Saturday, December 29, 2012

ರಾಷ್ಟ್ರಕವಿ ಕುವೆಂಪು 108ನೇ ಜನ್ಮದಿನಾಚರಣೆ

ಕರ್ನಾಟಕ ಸಾಂಸ್ಕøತಿಕ ಸಂಸ್ಥೆ, ಹೂವಿನ ಹಡಗಲಿ-ಹೊಸಪೇಟೆ
ಪ್ರಿಯದರ್ಶಿನಿ ಮಹಿಳಾ ಸಂಘ, ಹೊಸಪೇಟೆ 



ಅಧ್ಯಕ್ಷತೆ: ಡಾ. ಸುಲೋಚನ, ಅಧ್ಯಕ್ಷರು, ಪ್ರಿ. ಮ. ಸಂಘ, ಹೊಸಪೇಟೆ

ಮುಖ್ಯ ಅತಿಥಿಗಳು: ಶ್ರೀ ಎಂ.ಪಿ. ರವೀಂದ್ರ , ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್, ಹೊಸಪೇಟೆ
ಶ್ರೀ ಕೆ.ಭೀಮಸೇನರಾವ್, ಮು.ಗು., ಡಾ.ಗೋ.ಸ್ಮಾ.ಪ್ರೌಢಶಾಲೆ, ಹೊಸಪೇಟೆ

ಉಪನ್ಯಾಸ : ಪ್ರೊ. ಅಬ್ದುಲ್ ಸಮದ್ ಕೊಟ್ಟೂರು 
ವಿಷಯ: ವಿಶ್ವಮಾನವ ಸಂದೇಶ 

ನಾಟಕ : ಸಂಜೆ ದೀಪ 
ರಚನೆ,ನಿರ್ದೇಶನ,ವಿನ್ಯಾಸ : ಶ್ರೀ ಮುದೇನೂರು ಉಮಾಮಹೇಶ್ವರ 
ಪ್ರಸ್ತುತಿ: ರಂಗ-ಪ್ರಕಾಶ 
ಪಾತ್ರ ವರ್ಗ: ಎಲ್. ಕೊಟ್ರೇಶ್, ಎಂ.ದುರ್ಗ, ಎಂ.ಶಬನ,   
                        ಎಂ.ಮಂಜುನಾಥ, ಎಲ್.ಉದಯಕುಮಾರ, ಕೆ.ಹೆಚ್.ಚಿತ್ತರಂಜನ್.
ತೆರೆ ಹಿಂದೆ: ಬಿ. ಆನಂದ್, ಟಿ.ಎಂ.ನಾಗಭೂಷಣ, ಬಿ.ಶಿವಕುಮಾರ 
 
ರಂಗ ಸಹಕಾರ: ನಾಟ್ಯ ಕಲಾ ರಂಗ, ಮರಿಯಮ್ಮನಹಳ್ಳಿ
======================================================
ದಿನಾಂಕ: 29.12.2012, ಸಂಜೆ: 6.00 ಗಂಟೆಗೆ
ಸ್ಥಳ: ಡಾ.ಗೋಪಿನಾಥರಾವ್ ಸ್ಮಾರಕ ಪ್ರೌಢಶಾಲೆ, ಹೊಸಪೇಟೆ
====================================================
ನೆರವು 

