Saturday, June 23, 2012

ಸದಸ್ಯತ್ವ ನೋಂದಣಿ ಆಂದೋಲನ ಜೂನ್ ೨೪ ರಿಂದ ೩೦


                           ಸದಸ್ಯತ್ವ ನೋಂದಣಿ ಆಂದೋಲನ ಜೂನ್ ೨೪ ರಿಂದ ೩೦ 

ರಾಜ್ಯದ ಜನಸಮುದಾಯದಲ್ಲಿ ವಿಜ್ಞಾನ, ವೈಜ್ಞಾನಿಕ ಚಿಂತನೆ, ಸಾರ್ವತ್ರಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ಕುರಿತಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜೂನ್ ೨೪ ರಿಂದ ೩೦ ರ ವರೆಗೆ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕೈಗೊಂಡಿದೆ. ಸಮಿತಿಯ ಉದ್ದೇಶಗಳನ್ನು ಒಪ್ಪುವ ಹಾಗೂ ಜನಸಮೂಹದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲು ಕಾರ್ಯಕರ್ತರಾಗಿ ಕೆಲಸ ಮಾಡಲು ಇಚ್ಚಿಸುವ ಎಲ್ಲರೂ  ಸದಸ್ಯರಾಗಲು ಸಮಿತಿ ಮನವಿ ಮಾಡಿದೆ. ಸಮಿತಿಯ ಎಲ್ಲ ಘಟಕಗಳೂ ರಾಜ್ಯದಾದ್ಯಂತ ಈ ಒಂದು ವಾರದ ಅವಧಿಯಲ್ಲಿ ಮನೆಮನೆಗೆ, ಕಛೇರಿಗಳಿಗೆ, ಶಾಲೆಗಳಿಗೆ ತೆರಳಿ ಸದಸ್ಯರನ್ನು ನೋಂದಾಯಿಸಲಿದ್ದಾರೆ. ಕೆಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಿ ಗಣ್ಯರಿಂದ ಸದಸ್ಯತ್ವ ಪಡೆಯುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗುತ್ತಿದೆ.  ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಪಾಳ್ಯದಲ್ಲಿ ೨೪.೦೬.೨೦೧೨ರಂದು ಬೆಳಿಗ್ಗೆ ೧೦ಕ್ಕೆ ಗಿಡ ನೆಡುವ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ರಾಜ್ಯ ಪದಾಧಿಕಾರಿಗಳು ಚಾಲನೆ ನೀಡಲಿದ್ದಾರೆ. 

ಇದೇ ಜೂನ್ ೬ ರಂದು ಸಂಭವಿಸಿದ ಶುಕ್ರ ಸಂಕ್ರಮ ವೀಕ್ಷಣೆ ಹಾಗೂ ಅದಕ್ಕೆ ಪೂರಕವಾಗಿ ಸಮಿತಿ ಹತ್ತಾರು ಕಾರ್ಯಾಗಾರಗಳನ್ನು ಸಂಘಟಿಸಿದ್ದು ಇಡೀ ಪ್ರಕ್ರಿಯೆಯಲ್ಲಿ ಸುಮಾರು ಒಂದು ಲಕ್ಷ ಜನರನ್ನು ಮುಟ್ಟಲಾಗಿದೆ. 

ಸದಸ್ಯರಾಗಬಯಸುವವರು ಸಮಿತಿಯನ್ನು ನೇರವಾಗಿ ಸಮಪರ್ಕಿಸಬಹುದಾಗಿದೆ. 
ಸದಸ್ಯತ್ವ ಶುಲ್ಕ ೧೦೦ರೂಗಳಾಗಿದ್ದು ಸದಸ್ಯರಾದವರಿಗೆ ಸಮಿತಿಯ ಪತ್ರಿಕೆ ಕೆಜೆವಿಎಸ್ ನ್ಯೂಸ್ ಅನ್ನು ಪ್ರತಿ ತಿಂಗಳೂ ಕಳಿಸಲಾಗುವುದು ಜೊತೆಗೆ ಸಮಿತಿ ಪ್ರಕಟಿಸುವ ಪುಸ್ತಕಗಳ ಮೇಲೆ ಶೇ.೨೦ರ ರಿಯಾಯ್ತಿ ನೀಡಲಾಗುವುದು.
ಸಂಪರ್ಕ ವಿಳಾಸ: ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ೪ನೇ ಮುಖ್ಯ ರಸ್ತೆ, ರುಕ್ಮಿಣಿನಗರ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩. ದೂರವಾಣಿ: ೯೪೪೮೯೫೭೬೬೬.

ಈ.ಬಸವರಾಜು
ಕಾರ್ಯದರ್ಶಿ

Friday, June 22, 2012

Dr H.S.N.felicitation function



People Science movement Actvists at Dr H.S.N.felicitation function — with Madhusudana Rao, Mallikarjun Kenkere, c.yathiraju, Nithya Nanda, Syed Mujeeb Ahamed, Dr.H.S.N, K. V. Subbanna, tiger.b.umesh, tumkur nagabhushan, E Basavaraju Eregowda, ananda murthy, c.vishvanath and Akkamma Cherian.

Thursday, June 14, 2012

ಡಾ. ನಿರಂಜನಾರಾಧ್ಯ ಅಭಿನಂದನಾ ಸಮಾರಂಭ


ಪ್ರಿಯರೆ,
ಡಾ. ನಿರಂಜನಾರಧ್ಯ ನಿಮಗೂ ಪರಿಚಯ ಇರಬಬಹುದು. ಈಗ ಕ ರಾ ವಿ ಪ ರಾಜ್ಯ ಅಧ್ಯಕ್ಷರಾಗಿದ್ದಾರೆ. ಇವರು ಸೇವೆಯಿಂದ ನಿವೃತ್ತರಾಗಿದ್ದು ಒಂದು ಅಭಿನಂದನಾ ಸಂಚಿಕೆಯನ್ನು ತಂದು ಅದನ್ನು 16 .06 .2012  ರ ಶನಿವಾರದಂದು ಬಿಡುಗಡೆ ಮಾಡಲಾಗುತ್ತಿದೆ. ಸಮಯ ಸಿಕ್ಕರೆ ನೀವು ಬನ್ನಿ. ಆಹ್ವಾನ ಪತ್ಫ್ರಿಕೆಯನ್ನು ಲಗತ್ತಿಸಿದೆ.
ಇತಿ
ಈ.ಬಿ

E.BASAVARAJU
Secretary
Karnataka Jnana Vijnana Samithi(KJVS)
No.38/1, 1st cross, 4th main, Rukmininagar
Nagasandra post, Bangalore-560073
Ph: 080-28371702, Mob: 9448957666

Thursday, June 7, 2012

ನಿರೀಕ್ಷೆ ಹುಸಿ ಮಾಡದ ಶುಕ್ರ ಸಂಕ್ರಮ -EB

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ನಿರೀಕ್ಷೆ ಹುಸಿ ಮಾಡದ ಶುಕ್ರ ಸಂಕ್ರಮ

ನಿನ್ನೆ ಪ್ರಾರಂಭವಾದ ಮುಂಗಾರು ಮಳೆ ಹಾಗೂ ರಾತ್ರಿ ಕವಿದ ಮೋಡಗಳು ಶುಕ್ರ ಸಂಕ್ರಮ ವೀಕ್ಷಣೆ ಸಾಧ್ಯವೋ, ಇಲ್ಲವೋ ಎಂಬ ಅನುಮಾನ ಹುಟ್ಟಿಸಿತ್ತು. ಆದರೆ ಬೆಳಿಗ್ಗೆ ಎಂಟು ಗಂಟೆಯ ನಂತರ ಚಲಿಸುವ ಮೋಡಗಳು ಒಮ್ಮೆ ಸೂರ್ಯನನ್ನು ಮುಚ್ಚಿದರೆ ಒಮ್ಮೆ ವೀಕ್ಷಕರಿಗೆ ನಿರಾಸೆಯಾಗದಂತೆ  ಮುಂದೆ ಚಲಿಸುವ ಮೂಲಕ ಶುಕ್ರನನ್ನು ನೋಡಲು ಅವಕಾಶ ಮಾಡಿಕೊಟ್ಟವು. ಚಲಿಸುವ ಮೋಡಗಳ ಅರ್ಥ ನಿಜವಾಗಿ ಇಲ್ಲಿ ಅನುಭವವಾಯಿತು ಎನ್ನಬಹುದು. ಹೀಗಾಗಿ ಶತಮಾನದ ಕಡೆಯ ಶುಕ್ರ ಸಂಕ್ರಮ ವನ್ನು ವೀಕ್ಷಿಸಿ ಜನರು ಪುಳಕಿತರಾದರು. ಸಂಘಟಕರ ಶ್ರಮವೂ ಸಾರ್ಥಕವಾಯಿತು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಸಂಸ್ಥೆಗಳು ಕರಾವಿಪ ಬೆಂಗಳೂರು ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ಅಭಿವೃದ್ದಿ ಕೇಂದ್ರ, ಅಪ್ನಾದೇಶ್ ಅಸೋಸಿಯೇಷನ್ ಸಂಸ್ಥೆಗಳೊಂದಿಗೆ ಜಂಟಿಯಾಗಿ ಬೆಂಗಳೂರಿನ ಲಾಲ್‌ಭಾಗ್ ಗೊಪುರದ ಬಂಡೆಯ ಮೇಲೆ ಏರ್ಪಡಿಸಿದ್ದ ವೀಕ್ಷಣಾ ಕಾಂiiಕ್ರಮಕ್ಕೆ ಸಂಘಟಕರಿಗಿಂತ ಮೊದಲೇ ಸಾರ್ವಜನಿಕರು ಆಗಮಿಸಿದ್ದು ಜನರಿಗಿರುವ ಕುತೂಹಲ ಹಾಗೂ ಆಸಕ್ತಿಯನ್ನು ಪ್ರದರ್ಶಿಸಿತು. ಆರು ವಿವಿಧ ರೀತಿಯ ದೂರದರ್ಶಕಗಳನ್ನು ವ್ಯವಸ್ಥೆಗೊಳಿಸಿ ಸುಂದರ ಶುಕ್ರ ಸಂಕ್ರಮವನ್ನು ನೋಡಲು ಅವಕಾಶ ಮಾಡಲಾಗಿತ್ತು. ಇದರ ಜೊತೆಗೆ ನೇರವಾಗಿ ವೀಕ್ಷಿಸಲು ಸೋಲಾರ್ ಕನ್ನಡಕಗಳು ಹಾಗೂ ಪುಸ್ತಕ ಮಾರಾಟವನ್ನು ಏರ್ಪಡಿಸಲಾಗಿತ್ತು. ಇಂಥ ಸಂದರ್ಭದಲ್ಲಿ ಇರುವ ಮೌಢ್ಯವನ್ನು ಹೋಗಲಾಡಿಲು ಉಪಹಾರ ಗೋಷ್ಠಿಯನ್ನು ಏರ್ಪಡಿಸಿ ಆಗಮಿಸಿದ್ದ ಎಲ್ಲರಿಗೂ ಉಪ್ಪಿಟ್ಟು, ಕೇಸರಿ ಬಾತ್ ಅನ್ನು ವಿತರಿಸಲಾಯ್ತು.

ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್.ನಾಗರಾಜು ಅವರು ಶುಕ್ರ ಸಂಕ್ರಮ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು. ಶುಕ್ರ ಸಂಕ್ರಮ ಫೋಟೋ ತೆಗೆಯುವವರಿಗೂ ಅನುಕೂಲವನ್ನು ಮಾಡಿಕೊಡಲಾಗಿತ್ತು. ಇನ್ನೇನು ಮೋಡ ಕವಿಯಿತು, ನೋಡಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದಂತೆ ತಕ್ಷಣ ಸೂರ್ಯನು ಗೋಚರಿಸಿ ವೀಕ್ಷಣೆಗೆ ಸಾಧ್ಯವಾಗುತ್ತಿತ್ತು. ಹಾಗಾಗಿ ಮೂರು ಹಾಗೂ ನಾಲ್ಕನೇ ಸಂಪರ್ಕ(ಕಾಂಟ್ಯಾಕ್ಟ್ಸ್) ಕೂಡ ನೋಡಲು ಸಾಧ್ಯವಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಉಪಾಧ್ಯಕ್ಷರಾದ ಈ.ನಂಜಪ್ಪ, ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿಯ ನವೀನ್ ನಂಜುಂಡಪ್ಪ  ಹಾಗೂ ಅನೇಕ ಕಾರ್ಯಕರ್ತರು ಉತ್ಸಾಹದಿಂದ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಚಿಕ್ಕಬಳ್ಳಾಪುರದ ಸೀಮಂಗಲದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರಿ ನಾಗೇಶ್ ಹೆಗ್ಡೆಯವರು ಅದನ್ನು ಉದ್ಘಾಟಿಸಿ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸುತ್ತಮುತ್ತಲ ೧೦ ಗ್ರಾಮಗಳಿಂದ ಜನರು ಆಗಮಿಸಿದ್ದರು. ಧಾರವಾಡದ ಕಡಪ ಮೈದಾನ, ತುಮಕೂರಿನ ಎಂ.ಜಿ. ಸ್ಟೇಡಿಯಂ, ಹಾಸನದ ಹೈಸ್ಕೂಲ್ ಮೈದಾನ, ಹೊಸಪೇಟೆಯ ತಾಲೂಕು ಕ್ರೀಡಾಂಗಣ, ಪಿ.ಡಿ.ಐ.ಟಿ ಇಂಜಿನೀಯರಿಂಗ್ ಕಾಲೇಜು ಆವರಣ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ವೀಕ್ಷಣಾ ವ್ಯವಸ್ಥೆ ಮಾಡಿದ್ದು ಎಲ್ಲ ಕಡೆ ಶುಕ್ರಸಂಕ್ರಮ ನೋಡಲು ಸಾಧ್ಯವಾಗಿರುತ್ತದೆ ಎಂದು ಈ.ಬಸವರಾಜು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಸುಮಾರು ೧೦೦ ಕಾರ್ಯಾಗಾರಗಳನ್ನು ಸಂಘಟಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ಎಂಟು ಸಾವಿರ ಸೌರ ಕನ್ನಡಕಗಳು ಹಾಗೂ ೫೦೦೦ ಶುಕ್ರ ಸಂಕ್ರಮ ಪುಸ್ತಕಗಳನ್ನು ಸುಲಭ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು. ಸುರಕ್ಷಿತ ಕನ್ನಡಕಗಳ ಬಗ್ಗೆ ಹಾಗೂ ಶುಕ್ರ ಸಂಕ್ರಮದ ಮಾಹಿತಿ ಕೇಳಿ ನಿನ್ನೆ ಮುಂಜಾನೆಯಿಂದ ರಾತ್ರಿ ೧೨ ರ ವರೆಗೆ ಹಾಗೂ ಇಂದು ಬೆಳಿಗ್ಗೆ ೫ ಗಂಟೆಯಿಂದ ಹತ್ತರ ವರೆಗೆ ಸಾರ್ವಜನಿಕರ ದೂರವಾಣಿ ಕರೆಗಳು ಎಷ್ಟಿದ್ದವೆಂದರೆ ಕರೆಗಳನ್ನು ಸ್ವೀಕರಿಸುದೇ ಕಷ್ಟವಾಗಿ ಹೋಗಿತ್ತು.

ಮುಂದಿನ ಶುಕ್ರ ಸಂಕ್ರಮವನ್ನು ಈಗ ಬದುಕಿರುವವರು ನೋಡಲು ಸಾಧ್ಯವಿಲ್ಲದಿದ್ದರೂ ಈ ಶುಕ್ರ ಸಂಕ್ರಮ ಉಂಟು ಮಾಡಿರುವ ಉತ್ಸಾಹದಿಂದಾಗಿ ಮುಂದಿನ ದಿನಗಳಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಜನ ಸಾಮಾನ್ಯರ ನಡುವೆ ಖಗೋಳಾಸಕ್ತಿ ಮೂಡಿಸುವ ಅನೇಕ ಚಟುವಟಿಕೆಗಳನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿಗಳು ಸಂಘಟಿಸಲಿವೆ.

ಈ.ಬಸವರಾಜು
ಕಾರ್ಯದರ್ಶಿ

ToV 2012 at Lalbagh by BAS & KJVS

ToV 2012 at Lalbagh by BAS & KJVS

BAS and KJVS conducted a public outreach event to view the transit of venus at Lal Bagh today, 
We were present at the venue before the sunrise itself, but due to clouds, the observations could not begin till 7AM.  After that, Sun played hide and seek behind the clouds till the end of ToV. 

The crowd response was amazing. There were more than 500 people who saw the transit. 

Thanks to all BAS and KJVS volunteers for their great support.

Here are some photos of the transit and the crowd. 


  
  
   
    
  
  
    
  
  



         Transit of Venus did not disappoint the masses
There was an environment that it may not be possible to watch transit of Venus this time because of monsoon clouds. But there was no disappointment. Even though there was clouds up to 8am, the clouds cleared the sun after that. This made people to watch the last transit of Venus of the century.
Karnataka Jnana Vijnana Samithi (KJVS) and Bangalore Astronomical society(BAS) has conducted many workshops to involve public and students in the event. There was very good response. Six different types of telescopes were arranged at lalbag for safe and meaningful view of the transit. Upma and kesaribath was served to all the public to educate public that nothing will happen to food during eclipses and transits. Prof.M.R.Nagaraj addressed the public and answered their querry on transit. People kept on coming till the last contact at 10.25   and people could see the last contact. Along with telescopes solar filters and books were arranged for sales. Mr.Naveen Nanjundappa, Vice President, BAS and E.Basavaraju, Secretary, KJVS coordinated the event.
Similar program was organised by KJVS in M.G.Stadium, Tumkur, Kadapa maidhan in Dharwar, Municiple ground in Hospet, High school ground in Hassan and in others centers.
Both KJVS and Bangalore astronomical society has decided to continue the spirit evolved during this process by organising workshops related to astronomy in future.

E.Basavaraju
Secretary
Karnataka Jnan Vijnana Samithi.

ಶುಕ್ರ ಸಂಕ್ರಮ ವೀಕ್ಷಿಸಿದ ವಿದ್ಯಾರ್ಥಿಗಳು

ಶುಕ್ರ ಸಂಕ್ರಮಣ ವೀಕ್ಷಿಸಿದ ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ.

ಶುಕ್ರ ಸಂಕ್ರಮಣದ ಖಗೋಳ ವಿಸ್ಮಯವನ್ನು ತಾಲೂಕಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ನಾಗರಿಕರು ಬುಧವಾರ ಬೆಳಗ್ಗೆ ವೀಕ್ಷಿಸಿದರು.
ಯಾವತ್ತಿಗೂ ಬೆಳ್ಳಿ ಚುಕ್ಕೆಯಾಗಿ ಮಿಂಚುವ ಶುಕ್ರ ಇಂದು ಕಪ್ಪುಚುಕ್ಕೆಯಾಗಿ ಸೂರ್ಯನ ಪ್ರಖರ ಬೆಳಕಿನ ಬೆಳ್ಳಿ ತಟ್ಟೆಯಲ್ಲಿ ಶುಕ್ರನು ಬಟಾಣಿ ಕಾಳಿನಂತೆ ಮಂದಗತಿಯಲ್ಲಿ ಚಲಿಸಿದನ್ನು ಕಂಡು ನಾಗರಿಕರು ಬೆರಗಾದರು.

ಹೊಸಪೇಟೆಯ ವಿಜ್ಞಾನ ಹಾಗೂ ಖಗೋಳ ಆಸಕ್ತರಿಗೆ ಹಬ್ಬದ ವಾತಾವರಣ. ಮುಂಜಾವದಲ್ಲಿಯೇ ಲಗುಬಗೆಯಿಂದ ಸಂಕ್ರಮಣ ವೀಕ್ಷಿಸಲು ಅಲ್ಲಲ್ಲಿ ಗುಂಪು ಗುಂಪಾಗಿ ಬಂದಿದ್ದರು. ಆದರೆ, ಮೋಡ ಕವಿದಿದ್ದರಿಂದ ವೀಕ್ಷಣೆಗೆ ತೊಂದರೆಯಾಗುತ್ತಿತ್ತು. ಶುಕ್ರನ ಸಂಕ್ರಮಣ ನೋಡಿ ಜನರು ಕಣ್ತುಂಬಿ ನೋಡಿ ಜನರು ಸಂಭ್ರಮಪಟ್ಟರು.

ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಪ್ರೌಢದೇವರಾಯ ತಾಂತ್ರಿಕ ಕಾಲೇಜುಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವ್ಯವಸ್ಥೆ ಮಾಡಿತ್ತು. ಸುರಕ್ಷಿತ ಸೌರ ಶೋಧಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪೂರೈಸಿತು. ಎಲ್ಲರಿಗೂ ಕೈಗೆಟುಕುವ ರು. ೧೦ ಬೆಲೆಯ ಈ ಕನ್ನಡಕಗಳನ್ನು ಶಾಲಾ ಮಕ್ಕಳು ಖರೀದಿಸಿಕೊಂಡು ಸಂಕ್ರಮಣ ವೀಕ್ಷಿಸಿದರು.

ಈ ಶತಮಾನದ ಕೊನೆಯ ಖಗೋಳ ವಿಸ್ಮಯ ಇದಾಗಿದ್ದರಿಂದ ಸಾರ್ವಜನಿಕರು ವಿಶೇಷ ಶಿಬಿರಗಳು ಮತ್ತು ತಮ್ಮ ಮನೆಗಳ ಮೇಲೆ ನಿಂತು ವಿಶೇಷ ಸೌರ ಕನ್ನಡಕಗಳ ಮೂಲಕ ಸಂಕ್ರಮಣ ವೀಕ್ಷಿಸಿ ಸಂಭ್ರಮಿಸಿದರು.

KJVSನಿಂದ ಖಗೋಳ ಉತ್ಸವ -ಪ್ರಜಾವಾಣಿ ವರದಿ

ಶತಮಾನದ ಅಪರೂಪದ ಘಟನೆ :ಮೋಡಗಳ ಮಧ್ಯೆ ಇಣುಕಿದ ರವಿಗೆ `ಶುಕ್ರ'ದೆಸೆ

  • June 07, 2012


ಬೆಂಗಳೂರು: ಬೆಳ್ಳಂಬೆಳಗ್ಗೆಯೇ ಆಕಾಶದ ಕಡೆಗೆ ದೃಷ್ಟಿ ನೆಟ್ಟಿದ್ದ ಕಣ್ಣುಗಳು.. ಮೋಡಗಳ ನಡುವೆಯೂ ಇಣುಕುತ್ತಿದ್ದ ಸೂರ್ಯನನ್ನು ನೋಡಲು ಸಾಲು, ಸಾಲು.. ಚಲಿಸುವ ಮೋಡಗಳ ನಡುವೆಯೂ ಶುಕ್ರ ಸಂಕ್ರಮವನ್ನು ಕಣ್ತುಂಬಿಕೊಂಡು ಶತಮಾನದ ಅಪರೂಪದ ಘಟನೆಗೆ ಸಾಕ್ಷಿಯಾದ ಸಾವಿರಾರು ಜನ..

ಬುಧವಾರ ಆಕಾಶದಲ್ಲಿ ಸಂಭವಿಸಿದ ಶುಕ್ರ ಸಂಕ್ರಮವನ್ನು ನಗರದ ಜನತೆ ಕುತೂಹಲದಿಂದ ವೀಕ್ಷಿಸಿದರು. ಬೆಳಿಗ್ಗೆ ಆರು ಗಂಟೆಯಿಂದಲೇ ನಗರದ ವಿವಿಧ ಮೈದಾನಗಳಲ್ಲಿ ಸೇರಿದ್ದ ಜನರು ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು. ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಆಕಾಶಕ್ಕೆ ನೆಟ್ಟ ದೃಷ್ಟಿ ತೆಗೆಯದೇ ಜನರು ಶುಕ್ರ ಸಂಕ್ರಮವನ್ನು ಮನದಣಿಯೆ ನೋಡಿದರು.

ತಾರಾಲಯದಲ್ಲಿ ಜನರ ದಂಡು: ಶುಕ್ರ ಸಂಕ್ರಮದ ವೀಕ್ಷಣೆಗೆ ಚೌಡಯ್ಯ ರಸ್ತೆಯ ಜವಾಹರ್‌ಲಾಲ್ ನೆಹರೂ ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹಲವು ಬಗೆಯ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ಕನ್ನಡಕ (ಸನ್ ಫಿಲ್ಟರ್) ಮೂಲಕ ಜನರು ಸೂರ್ಯನನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಿಗ್ಗೆ ಆರು ಗಂಟೆಗೇ ತಾರಾಲಯದ ಆವರಣದಲ್ಲಿ ಸೇರಿದ್ದ ಜನರು ಆಸಕ್ತಿಯಿಂದ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು.

`ಬೆಳಗ್ಗೆಯಿಂದಲೇ ಜನರ ದಂಡು ತಾರಾಲಯದತ್ತ ಹರಿದು ಬಂತು. ಮೋಡಗಳಿದ್ದರೂ ಜನರ ಕುತೂಹಲ ಕಡಿಮೆಯಾಗಿರಲಿಲ್ಲ. ಸುಮಾರು ಒಂದು ಸಾವಿರ ಜನರು ಬುಧವಾರ ಸಂಭವಿಸಿದ ಶುಕ್ರ ಸಂಕ್ರಮವನ್ನು ತಾರಾಲಯದ ಆವರಣದಲ್ಲಿ ವೀಕ್ಷಿಸಿದರು. ಮೋಡಗಳ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ನೋಡಲಾಗದಿದ್ದರೂ, ಗೋಚರಿಸಿದಷ್ಟು ಶುಕ್ರ ಸಂಕ್ರಮವನ್ನು ಜನರು ಕಣ್ತುಂಬಿಕೊಂಡು ಕುತೂಹಲ ತಣಿಸಿಕೊಂಡರು` ಎಂದು ತಾರಾಲಯದ ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ ಹೇಳಿದರು.

`ಈ ಹಿಂದೆ 2004 ರಲ್ಲಿ ಶುಕ್ರ ಸಂಕ್ರಮ ನಡೆದಿದ್ದಾಗ ಘಟನೆಯನ್ನು ಪೂರ್ಣವಾಗಿ ಸಾರ್ವಜನಿಕರು ವೀಕ್ಷಿಸಿದ್ದರು. ಈ ಬಾರಿ ಮೋಡಗಳ ಕಾರಣದಿಂದ ಪೂರ್ಣವಾಗಿ ಶುಕ್ರ ಸಂಕ್ರಮವನ್ನು ನೋಡಲು ಸಾಧ್ಯವಾಗಲಿಲ್ಲ. ಇನ್ನು ಮುಂದಿನ ಶುಕ್ರ ಸಂಕ್ರಮ ನಡೆಯುವುದು 2117 ಕ್ಕೆ. ಆ ವೇಳೆಗೆ ನಾವ್ಯಾರೂ ಬದುಕುಳಿದಿರುವುದಿಲ್ಲ. ಈ ಶತಮಾನದ ಕೊನೆಯ ಶುಕ್ರ ಸಂಕ್ರಮದ ಪೂರ್ಣ ವೀಕ್ಷಣೆ ಸಾಧ್ಯವಾಗದೇ ಇದ್ದುದು ಜನರಲ್ಲಿ ಸ್ವಲ್ಪ ಮಟ್ಟಿಗೆ ಬೇಸರ ತರಿಸಿದೆ` ಎಂದು ಅವರು ತಿಳಿಸಿದರು.

ಲಾಲ್‌ಬಾಗ್‌ನಲ್ಲಿ ಆಕಾಶಕ್ಕೆ ಲಗ್ಗೆ : ಶುಕ್ರ ಸಂಕ್ರಮದ ವೀಕ್ಷಣೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ವತಿಯಿಂದ ಲಾಲ್‌ಬಾಗ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶುಕ್ರ ಸಂಕ್ರಮದ ವೀಕ್ಷಣೆಗಾಗಿ ಜನರು ಬೆಳಗ್ಗೆ ಆರು ಗಂಟೆಗೇ ಲಾಲ್‌ಬಾಗ್‌ನಲ್ಲಿ ಸೇರಿದ್ದರು. ಶುಕ್ರ ಸಂಕ್ರಮದ ವೀಕ್ಷಣೆಗಾಗಿ ಲಾಲ್‌ಬಾಗ್‌ನ ಗೋಪುರದ ಬಳಿ ಆರು ದೂರದರ್ಶಕ ಅಳವಡಿಸಲಾಗಿತ್ತು. ಜನರು ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ದೂರದರ್ಶಕಗಳ ಮೂಲಕ ಶುಕ್ರ ಸಂಕ್ರಮವನ್ನು ವೀಕ್ಷಿಸಿದರು.

ಜೊತೆಗೆ ನೇರವಾಗಿ ವಿಶೇಷ ಕನ್ನಡಕಗಳ ಮೂಲಕವೂ ಜನರು ಶುಕ್ರ ಸಂಕ್ರಮವನ್ನು ವೀಕ್ಷಿಸಿದರು. ಖಗೋಳ ಘಟನೆಗಳ ಬಗ್ಗೆ ಜನರಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಘಟನೆಯ ಸಮಯದಲ್ಲಿ ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ವೀಕ್ಷಣೆಗಾಗಿ ಬಂದಿದ್ದ ಸುಮಾರು ಐನೂರು ಜನರಿಗೆ ಉಪ್ಪಿಟ್ಟು ಹಾಗೂ ಕೇಸರಿಬಾತ್ ವಿತರಿಸಲಾಯಿತು. ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್.ನಾಗರಾಜು ಸ್ಥಳದಲ್ಲೇ ಇದ್ದು, ಶುಕ್ರ ಸಂಕ್ರಮ ವೀಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶುಕ್ರ ಸಂಕ್ರಮದ ಛಾಯಾಚಿತ್ರಗಳನ್ನು ತೆಗೆಯುವವರಿಗೂ ವಿಶೇಷ ಅನುಕೂಲ ಕಲ್ಪಿಸಲಾಗಿತ್ತು.

