆಸುವ ಹೊಣೆಯನ್ನು ವಿಜ್ಣಾನ ಬಲ್ಲ  ನವೆ ಅಲ್ಲದೆ ಮತ್ತಾರು   ನಿರ್ವಹಿಸ ಳು ಸಾಧ್ಯ?."

"ಜ್ಯೋತಿಷ್ಯ, ಪವಾಡ, ಕಂದಾಚಾರಗಳನ್ನು ಸುಶಿಕ್ಷಿತರು ನಮಬುತ್ತಾರೆ. ಅಷ್ಟೇ ಏಕೆ? ಅವನ್ನು ನಂಬುವ  ವಿಜ್ಣಾನಿಗಳನ್ನೂ ನಾವು ನೋಡುತ್ತೇವೆ. ಈ ದ್ವಂದ್ವಕ್ಕೆ ಕಾರಣಗಳೇನು? ಇದು ವಿಜ್ಣಾನದತ್ತ ನಡೆಯುತ್ತಿರುವ ಸಮಾಜದ ಸಂಕ್ರಮಣ ಸನ್ನಿವೇಶ. ವಿಜ್ಞಾನಕ್ಕೆ ಕೇವಲ ನೂರಾರು ವರ್ಷಗಳ ಇತಿಹಾಸ. ಆದರೆ ಮಾನವ ಕುಲಕ್ಕೆ ಲಕ್ಷ , ಕೋಟಿ ವರ್ಷಗಳ ಇತಿಹಾಸವಿದೆ.  ಸಾವಿರಾರು ವರ್ಷಗಳಿಂದ ಬಂದ ಆಚರಣೆಗಳು ನಮ್ಮ ಮಾಂಸ , ಮಜ್ಜೆಗಳಲ್ಲಿ ಸೇರಿಹೋಗಿವೆ. ಅಂಥ ಆಚರಣೆಗಳು ತಪ್ಪು ಎಂದು ಮನವರಿಕೆಯಾಗಿ ಸಂಪೂರ್ಣವಾಗಿ ವಿಜ್ಣಾನವನ್ನು ಅಪ್ಪಿಕೊಳ್ಳಲು ಇನ್ನೂ ಸಮಯ ಹಿಡಿದೀತು. ಮತ್ತೊಂದು ಕಾರಣವಿದೆ; ಈಗಿನ ತಲೆಮಾರಿನ ಬಹುತೇಕರು ವಿಜ್ಞಾನವನ್ನು ಕೇವಲ ಶಿಕ್ಷಣದ ಒಂದು ವಿಷಯವಾಗಿ ಕಲಿತವರು, ಅವರ ಸುತ್ತ ಕಾನುತ್ತಿದ್ದುದೆಲ್ಲವು ಮೌದ್ಫ್ಹ್!  ವಯಸ್ಕರಾಗಿ "ವಿಜ್ಞಾನವನ್ನು ಕಲಿತವರು ಬದುಕಿನುದ್ದಕ್ಕೂ ಇಂಥ ದ್ವಂದ್ವಕ್ಕೆ , ಗೊಂದಲಕ್ಕೆ ಒಳಗಾದ ವ್ಯಕ್ತಿಗಲಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. 

" ಬಾಲ್ಯವೆಂಬುದು  ವೈಜ್ಣಾನಿಕ ಮನೋಭಾವ ಬೆಳೆಸಲು ಅತ್ಯಂತ ಫಲವತ್ತಾದ, ಫಲಪ್ರದವಾಗಬಲ್ಲ ಕಾಲ. ಸಹಜವಾಗಿಯೇ ಪ್ರಯೋಗಶೀಲವಾಗಿರುವ, ವಿಜ್ಣಾನಿಯಾಗಿರುವ  ಮಗುವಿನ ಮೆದುಳಿಗೆ  'ಕಸ'ವನ್ನು ತುಂಬುವುದನ್ನು  ತಪ್ಪಿಸಿದರೆ, ಅಷ್ಟೇ ಸಾಕು. ಆ ಮಗು ವಯಸ್ಕನಾಗಿಯೂ ವಿಜ್ಣಾನಿಯಾಗಿಯೇ ಉಳಿಯುತ್ತದೆ, ಬೆಳೆಯುತ್ತದೆ. 'ಪುಟಾಣಿ ವಿಜ್ಣಾನ' ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ."
-ಎಸ್.ಎಂ.ಶಶಿಧರ್
(Excerpts from the  speech of SM Shashidhar)





Thursday, April 12, 2012

ಪವಾಡ ರಹಸ್ಯ ಬಯಲು ತರಬೇತಿಗೆ ಆಹ್ವಾನ





ಪ್ರಿಯ ಗೆಳೆಯರೇ,

ಸಮಾಜವನ್ನು ಒಂದಿಲ್ಲ ಒಂದು ರೀತಿಯಲ್ಲಿ ಕಾಡುತ್ತಿರುವ ಮೌಢ್ಯವು ಜನರ ಪ್ರಗತಿಗೆ ಮಾರಕವಾಗಿದೆ.ಜನರು ತಮಗೆ ಅರಿವಿಲ್ಲದಂತೆಯೇ ಮೌಢ್ಯಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಅರಿವು, ಕಾಯ್ರಕ್ರಮಗಳು ಹಾಗೂ ಪ್ರಚಾರ ದೊರೆಯುತ್ತಿದ್ದರೂ ಮೌಢ್ಯವನ್ನು ಬಿತ್ತುವವರ ಸಂಖ್ಯೆಯೂ ಹೆಚ್ಚುತ್ತಿರುವುದು ವಿಷಾದನೀಯ. ಪ್ರಮುಖವಾಗಿ ಜ್ಯೋತಿಷಿಗಳು ಇಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿಕೊಂಡು ಪ್ರತಿ ದಿನ ಜನರಿಗೆ ತಪ್ಪು ಸಂದೇಶವನ್ನು ಕೊಡುತ್ತಲೇ ಬರುತ್ತಿದ್ದಾರೆ.