                 ಸಂಕ್ರಮಕ್ಕೆ ಅಡ್ಡಿಯಾದ ಚಲಿಸುವ ಮೋಡಗಳು...
ಶುಕ್ರ ಸಂಕ್ರಮದ ವೀಕ್ಷಣೆಯಲ್ಲಿ ತೊಡಗಿದ್ದ ನೋಡುಗರ ಕುತೂಹಲಕ್ಕೆ ತಣ್ಣೀರೆರೆಚುವ ಪ್ರಯತ್ನದಲ್ಲಿ ಬುಧವಾರ ಮೋಡಗಳು ತೊಡಗಿದ್ದವು. ಬೆಳಿಗ್ಗೆಯಿಂದಲೇ ದಟ್ಟ ಮೋಡಗಳು ಆಕಾಶದಲ್ಲಿ ಹರಿದಾಡುತ್ತಿದ್ದವು.

ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಮೋಡಗಳ ಚಲನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಎಂಟು ಗಂಟೆಯ ಹೊತ್ತಿಗೆ ಪುನಃ ದಟ್ಟ ಮೋಡಗಳು ಸೂರ್ಯನಿಗೆ ಅಡ್ಡಗಟ್ಟಿ ನಿಂತವು. ಒಂಬತ್ತು ಗಂಟೆಯ ನಂತರ ಚದುರಿದಂತೆ ಮೋಡಗಳ ಚಲನೆ ಇದ್ದುದರಿಂದ ಅಂತಿಮ ಕ್ಷಣಗಳ ಶುಕ್ರ ಸಂಕ್ರಮದ ವೀಕ್ಷಣೆ ಸ್ವಲ್ಪ ಮಟ್ಟಿಗೆ ಸಾಧ್ಯವಾಯಿತು.

`ಮೋಡಗಳ ಹಾವಳಿ ಇದ್ದರೂ, ಶುಕ್ರ ಸಂಕ್ರಮದ ವೀಕ್ಷಣೆಗೆ ಹೆಚ್ಚೇನೂ ತೊಂದರೆಯಾಗಲಿಲ್ಲ. ಮೋಡಗಳು ಹರಿದಾಡುತ್ತಿರುವಂತೇ ಈ ವಿಶೇಷ ಘಟನೆಯನ್ನು ವೀಕ್ಷಿಸಿದ್ದು ಒಂದು ವಿಶಿಷ್ಟ ಅನುಭವ. ಮೋಡಗಳ ಕಾರಣದಿಂದ ಸಾರ್ವಜನಿಕರಿಗೆ ಶುಕ್ರ ಸಂಕ್ರಮದ ವೀಕ್ಷಣೆಯಲ್ಲಿ ಹೆಚ್ಚಿನ ನಿರಾಸೆ ಏನೂ ಆಗಲಿಲ್ಲ` ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ.ಬಸವರಾಜು ತಿಳಿಸಿದರು.


 
ಬುಧವಾರ ಸಂಭವಿಸಿದ ಶುಕ್ರ ಸಂಕ್ರಮದ ದೃಶ್ಯ ನಗರದ ಜವಾಹರ್‌ಲಾಲ್ ನೆಹರೂ ತಾರಾಲಯದ ದೂರದರ್ಶಕದಲ್ಲಿ ಕಂಡು ಬಂದದ್ದು ಹೀಗೆ

ಹಲವೆಡೆ ವಿಶೇಷ ಅವಕಾಶ : ಶುಕ್ರ ಸಂಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲವಾಗಲು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ನಗರದ ಹಲವೆಡೆ ಅವಕಾಶ ಮಾಡಲಾಗಿತ್ತು. ನ್ಯಾಷನಲ್ ಕಾಲೇಜು ಮೈದಾನ, ಸ್ಯಾಂಕಿ ಕೆರೆ ಉದ್ಯಾನವನ, ಮತ್ತಿಕೆರೆಯ ಜೆ.ಪಿ. ಉದ್ಯಾನ, ಆರ್.ಟಿ.ನಗರದ ಎಚ್.ಎಂ.ಟಿ ಮೈದಾನ, ನಂದಿನಿ ಲೇಔಟ್ ಉದ್ಯಾನವನ, ರಾಜಾಜಿನಗರದ ಆರ್.ಪಿ.ಏ ಮೈದಾನ, ಕೆಂಗೇರಿ ಉಪನಗರ ಗ್ರಂಥಾಲಯದ ಎದುರು ಮತ್ತಿತರ ಕಡೆಗಳಲ್ಲಿ ಶುಕ್ರ ಸಂಕ್ರಮಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಕಡೆಗಳಲ್ಲೂ ಘಟನೆಯ ವೀಕ್ಷಣೆಗಾಗಿ ದೂರದರ್ಶಕಗಳ ವ್ಯವಸ್ಥೆ ಮಾಡಲಾಗಿತ್ತು.

`ಸಂಸ್ಥೆಯ ವತಿಯಿಂದ ನಗರದ 17 ಕಡೆಗಳಲ್ಲಿ ಶುಕ್ರ ಸಂಕ್ರಮದ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಸುಮಾರು ನಾಲ್ಕು ಸಾವಿರ ಜನರು ಶುಕ್ರ ಸಂಕ್ರಮವನ್ನು ವೀಕ್ಷಿಸಿದ್ದಾರೆ. ಬಸವೇಶ್ವರ ನಗರದ ಬಸವೇಶ್ವರ ಪಬ್ಲಿಕ್ ಶಾಲೆ, ರಾಜಾಜಿನಗರದ ಪೇರೆಂಟ್ಸ್ ಅಸೋಸಿಯೇಷನ್ ಶಾಲೆ ಹಾಗೂ ಪೀಣ್ಯದ ಐಟಿಐ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶುಕ್ರ ಸಂಕ್ರಮದ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ಶುಕ್ರ ಸಂಕ್ರಮದ ವೀಕ್ಷಣೆಗೆ ಮಾಡಿದ್ದ ವಿಶೇಷ ವ್ಯವಸ್ಥೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ` ಎಂದು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ರಾಜ್ಯ ಸಂಚಾಲಕ ಜಿ.ಸತೀಶ್ ಕುಮಾರ್ ಹೇಳಿದರು.

`ಇದೇ ಮೊದಲ ಬಾರಿಗೆ ಶುಕ್ರ ಸಂಕ್ರಮ ನೋಡಿ ಪುಳಕಗೊಂಡೆ. ಸೂರ್ಯನ ಮುಂದೆ ಕಪ್ಪು ಚುಕ್ಕೆಯೊಂದು ಹಾದು ಹೋದಂತೆ ಕಾಣುವ ಘಟನೆಯನ್ನು ನೋಡಿದ್ದು ವಿಶೇಷ ಅನುಭವ. ಮೋಡಗಳಿದ್ದರೂ ವೀಕ್ಷಣೆಗೆ ಹೆಚ್ಚಿನ ಅಡ್ಡಿಯೇನೂ ಆಗಲಿಲ್ಲ. ಮೋಡದ ಮರೆಯಲ್ಲೂ ಸೂರ್ಯನ ಮೇಲಿಂದ ಹಾದುಹೋದ ಚುಕ್ಕೆಯಾಕಾರದ ಶುಕ್ರನನ್ನು ಕಣ್ತುಂಬಿಕೊಂಡೆ` ಎಂದಿದ್ದು ರಾಜಾಜಿನಗರದ  ಕರುಣಾಕರ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ನಗರದ ಹೊಸೂರು ರಸ್ತೆಯ ಸುಜನ ವಿದ್ಯಾಸಂಸ್ಥೆಯಲ್ಲಿ ಬುಧವಾರ ಶುಕ್ರ ಸಂಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಖಗೋಳ ಘಟನೆಗಳು ಮೌಢ್ಯಗಳಿಗೆ ಕಾರಣವಾಗದೇ ಉತ್ಸವಗಳಾಗಿ ಬದಲಾಗಬೇಕು ಎಂಬ ಉದ್ದೇಶದಿಂದ ಜಾಗೃತಿ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಶಾಲೆಯ ನೂರಾರು ವಿದ್ಯಾರ್ಥಿಗಳು ಶುಕ್ರ ಸಂಕ್ರಮ ವನ್ನು ವೀಕ್ಷಿಸಿದರು. ಶಾಲೆಯ ಆಡಳಿತ ಮಂಡಳಿಯ ಆರ್. ಲೋಕೇಶ್, ಚನ್ನಕೇಶವ, ಎ.ಟಿ.ಅರಸು  ಉಪಸ್ಥಿತರಿದ್ದರು.

Wednesday, June 6, 2012

“ಬೆಳ್ಳಿ ತಟ್ಟೆಯಲ್ಲಿ ಬಟಾಣಿ ಕಾಳು...!”

ಶುಕ್ರ ಸಂಕ್ರಮಣ ವೀಕ್ಷಿಸಿದ ಹೊಸಪೇಟೆ ನಾಗರಿಕರು,
“ಬೆಳ್ಳಿ ತಟ್ಟೆಯಲ್ಲಿ ಬಟಾಣಿ ಕಾಳು...!”
ಹೊಸಪೇಟೆ  ಜೂನ್ ೬:
ಯಾವತ್ತಿಗೂ ಬೆಳ್ಳಿ ಚುಕ್ಕೆಯಾಗಿ ಮಿಂಚುವ ಶುಕ್ರ ಇಂದು ಕಪ್ಪುಚುಕ್ಕೆಯಾದನು. ಪ್ರಖರ ಸೂರ್ಯನ ಬೆಳ್ಳಿ ತಟ್ಟೆಯಲ್ಲಿ ಶುಕ್ರನು ಬಟಾಣಿ ಕಾಳಿನಂತೆ ಮಂದಗತಿಯಲ್ಲಿ ಚಲಿಸಿದನು.
ಇದು ಶುಕ್ರ ಸಂಕ್ರಮಣ. ಇದೊಂದು ಅಪೂರ್ವ ಸಂದರ್ಭ. ಈ ಶುಕ್ರ ಸಂಕ್ರಮಣ ಮತ್ತೆ ಸಂಭವಿಸುವುದು ೨೧೧೭ರಲ್ಲಿ. ಮುಂದಿನ ನಾಲ್ಕನೇ ತಲೆಮಾರು ಅದಕ್ಕೆ ಸಾಕ್ಷಿಯದೀತು.
ಹೊಸಪೇಟೆಯ ವಿಜ್ಞಾನ ಹಾಗೂ ಖಗೋಳ ಆಸಕ್ತರಿಗೆ ಹಬ್ಬದ ವಾತಾವರಣ. ಮುಂಜಾವದಲ್ಲಿಯೇ ಲಗುಬಗೆಯಿಂದ ಸಂಕ್ರಮ ವೀಕ್ಷಿಸಲು ಅಲ್ಲಲ್ಲಿ ನೆರೆದರು. ಆದರೆ ಮೋಡಗಳು ಸೂರ್ಯನಿಗೆ ಅಡ್ಡಲಾಗಿ ಕೋಟೆಯನ್ನೇ ಕಟ್ಟಿಬಿಟ್ಟಿದ್ದವು. ಸುಮಾರು ಒಂದು ತಾಸು ಕಾದರೂ ಕದಲದ ಮೋಡಗಳು. ಖಗೋಳಾಸಕ್ತರ ಪ್ರಾರ್ಥನೆಗೆ ಒಗೊಟ್ಟವೋ ಎಂಬಂತೆ  ಕ್ರಮೇಣ ಸೋತು ಸರಿದು ಹೋದವು. ಬಾನಲ್ಲಿ ಸೂರ್ಯ ಮತ್ತು ಶುಕ್ರರ ಅಪೂರ್ವ ಸಂಗಮವನ್ನು ಸಂಕ್ರಮವನ್ನು ನೋಡಿ ಜನರು ಕಣ್ತುಂಬಿ ಕೊಂಡರು. ಸಂಭ್ರಮ ಪಟ್ಟರು.
ಹೊಸಪೇಟೆಯ ಸರ್ಕಾರೀ ಪದವಿ ಪೂರ್ವ ಕಾಲೇಜು ಮೈದಾನ ಹಾಗು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ .ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವ್ಯವಸ್ಥೆ ಮಾಡಿತ್ತು. ಸುರಕ್ಷಿತ ಸೌರ ಶೋಧಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪೂರೈಸಿತು. ಎಲ್ಲರಿಗೂ ಕೈಗೆಟುಕುವ ೧೦ ರೂಪಾಯಿ ಬೆಲೆಯ ಈ ಕನ್ನಡಕಗಳನ್ನು ಶಾಲಾ ಮಕ್ಕಳು ಖರೀದಿಸಿಕೊಂಡು ಹೋದರು. ಅಪ್ಪ ಅಮ್ಮಂದಿರು ಮಕ್ಕಳನ್ನು ಶಿಬಿರಕ್ಕೆ ಕರೆತಂದು ಈ ವಿಷಯ ಇವರಿಗೆ ತಿಳಿಸಿರಿ ಎಂದು ವಿನಂತಿಸಿಕೊಂಡರು. ತಿಳಿಸಲೆಂದೇ ಕಾತರರಾಗಿ ಕುಳಿತ ಕೆ.ಜೆ.ವಿ.ಎಸ್.ಕಾರ್ಯಕರ್ತರು ಸಾಮಾನ್ಯ ಜನರಲ್ಲೂ ಇರುವ ವಿಜ್ಞಾನದ ಆಸಕ್ತಿ ಕಂಡು ನಿಬ್ಬೆರಗಾದರು. ಪುಳಕಿತಗೊಂಡರು.

ಚೆನ್ನಮ್ಮ ಎಂಬ ಗೃಹಿಣಿ ತನ್ನ ಇಬ್ಬರು ಮಕ್ಕಳೊಡನೆ ವೀಕ್ಷಣಾ ಶಿಬಿರಕ್ಕೆ ಬಂದರು. ಶಾಲೆಗೆ ಹೋಗುವ ಮುನ್ನ ತನ್ನ ಮಕ್ಕಳು ಈ ಸಂಕ್ರಮವನ್ನು ನೋಡಿಯೇ ಹೋಗಲಿ ಎಂಬುದು ಅವರ ಅಭಿಲಾಷೆ. ಪತ್ರಿಕೆ ಟೀವಿಗಳಲ್ಲಿ ಬಂದ ವರದಿಗಳಿಂದ ಆವರಲ್ಲಿ ಕುತೂಹಲ ಉಂಟಾಗಿತ್ತು. “ನಮ್ಮ ಜೀವನದಲ್ಲಿ ಇನ್ನೆಂದೂ ನೋಡಲಾಗದ ಈ ದೃಶ್ಯವನ್ನು ನಾವು ಮಿಸ್ ಮಾಡಿಕೊಳ್ಳಬಾರದೆಂದು ಬಂದೆವು” ಎಂದು ಹೇಳಿದಾಗ ಸಾರ್ಥಕ ನಗೆಯೊಂದು ಮಿಂಚಿತು.
 “ಶಾಲೆಯಲ್ಲಿ ಶಿಕ್ಷಕರು ಈ ಸಂಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕಿತ್ತು. ಮಾಡಿದಂತೆ ಕಾಣುತ್ತಿಲ್ಲ. ಅದಕ್ಕಾಗಿ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದೆವು” ಎಂದವರು ಕಿರಾಣಿ ವ್ಯಾಪಾರಿ ಪಂಪಾಪತಿ. “ಥ್ಯಾಂಕ್ಸ್ ಗಾಡ್, ಹೊಸಪೇಟೆಯಲ್ಲಿ  ನಿಮ್ಮಂಥವರೂ ಇದ್ದೀರಿ. ಈ ಘಟನೆಯನ್ನ ಹೇಗೆ ನೋಡುವುದು ಎಂದು ಚಿಂತಿತನಾಗಿದ್ದೆ. ಅಂತೂ ನಾವು ಮಿಸ್ ಮಾಡಿಕೊಳ್ಳಲಿಲ್ಲ’ ಅಂದವರು ಡಾ.ರವೀಂದ್ರ. ಖಗೊಳಕ್ಕೊಂದು ಕಿಟಕಿಯಾಗುವ ಸ್ಟೆಲ್ಲೇರಿಯಂ ತಂತ್ರಾಂಶವನ್ನೂ ಪಡೆದುಕೊಂಡು ಹೋದರು.
ವಿನುತ ಎಂಬ ವಿದ್ಯಾರ್ಥಿನಿ ಬೆಳಗಿನ ಶಾಲೆಗ ಚಕ್ಕರ್ ಹಾಕಿ ಸಂಕ್ರಮ ವೀಕ್ಷಿಸಿದಳು. ಸ್ಕೂಲ್ ಮಿಸ್ ಆಗಿದ್ದಕ್ಕೆ ಬೇಜಾರಿಲ್ವಾ ಎಂದು ಆಕೆಯ ತಾಯಿಯನ್ನು ಕೇಳಿದ್ದಕ್ಕೆ “ಇಂಥ ದೊಡ್ಡ ಘಟನೆಯನ್ನ ನೋಡಿದ್ದು ಮರೆಯಲಾಗದ ಅನುಭವ. ಈ ಮೈದಾನದಲ್ಲಿ  ಆಕಾಶ ಸೂರ್ಯ ಶುಕ್ರ ಇವರ ನಡುವೆ ಇವಳು  ಹೊಸತೇನನ್ನೋ ಕಲಿಯುತ್ತಾಳೆ. ಈ ಅನುಭವವೂ ಶೈಕ್ಷಣಿಕ ಮಹತ್ವದ್ದೇ ಅಲ್ವ” ಅಂದವರು ಕುಸುಮ ಮೇಡಂ, ಕಾಲೇಜಿನ ಅಧ್ಯಾಪಕಿ.
ವೀಕ್ಷಣ ಶಿಬಿರವನ್ನು ಆಯೋಜಿಸಿದ್ದವರಿಗೆ ಇದು ಕೇವಲ ಅಪರೂಪದ ದೃಶ್ಯ ಎಂಬುದಷ್ಟೇ ಮುಖ್ಯವಾಗಿರಲಿಲ್ಲ, ಈ ವಿದ್ಯಮಾನವು ವಿಶ್ವ ಹಾಗೂ ಈ ವಿಶ್ವದಲ್ಲಿ ನಮ್ಮ ಸ್ಥಾನ ಕುರಿತು ಚಿಂತನೆ ಹಾಗೂ ಶೋಧನೆಗಳಿಗೆ ಇಂಬು  ಕೊಡುತ್ತದೆ ಎಂಬುದಾಗಿತ್ತು. “ಖಗೋಳದ ವಿಸ್ಮಯಗಳನ್ನು ನಾವಿನ್ನೂ ಪೂರ್ಣ ಅರ್ಥ ಮಾಡಿಕೊಳ್ಳಲಾಗಿಲ್ಲವಾದರೂ ವಿಜ್ಞಾನದ ಮೂಲಕ ಅರಿಯಬಲ್ಲೆವು; ಹಾಗೂ ವಿಜ್ಞಾನ ಮಾತ್ರವೇ ವಿಶ್ವವನ್ನು ಅರಿಯುವ ಮಾರ್ಗ; ಈ ಘಟನೆಯ ನೆಪದಲ್ಲಿ ಜನರಲ್ಲಿರುವ ಮೂಢ ನಂಬಿಕೆಗಳು  ಕರಗಲಿ, ವೈಜ್ಞಾನಿಕ ಮನೋಭಾವ ಮೂಡಲಿ” ಎಂಬುದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಹ ಕಾರ್ಯದರ್ಶಿ ಎಸ್,ಎಂ.ಶಶಿಧರ ಅವರ ಆಶಯವಾಗಿತ್ತು.

ಹೊಸಪೇಟೆಯ ನಗರಸಭೆಯ ಕಮಿಷನರ್ ಅವರು ಕೆ.ಜೆ.ವಿಎಸ್. ವೀಕ್ಷಣ ಶಿಬಿರದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿದರು
 .