ಪವಾಡ ರಹಸ್ಯ ಬಯಲು, ವಿಚಾರವಾದಿ ಸಮಾವೇಶ, ವಿಚಾರ ಸಂಕಿರಣಗಳು, ಜಾಥಾಗಳು ಹಾಗೂ ಪುಸ್ತಕ ಮಾರಾಟದ ಮೂಲಕ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳು  ವೈಜ್ಣಾನಿಕ ಚಿಂತನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಇಂಥ ಪ್ರಯತ್ನಗಳು ಹೊಸ ಹೊಸ ಅನ್ವೇಷಣೆಗಳ ಮೂಲಕ ಜನರನ್ನು ತಲುಪುವ ಕೆಲಸ ನಿರಂತರವಾಗಿ ಆಗಬೇಕಾಗಿದೆ.

ಈ ಹಿನ್ನೆಲೆಯಲ್ಲಿ ವೈಜ್ಣಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗಾಗಿ ಪವಾಡ ರಹಸ್ಯ ಬಯಲು ತರಬೇತಿಯನ್ನು  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ,  ಕರ್ನಾಟಕ  ರಾಜ್ಯ  ವಿಜ್ಞಾನ ಪರಿಷತ್ ಮಂಡ್ಯ ಜಿಲ್ಲಾ ಸಮಿತಿ ಹಾಗೂ   ವಿಜ್ಞಾನ ಮತ್ತು ಅಭಿವೃದ್ಧಿ ಕೇಂದ್ರಗಳು ಜಂಟಿಯಾಗಿ ಸಂಘಟಿಸುತ್ತಿವೆ.

ಮೇ ತಿಂಗಳ 10, 11 ಮತ್ತು 12 ರಂದು ಮಂಡ್ಯದಲ್ಲಿ ನಡೆಯಲಿರುವ ಈ ತರಬೇತಿಯಲ್ಲಿ ಖ್ಯಾತ ವಿಚಾರವಾದಿಗಳೂ ರಾಷ್ಟ್ರದಾದ್ಯಂತ ಪವಾಡರಹಸ್ಯ ಬಯಲು ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ತೊಡಗಿಸಿಕೊಂಡಿರುವ ಪ್ರೊ.ನರೇಂದ್ರನಾಯಕ್, ವಿಚಾರವಾದಿಗಳ ಸಂಘಟನೆಯ ಪ್ರೊ.ಎ.ಎಸ್.ನಟರಾಜ್, ಖ್ಯಾತ ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಮುಂತಾದವರು ಪ್ರಾತ್ಯಕ್ಷಿಕೆ ಹಾಗೂ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ರಾತ್ರಿ ಆಕಾಶ ವೀಕ್ಷಣೆ ಮತ್ತು ಜೂನ್ 6 ರಂದು ಸಂಭವಿಸಲಿರುವ ಶುಕ್ರ ಸಂಕ್ರಮದ ಕುರಿತು ಉಪನ್ಯಾಸ ನಡೆಯಲಿದೆ.

ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ತಮ್ಮ ಪ್ರಯಾಣ ವೆಚ್ಚವನ್ನು ಭರಿಸಿಕೊಂಡು ಭಾಗವಹಿಸಬೇಕಾಗುತ್ತದೆ. ಶಿಬಿರಾರ್ಥಿಗಳಿಗೆ ಆಹಾರ ಹಾಗೂ ಸರಳ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಆಸಕ್ತರು ದಿನಾಂಕ 30.04.2012ರೊಳಗೆ ಸಿ.ಕೃಷ್ಣೇಗೌಡ, ಉಪನ್ಯಾಸಕರು, ನಂಜುಶ್ರೀ ನಿಲಯ, ಮನೆ ನಂ.365/7-ಎನ್-21, ದುರ್ಗಾದೇವಿ ಟೆಂಪಲ್ ರಸ್ತೆ, ನಜರಾಬಾದ್, ಮೈಸೂರು-10  ವೊ:8453503018 ಇವರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವುದು. 

         

ಚಿತ್ರ ಕೃಪೆ: ಕಣಜ ಅಂತರಜಾಲ ಕನ್ನಡ ಜ್ಞಾನಕೋಶ

Monday, April 2, 2012

Membership/ ಸದಸ್ಯತ್ವ

ಸದಸ್ಯತ್ವ ರಸೀದಿ
ಸದಸ್ಯತ್ವ ರಸೀದಿ ಪುಸ್ತಕ ತಮಗೆ  ತಲುಪದೇ ಇದ್ದಲ್ಲಿ,
 ಇಲ್ಲಿರುವ ರಸೀದಿಯ ಮಾದರಿಯನ್ನು ಮುದ್ರಿಸಿ, ತಮ್ಮ ವಿವರಗಳನ್ನು ತುಂಬಿ,
 ಬೆಂಗಳೂರು ಕೇಂದ್ರ ಕಚೇರಿಗೆ ಸದಸ್ಯತ್ವ ಶುಲ್ಕ ದೊಂದಿಗೆ ಕಳಿಸಿಕೊಡಬಹುದು.

For those who have not received the membership books: Save the above Membership form image to your computer,  take a print out, fill in the form and send this to head office along with the membership fee.