Transit of Venus Watching Camp at Hospet, Bellary District





Tuesday, June 5, 2012

`ಶುಕ್ರ ಸಂಕ್ರಮ: ಖಗೋಳ ಉತ್ಸವವಾಗಿಸಿ' - ಇ.ಬಸವರಾಜು

logo



`ಶುಕ್ರ ಸಂಕ್ರಮ: ಖಗೋಳ ಉತ್ಸವವಾಗಿಸಿ'

  • June 03, 2012


ಬೆಂಗಳೂರು: `ಜೂನ್ 6 ರಂದು ನಡೆಯಲಿರುವ ಶತಮಾನದ ಕಡೆಯ ಅಪರೂಪದ ಶುಕ್ರ ಸಂಕ್ರಮವನ್ನು ರಾಜ್ಯದ ಎಲ್ಲ ಜನರು ವಿಕ್ಷೀಸಲು ಆ ದಿನವನ್ನು ಖಗೋಳ ಉತ್ಸವವನ್ನಾಗಿ ಎಲ್ಲ ಶಾಲೆ, ಕಾಲೇಜು, ಗ್ರಾಮ ಬಡಾವಣೆಗಳಲ್ಲಿ ಆಚರಿಸಬೇಕೆಂದು` ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಸವರಾಜು ಕರೆ ನೀಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಹಿಂದಿನ ಶುಕ್ರ ಸಂಕ್ರಮ 2004 ರಲ್ಲಿ ಸಂಭವಿಸಿತ್ತು. ಮುಂದಿನ ಶುಕ್ರ ಸಂಕ್ರಮ ಸಂಭವಿಸುವುದು 2117 ಅಂದರೆ 105 ವರ್ಷಗಳ ನಂತರ.
ಕಿರು ಗ್ರಹಣ ಎಂದು ಕರೆಯಲ್ಪಡುವ ಈ ವಿದ್ಯಮಾನ ಈಗ ಬದುಕಿರುವವರು ಮತ್ತೆ ನೋಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಜನಸಮೂಹದಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು. ಸುರಕ್ಷಿತವಾಗಿ `ಶುಕ್ರ ಸಂಕ್ರಮ` ವೀಕ್ಷಿಸಲು ವಿಜ್ಞಾನ ಅಭಿವೃದ್ಧಿ ಕೇಂದ್ರ, ಬೆಂಗಳೂರು ಅಸ್ಟ್ರಾನಾಮಿಕಲ್ ಸೊಸೈಟಿ ಸಂಸ್ಥೆಗಳು ರಾಜ್ಯದ ಎಲ್ಲಡೆ ಕಾರ್ಯಾಗಾರ, ಗ್ರಹಗಳು, ಅವುಗಳ ನಡುವಿನ ಹಾಗೂ ಸೂರ್ಯನಿಗೂ ಅವುಗಳಿಗೂ ಇರುವ ಸಾಪೇಕ್ಷದೂರ, ಗ್ರಹಣಗಳು ಕುರಿತು ಉಪನ್ಯಾಸ, ಚರ್ಚೆಗಳು ನಡೆಯಲಿವೆ` ಎಂದು ಅವರು ವಿವರಿಸಿದರು.

`ರಾಜ್ಯದಾದ್ಯಂತ ಈಗಾಗಲೇ ಐವತ್ತಕ್ಕೂ ಹೆಚ್ಚು ಕಾರ್ಯಗಾರಗಳು ನಡೆದಿವೆ. ಇನ್ನೂ ಐವತ್ತು ಕಾರ್ಯಾಗಾರಗಳನ್ನು ಸಂಘಟಿಸಲಾಗುವುದು. ಇದಕ್ಕೆ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೈ ಜೋಡಿಸಿದೆ. ಸೂರ್ಯ ಗ್ರಹಣವನ್ನು ವೀಕ್ಷಿಸಲು ಮುಂಬೈನ ನವನಿರ್ಮಿತ ಸಂಸ್ಥೆಯವರು ತಯಾರಿಸಿದ ಸುರಕ್ಷಿತ ಕನ್ನಡಕಗಳನ್ನು ತರಿಸಿ 10 ರೂಪಾಯಿ ಒಂದೆಕ್ಕೆ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದ್ದು, ಈ ಬಾರಿ ಉತ್ಸಾಹ ತುಂಬಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ`ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಅಸ್ಟ್ರಾನಾಮಿಕಲ್ ಸೊಸೈಟಿ ಉಪಾಧ್ಯಕ್ಷ ನವೀನ್ ನಂಜುಡಪ್ಪ, ವಿಜ್ಞಾನ ಮತ್ತು ಅಭಿವೃದ್ಧಿ ಕೇಂದ್ರದ ಸಹ ಕಾರ್ಯದರ್ಶಿ ವಿ.ಎಸ್.ಎಸ್.ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು

TOV workshop by KJVS Gundlupet











TOV workshop organised by KJVS Gundlupet unit.

ಸೌರ ಮಂಡಲದಲ್ಲಿ ಅಪೂರ್ವ ದೃಶ್ಯ




ನಾಳೆ ಸೌರ ಮಂಡಲದಲ್ಲಿ ಅಪೂರ್ವ ದೃಶ್ಯ ವೀಕ್ಷಿಸುವ ಸುವರ್ಣಾವಕಾಶ

ನೆಲಮಂಗಲ: ಸೌರ ಮಂಡಲದಲ್ಲಿ ಜೂ.೬ ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಿಗ್ಗೆ ೧೦-೨೦ ರವರೆಗೆ ನಡೆಯುವ ಅಪೂರ್ವ ದೃಶ್ಯವನ್ನು ವೀಕ್ಷಿಸುವ ಸುವರ್ಣಾವಕಾಶ ಇದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಧಾನ ಕಾರ್ಯದರ್ಶಿ ಇ.ಬಸವರಾಜು ಹೇಳಿದರು.

ಅವರು ತಾಲೂಕು ಕೆ.ಜಿ.ವಿ.ಎಸ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಶುಕ್ರ ಸಂಕ್ರಮಣದ ಬಗ್ಗೆ ಮಾಹಿತಿ ವಿವರಿಸಿ ಮಾತನಾಡಿ, ಜೂನ್ ೬ ರಂದು ಶುಕ್ರ ಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಇದುವೇ ಶುಕ್ರ ಸಂಕ್ರಮಣ. ಇದೊಂದು ಅಪರೂಪದ ಖಗೋಳ ವಿದ್ಯಮಾನ, ದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮಣವು ವೀಕ್ಷಣೆಗೆ ಲಭ್ಯವಾಗಿದೆ. ಶತಮಾನಕ್ಕೂ  ಮೀರಿದ ಅವಧಿಯಲ್ಲಿ ಜೋಡಿಯಾಗಿ ಅಂದರೆ ಎಂಟು ವರ್ಷಗಳ ಮಧ್ಯಂತರ ಅವಧಿಗೆ ಒಮ್ಮೆ ಈ ಶುಕ್ರ ಸಂಕ್ರಮಣ ಸಂಭವಿಸುತ್ತದೆ. ಈ ಹಿಂದೆ ಶುಕ್ರ ಸಂಕ್ರಮಣಗಳು ಕ್ರಮವಾಗಿ ೧೬೩೧ ಮತ್ತು ೧೬೩೯,೧೭೬೧ ಮತ್ತು ೧೭೬೯, ೧೮೭೪ ಮತ್ತು ೧೮೮೨ ಹಾಗೂ ಈಚೆಗೆ ೨೦೦೪ರಲ್ಲಿ ಸಂಭವಿಸಿದ್ದು, ಈಗ ೨೦೧೨ರ ಜೂನ್ ೬ ರಂದು ಮತ್ತೆ ಈ ಜೋಡಿ ಶುಕ್ರ ಸಂಕ್ರಮಣ ಅಪರೂಪದ ದೃಶ್ಯವನ್ನು ವೀಕ್ಷಿಸಬಹುದು ಎಂದರು.

ಶುಕ್ರ ಸಂಕ್ರಮಣದ ವೀಕ್ಷಣೆಯ ಹೆಚ್ಚಿನ  ಮಾಹಿತಿಗಾಗಿ ಮತ್ತು ಸುರಕ್ಷಿತ ಸೌರ ಕನ್ನಡಕಗಳು ಬೇಕಾದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿಜ್ಞಾನ ಮತ್ತು ಅಭಿವೃದ್ಧಿ ಕೇಂದ್ರ ೪ನೇ ಮುಖ್ಯ ರಸ್ತೆ, ರುಕ್ಷ್ಮಿಣಿ ನಗರ, ನಾಗಸಂದ್ರ ಅಂಚೆ, ಬೆಂಗಳೂರು-೭೩.





karjvs@gmail.com ಇವರನ್ನು ಸಂಪರ್ಕಿಸಿ ಸೌರ ಕನ್ನಡಕಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.




logos









Camp on Venus transit from today

03rd June 2012 02:29 PM
Breakthrough Science Society (BSS) and Karnataka Jnana Vijnana Samithi (KJVS) will conduct an awareness camp all over the state from June 3 to 6 about the transit of Venus (June 6).
The society has urged the public not to pay heed to the astrological pandits’ false predictions. Instead, the people should come out and watch the rare celestial phenomena through sunfilters.
“Earlier, transits have helped mankind to measure the distances between the sun and different planets. This time, it is expected to discover earth-like planets with atmosphere outside the solar system. This time scientists are using high
precision instrument to understand how the atmosphere of Venus affects the Sun’s radiation,” said Convener at BSS, Satish Kumar.

Monday, June 4, 2012

KJVS ಇ.ಸಿ ಸದಸ್ಯರ ವಿಳಾಸಗಳು


 KJVS ಇ.ಸಿ ಸದಸ್ಯರ ವಿಳಾಸಗಳು (ಮೊಬೈಲ್ ಸಂಖ್ಯೆ ಸಹಿತ)


ಬಿ.ಎ.ಚಿದಂಬರಯ್ಯ
ಚೈತ್ರ, ನಂ.೧, ಕುವೆಂಪುನಗರ
ತುಮಕೂರು
ಮೊ: ೯೪೮೦೨೬೨೬೨೧

ಈ.ನಂಜಪ್ಪ, ನಿವೃತ್ತ ಸಹ ನಿರ್ದೇಶಕರು
ನಂ.೨೯೩, ೭ನೇ ಅಡ್ಡರಸ್ತೆ, ಮೊದಲನೇ ಬ್ಲಾಕ್
ಜಯನಗರ, ಬೆಂಗಳೂರು-೫೬೦೦೧೧
ಮೊ: ೯೪೪೯೧೩೩೭೩೩

ಈ.ಬಸವರಾಜು
ಮಂದಾರ, ೪ನೇ ಮುಖ್ಯ ರಸ್ತೆ
ರುಕ್ಮಿಣಿನಗರ, ನಾಗಸಂದ್ರ ಅಂಚೆ
ಪಿನ್: ೫೬೦೦೭೩  ಮೊ: ೯೪೪೮೯೫೭೬೬೬

ಹೆಚ್.ಚಂದ್ರಪ್ಪ, ಶಿಕ್ಷಕರು
ಮೊದಲನೆ ಮುಖ್ಯ ರಸ್ತೆ, ೨ನೇ ಅಡ್ಡರಸ್ತೆ
ಕೇಶವನಗರ, ಹರಿಹರ-೫೭೭೬೦೧
ಮೊ: ೯೮೪೪೦೭೮೩೬೯

ಅನಂತರಾಮ್ ಹೆರಳ ಸದಸ್ಯತ್ವಪುಸ್ತಕ ೨೧೫
ನಂ.೭-೪-೪೬೪/೪
ಶ್ರೀ ವಿಟ್ಟಲ ಮಠದ ಕಣಿ ಕ್ರಾಸ್
ಅಶೋಕ ನಗರಮಂಗಳೂರು-೫೭೫೦೦೬
ಮೊ: ೯೪೮೦೧೭೦೨೩೪

ಕೆ.ಹೆಚ್.ಗಿರೀಶ್
ಕಗ್ಗೆರೆ ಅಂಚೆ, ಕೆ.ಆರ್.ನಗರ ತಾಲೂಕು
ಮೈಸೂರು ಜಿಲ್ಲೆ.
ಮೊ: ೯೭೩೧೧೩೬೯೧೮

ಶಶಿಧರ್, ಎಸ್.ಎಂ
ಪ್ರೊಫೆಸರ್ ಮತ್ತು ಮುಖ್ಯಸ್ಥರು
ಇ ಅಂಡ್ ಸಿ, ವಿಭಾಗ
ಪಿ.ಡಿ.ಐ.ಟಿ ಇಂಜಿನೀಯರಿಂಗ್ ಕಾಲೇಜು
ಟಿ.ಬಿ.ಡ್ಯಾಂ, ಹೊಸಪೇಟೆ, ಬಳ್ಳಾರಿ ಜಿಲ್ಲೆ.
ಪಿನ್: ೫೮೩೨೨೫. ಮೊ: ೯೯೮೬೨೧೪೩೭೫

ಆನಂದಪ್ಪ, ಶಿಕ್ಷಕರು
ಬಿನ್ ಬೈರಪ್ಪ, ಅಡ್ಡಗಲ್ಲು, ಮಂಡಿಕಲ್ಲು ಅಂಚೆ
ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ.
ಪಿನ್: ೫೬೨೧೦೪.   ಮೊ: ೯೪೪೮೨೦೭೦೬೬

ಮಂಜುಳಾದೇವಿ, ನಿವೃತ್ತ ಶಿಕ್ಷಕಿ
ನಂ.೭೨, ಬಾರ್ ಲೈನ್
ಜನರಲ್ ಕಾರಿಯಪ್ಪ ರಸ್ತೆ, ತುಮಕೂರು
೯೯೮೬೦೦೦೧೮೦

ಬಿ.ಎಂ.ಲಕ್ಷ್ಮಣರಾವ್
ನಿವೃತ್ತ ಉಪನ್ಯಾಸಕರುಶ್ರೀ ಅನುಗ್ರಹ
ಡಿ.ಎ.ಸಿ.ಜಿ ಪಾಲಿಟೆಕ್ನಿಕ್ ಎದುರು
ರತ್ನಗಿರಿ ರಸ್ತೆ,
ಮೊ: ೯೪೪೮೪೪೧೯೩೭









ವಿಶೇಷ ಆಹ್ವಾನಿತರು
ಅಕ್ಕಮ್ಮ. ಎನ್ಉಪನ್ಯಾಸಕರು
ತಿ/ಕೆ.ಆರ್.ರಂಗನಾಥ್
ಫುಡ್ ಇನ್ಷ್‌ಪೆಕ್ಟರ್ದಫೆದಾರ್ ಬಿಳ್ಡಿಂಗ್
ಎ.ಎಸ್.ಕೆ.ಪಾಳ್ಯಶಾಂತಿನಗರ
ತುಮಕೂರು-೨
ಮೊ: ೯೪೪೮೨೯೭೬೭೩

ತಾರಾ
ಬಿನ್ ರಾಮು(ಕೆ.ಎಸ್.ಆರ್.ಟಿ.ಸಿ ಚಾಲಕರು)
ವಾರ್ಡ್ ನಂ.೨ಮನೆ ನಂ.೧೮೬ಸೌಮ್ಯಕುಟೀರ ನಿಲಯಬಾರಕೇರ ನರ್ಸಿಂಗ್ ಹಾಸ್ಟೆಲ್ ಪಕ್ಕ
ಗುಂಡ್ಲುಪೇಟೆ.  ಪಿನ್: ೫೭೧೧೧೧
ಮೊ: ೯೦೩೫೨೭೧೩೫೦

ಕಮಲಾಗೌಡರ್
ನಿವೃತ್ತ ಮುಖ್ಯೋಪಾಧ್ಯಾಯಿನಿ
ಬಂಗೇರ ಲೈನ್ಓವರ್ ಬ್ರಿಡ್ಜ್ ಹತ್ತಿರ
ತೊಕ್ಕೊಟ್ಟುಉಳ್ಳಾಲ ಅಂಚೆ
ಮಂಗಳೂರು-೫೭೫೦೨೦
ಮೊ:೯೯೮೦೮೯೦೫೪೦



ಸಿ.ಗಂಗಾಧರ್ಶಿಕ್ಷಕರು
೯ನೇ ವಾರ್ಡ್, ಅರಸೀಕೆರೆ ರಸ್ತೆ,
ಗುಂಡಿನಕೆರೆ, ಹರಪನಹಳ್ಳಿ ಟೌನ್
ದಾವಣಗೆರೆ ಜಿಲ್ಲೆ.
ಮೊ: ೯೯೧೬೮೨೮೨೩೦

ಹೆಚ್.ಎಸ್. ಆನಂದ್, ಶಿಕ್ಷಕರು
ಹೆಬ್ಬಾಳು ವಾಸ ಮತ್ತು ಅಂಚೆ
ಕೆ.ಆರ್.ನಗರ ತಾಲೂಕು, ಮೈಸೂರು ಜಿಲ್ಲೆ.
ಮೊ: ೮೭೨೨೩೯೩೪೫೬

ಸುಬ್ರಮಣ್ಯ
ನಂ.೨೯೯, ೨ನೇ ಬ್ಲಾಕ್, ೩ನೇ ಸ್ಟೇಜ್
ಬಸವೇಶ್ವರ ನಗರ, ಬೆಂಗಳೂರು-೫೬೦೦೭೯
ದೂರವಾಣಿ: ೦೮೦-೨೩೨೨೪೦೫೭

ಎಲ್.ಐ.ಲಕ್ಕಮ್ಮನವರ, ಶಿಕ್ಷಕರು
ವೀರಭದ್ರೇಶ್ವರ ಗುಡಿ ಹತ್ತಿರ
ಹೆಬ್ಬಳ್ಳಿ ಅಂಚೆ
ಧಾರವಾಡ ತಾಲೂಕು ಮತ್ತು ಜಿಲ್ಲೆ.
ಮೊ:೯೬೩೨೬೪೭೦೭೦

ಹೊನ್ನಶಾಮಯ್ಯ, ಶಿಕ್ಷಕರು
ಬಿನ್ ಚಂದ್ರಪ್ಪ, ಹೊನ್ನೇನಹಳ್ಳಿ
ಬರಗೇನಹಳ್ಳಿ ಅಂಚೆ, ನೆಲಮಂಗಲ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಮೊ: ೯೦೩೬೬೧೫೫೨೯

ಎಂ.ಸಿ.ಡೋಂಗ್ರೆ
ಆಶೀರ್ವಾದ, ೨ನೇ ಮುಖ್ಯ ರಸ್ತೆ,
೩ನೇ ಅಡ್ಡರಸ್ತೆ, ಆದರ್ಶನಗರ, ಹಾಸನ
ಪಿನ್-೫೭೩೨೦೧  ಮೊ: ೮೮೬೧೬೬೫೨೫೨

ಉಮೇಶ್. ಆರ್, ಶಿಕ್ಷಕರು
ಹೆಚ್.ಐ.ಜಿ - ೪೯, ಕೆ.ಹೆಚ್.ಬಿ.ಕಾಲೋನಿ
ಚಿಟ್ಟನಹಳ್ಳಿ ಬಡಾವಣೆ, ಹೊಳೆನರಸಿಪುರ ಟೌನ್,
ಪಿನ್ - ೫೭೩೨೧೧                      ಮೊ: ೯೨೪೨೦೬೦೩೯೫

ಸಿ.ಕೃಷ್ಣೇಗೌಡ, ಉಪನ್ಯಾಸಕರು
ನಂಜುಶ್ರೀ ನಿಲಯ
ಮನೆ ನಂ.೩೬೫/೭-ಎನ್-೨೧
ದುರ್ಗಾದೇವಿ ಟೆಂಪಲ್ ರಸ್ತೆ,
ನಜರಾಬಾದ್, ಮೈಸೂರು-೧೦
ಮೊ:೮೪೫೩೫೦೩೦೧೮

ವಸಂತಕುಮಾರ್, ಶಿಕ್ಷಕರು
ಗಾಂಧಿನಗರ ೪ನೇ ಕ್ರಾಸ್
ತುಮಕೂರು.
ಮೊ.೯೯೮೦೩೭೯೮೨೯

ಮಲ್ಲಿಕಾರ್ಜುನ ಎಸ್ ಗಾಳಪ್ಪನವರ್
ನಂ.೯ಡಿ, ಸಿ.ಎಂ.ಟಿ.ಐ ಸ್ಟಾಫ್ ಕಾಲೊನಿ
ಎಂ.ಇ.ಎಸ್ ರಸ್ತೆ, ಯಶವಂತಪುರ ಅಂಚೆ
ಬೆಂಗಳೂರು-೫೬೦೦೨೨
ಮೊ: ೯೭೪೦೪೩೪೬೩೦



ಸದಸ್ಯತ್ವ ಹಾಗೂ ಸಂಘಟನಾ ಸಂಪರ್ಕಕ್ಕಾಗಿ ಇ.ಸಿ ಸದಸ್ಯರಲ್ಲದ ಪ್ರಮುಖ ಕಾರ್ಯಕರ್ತರ ವಿಳಾಸಗಳು:


ಶಾಂತಕುಮಾರ್ ಭಜಂತ್ರಿ
ಸವದತ್ತಿ ರಸ್ತೆ, ನರಗುಂದ
ಗದಗ ಜಿಲ್ಲೆ. 


ಮುನಿವೆಂಕಟರೆಡ್ಡಿ. ವಿ
ನರವಮಕಲ ಹಳ್ಳಿ(ಗ್ರಾಮ)
ಇರಗಂಪಲ್ಲಿ ಅಂಚೆ
ಚಿಂತಾಮಣಿ ತಾ, ಚಿಕ್ಕಬಳ್ಳಾಪುರ ಜಿಲ್ಲೆ.
ಪಿನ್: ೫೬೩೧೨೩


ಡಾ. ಶೇಖರ್ ಗೌಳೇರ್
ಸೌಧಾಮಿನಿ, ೬೦ ಅಡಿ ರಸ್ತೆ
ಮೊದಲನೇ ಅಡ್ಡರಸ್ತೆ, ವಿನೋಭನಗರ
ಶಿವಮೊಗ್ಗ ಜಿಲ್ಲೆ.


ಸತೀಶ್ ಶೆಟ್ಟಿಗಾರ್ ಜಪ್ತಿ
ಶಿಕ್ಷಕರು, ಶ್ರೀ ದೇವಿಕೃಪ, ಜಪ್ತಿ ಅಂಚೆ, 
ಕುಂದಾಪುರ ತಾ, ಉಡುಪಿ ಜಿಲ್ಲೆ.
ಪಿನ್: ೫೭೬೨೧೧


ಎಸ್. ಪಿ. ಗೌಡರ್
ಗುರುಭವನ ಹಿಂಭಾಗ
ಹಿರೇಕೆರೂರು, ಹಾವೇರಿ ಜಿಲ್ಲೆ
ಪಿನ್-೫೮೧೧೧೧
ಮೊ: ೯೪೮೧೨೮೧೮೦೯


ಸೋಮಶೇಖರ ಗೌಡ


ಮರಿಸ್ವಾಮಿ


ಶ್ರೀನಿವಾಸ್ ಹಲಗೂರು
ಎಂ.ಕೆ.ನಳಿನಾಕ್ಷಿ


ಮಹದೇವಸ್ವಾಮಿ


ಬೆನಕಪ್ಪಾಚಾರ್
ಎಸ.ಆರ್.ಪೂಜಾರ್, ಶಿಕ್ಷಕರು
ಸುಮಂಗಳ ಎಸ್ ಗಾಳಪ್ಪನವರ್
ಮಲ್ಲಿಕಾರ್ಜುನ ಎಸ್ ಗಾಳಪ್ಪನವರ್
ನಂ.೯ಡಿ, ಸಿ.ಎಂ.ಟಿ.ಐ ಸ್ಟಾಫ್ ಕಾಲೊನಿ
ಎಂ.ಇ.ಎಸ್ ರಸ್ತೆ, ಯಶವಂತಪುರ ಅಂಚೆ
ಬೆಂಗಳೂರು-೫೬೦೦೨೨
ಮೊ: ೯೮೪೫೩೪೧೯೮೪




ಕನ್ನಡ ಪ್ರಭ: ಶುಕ್ರ ಸಂಕ್ರಮ ವೀಕ್ಷಿಸಿ


‘೬ರಂದು ಆಕಾಶದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿ’


ಕನ್ನಡಪ್ರಭ ವಾರ್ತೆಹೊಸಪೇಟೆಜೂ.

ಆಕಾಶದಲ್ಲಿ ಅಪರೂಪವಾಗಿ ಮೂಡುವಂತಹ ಶುಕ್ರ ಸಂಕ್ರಮವು ಜೂನ್ ೬ರಂದು  ಸಂಭವಿಸಲಿದ್ದುಅದನ್ನು ವೀಕ್ಷಿಸುವ ಅಪೂರ್ವ ಅವಕಾಶ ಕಳೆದುಕೊಳ್ಳಬೇಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊಎಸ್.ಎಂಶಶಿಧರ ಕರೆ ನೀಡಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಶ್ರಯದಲ್ಲಿ ನಡೆದ ಶುಕ್ರ ಸಂಕ್ರಮ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಯೂಲ ವ್ಯಕ್ತಿಗಳಾಗಿ ಮಾತನಾಡಿದರು.

ಈವರೆಗೆ ೭ ಶುಕ್ರ ಸಂಕ್ರಮಜೂನ್ ೬ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಗ್ಗೆ ೧೦-೨೦ರ ವರೆಗೆ ಶುಕ್ರ ಗ್ರಹ ಸೂರ್ಯನ ಮುಂದೆ ಹಾದು ಹೋಗಲಿದ್ದುಇದನ್ನು ಶುಕ್ರ ಸಂಕ್ರಮ ಎನ್ನಲಾಗುತ್ತದೆಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದೆದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮ ವೀಕ್ಷಣೆಗೆ ಲಭ್ಯವಾಗಿದೆಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟು ವರ್ಷಗಳ ಮಧ್ಯಂತರ ಅವಧಿಯಂತೆಶುಕ್ರ ಸಂಕ್ರಮ ಸಂಭವಿಸುತ್ತದೆ ಎಂದು ಅವರು ವಿವರಿಸಿದರು.

ಮುಂದಿನ ಶುಕ್ರ ಸಂಕ್ರಮ ೨೧೧೭ರಲ್ಲಿಈ ಹಿಂದಿನ ಸಂಕ್ರಮಗಳು ಕ್ರಮವಾಗಿ ೧೬೩೧ ಮತ್ತು ೧೬೩೯೧೭೬೧ ಮತ್ತು ೧೭೬೯ ೧೮೭೪ ಮತ್ತು ೧೮೮೨ಈಚೆಗೆ ೨೦೦೪ರಲ್ಲಿ ಸಂಭವಿಸಿರುತ್ತವೆಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದುವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮ ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು.ಆದರೆಅದು ಸಾಧ್ಯವಾಗಲಿಲ್ಲಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆಇದು ನಮಗೂ ಕೊನೆಯ ಅವಕಾಶಈ ಶತಮಾನದ ಕೊನೆಯ ಘಟನೆಮುಂದಿನ ಶುಕ್ರ ಸಂಕ್ರಮವು ೧೦೫ ವರ್ಷಗಳ ನಂತರ ಅಂದರೆ ೨೧೧೭ರಲ್ಲಿ ನೋಡಲು ಸಾಧ್ಯ ಎಂದು ಅವರು ವಿವರಿಸಿದರು.

ಸೌರಕನ್ನಡಕ ಮೂಲಕ ವೀಕ್ಷಿಸಿಶುಕ್ರ ಸಂಕ್ರಮ ವೀಕ್ಷಿಸುವ ಸಂದರ್ಭದಲ್ಲಿ ಪ್ರಖರ ಸೂರ್ಯ ಕಿರಣಗಳಿಂದ ಕಣ್ಣಿಗೆ ಹಾನಿಯಾಗದಂತೆ ಸೂಕ್ತ ರಕ್ಷಣಾ ವಿಧಾನಗಳನ್ನು ಅವರು ಸೂಚಿಸಿದರುವೈಜ್ಞಾನಿಕವಾಗಿ ತಯಾರಿಸಿ ದೃಢೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರ ಸಂಕ್ರಮ ವೀಕ್ಷಿಸಬಹುದುಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಟುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದುಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು ಎಂದು ಅವರು ಹೇಳಿದರು.

ಪ್ರಾಚಾರ್ಯ ಡಾ.ಪಿಖಗೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಖಗೋಳ ಶಾಸ್ತ್ರವು ಅನೇಕ ವಿಸ್ಮಯಗಳ ಆಗರವಾಗಿದ್ದುಮಕ್ಕಳಲ್ಲಿ ಆಕಾಶ ವೀಕ್ಷಣೆಯ ಆನಂದ ಆಸಕ್ತಿ ತುಂಬಬೇಕುವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚೇತನ ಸಾಹಿತ್ಯ ಸಂಸ್ಥೆ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಸದಸ್ಯ ಪ್ರಭಾಕರ ಕೆಂದೂಳಿಯವರು ಮಾತನಾಡಿತಂತ್ರಜ್ಞಾನ ಅಬ್ಬರದ ನಡುವೆ ಇಂತಹ ಕಾರ್ಯಕ್ರಮಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.

ಪಿಡಿಐಟಿಯ ಪ್ರಾಧ್ಯಾಪಕ ಪ್ರೊವಸಂತಮ್ಮ ಹಾಗೂ ಪಾರ್ವತಿ ಕಡ್ಲಿಯವರುಬಿ.ಎಂಶ್ರೀನಾಥ ಸಭೆಯಲ್ಲಿ ಇದ್ದರುಅಧ್ಯಾಪಕಿ ಸುಮಲತಾ ಸ್ವಾಗತಿಸಿದರುಫಿರ್‌ದೋಶ್ ಪರವೀನ್ ನಿರೂಪಿಸಿದರುಟಿ.ಎಂ.ನಾಗಭೂಷಣ ವಂದಿಸಿದರು.