ಬಿಡಿಸಿಸಿ ಬ್ಯಾಂಕ್, ಪ್ರಧಾನ ಕಛೇರಿ, ಹೊಸಪೇಟೆ 
ಹಾಗೂ 
ರಂಗ ಭಾರತಿ, ಹೂವಿನಹಡಗಲಿ


ನಮ್ಮೊಂದಿಗೆ

ಡಾ. ಮೃತ್ಯುಂಜಯ ರುಮಾಲೆ | ಎಂ.ಎಂ.ಶಿವಪ್ರಕಾಶ
ಉತ್ತಂಗಿ ಕೊಟ್ರೇಶ್ | ಡಾ.ಕೆ. ವೆಂಕಟೇಶ ಅಧ್ಯಕ್ಷರು, ಕಸಾಪ. ತಾ.ಘಟಕ
ಗುಜ್ಜಲ್ ರಘು | ಹೆಚ್.ಎಂ.ನಿರಂಜನ, ಟಿ.ಎಂ.ಉಷಾರಾಣಿ
ಸುಜಾತ ರೇವಣಸಿದ್ದಪ್ಪ | ಪ್ರೊ. ಯು.ರಾಘವೇಂದ್ರರಾವ್
ವಿಜಯಕುಮಾರ ಎನ್.ಎಂ.|  ಸೊ.ದಾ.ವಿರುಪಾಕ್ಷಗೌಡ
ಉದಯ್ ಮಮಹಳ್ಳಿ | ಶ್ರೀನಾಥ ಬಿ.ಎಂ.
ಎಸ್.ಎಂ.ಶಶಿಧರ | ವಿನೀತ್ ಕುಮಾರ.ಬಿ.ಎಂ.
ಸೈಯದ್ ಹುಸೇನ್, ಕಂಪ್ಲಿ | ಪ್ರಮೋದ್ ಕುಮಾರ, ಎಂ.ಬಿ.ಎ.
ರವಿಕುಮಾರ ಎಂ.ಬಿ.ಎ. | ಪ್ರಕಾಶ್, ಪತ್ರಕರ್ತರು, ಮಮಹಳ್ಳ್ಳಿ
ಪ್ರಭು ಕೆಂದೂಳೆ   |   ಚೆನ್ನಬಸಯ್ಯ ಕೆ.ಎಂ.
ನೂರ್ ಜಹಾನ್ | ನಾಗರಾಜ ಹಳ್ಳಿಕಟ್ಟಿ, ಹಡಗಲಿ
ಕೆ.ನಾಗರತ್ನಮ್ಮ, ಮಮಹಳ್ಳ್ಳಿ |  ಜಿ.ಎಂ.ಪ್ರಭು, ಹೊಸಪೇಟೆ ಸ್ಟೀಲ್ಸ್
ಪಂಪಾಮಹೇಶ್ | ಕೊಟ್ರೇಶ್ ಕೆ. ಜೆ.ಎಸ್.ಡಬ್ಲೂ
ಪರಶುರಾಮ ಕಲಾಲ್ | ಗಿರೀಶ್ ನಾಗರಬೆಂಚಿ
ಬಿ.ಎಂ.ಎಸ್.ಪ್ರಭು, ಮಮಹಳ್ಳ್ಳಿ | ಹೊಸ್ಮನಿ ಬಸವರಾಜ ಕಲ್ಮಂಗಿ
ಕು. ಅಂಜಲಿ | ಎನ್.ಕೆ.ಚಂದ್ರಶೇಖರ
ಸಿ.ವಿಜಯಕುಮಾರ| ಆನಂದ್, ಮಮಹಳ್ಳ್ಳಿ 
ಡಾ. ಮಲ್ಲಯ್ಯ ಶಿಕ್ಷಕರು | ಡಾ, ಸಾವಿತ್ರಿ ರಾಜಶೇಖರ ಶಿಕ್ಷಕರು
ಪ್ರಕಾಶ್, ವಕೀಲರು, ಕಂಪ್ಲಿ | ಎಸ್.ಎಸ್.ಚಂದ್ರಶೇಖರ ಎಂಎಸ್‍ಪಿಎಲ್ ಲಿ
ಕೆ.ಚಂದ್ರಪ್ಪ,ಅಧ್ಯಕ್ಷರು, ಸಮುದಾಯ,ತಾ.ಘ.| ಬಂಗಿ ಮಂಜುನಾಥ  ಕಂಪ್ಲಿ ಬಾಬುರಾವ್ ರುಕ್ಮಣ ಶ್ರೀಖಂಡೆ  ಕಂಪ್ಲಿ.  ಅಂಬಿಗರ ಮಂಜುನಾಥ ಕಂಪ್ಲಿ  
ಅನೀಫ್ ಕಂಪ್ಲಿ | ಮಲ್ಲಿಕಾರ್ಜುನ ಬಿ. ಶಿಕ್ಷಕರು  
ಕೆ.ಬಿ.ವಿಜಯಕುಮಾರ ಅಶ್ವಿನಿ ಶಾಲೆ | ಎಸ್.ಎಸ್. ಪಾಟೀಲ್ ಶಿಕ್ಷಕರು
ಗುರುಮೂರ್ತಿ ರೈತ ಮುಖಂಡರು  |  ವಿಶ್ವನಾಥ ಕವಿತಾಳ
ಎಚ್.ಪಿ. ಕಲ್ಲಂಭಟ್ ಸಂಗೀತ ಭಾರತಿ| ಟಿ.ಎಚ್.ಎಂ.ಚಂದ್ರಶೇಖರ ಅಧ್ಯಕ್ಷರು, ಚುಸಾಪ, 
ಕೆ.ಎಂ. ಅನ್ನಪೂರ್ಣ| ಜಿ. ಅನ್ನಪೂರ್ಣ
ಎಸ್. ಎಂ. ಶಿವಲೀಲಾ | ಎಸ್. ಎಂ.. ನಾಗರತ್ನ , ಎಸ್. ಎಂ. ಸೌಮ್ಯ
ಸೃಷ್ಠಿ ಕಲಾ ಬಳಗ, ಮರಿಯಮ್ಮನಹಳ್ಳಿ | ಲಲಿತ ಕಲಾ ರಂಗ, ಮರಿಯಮ್ಮನಹಳ್ಳಿ
ಕನ್ನಡ ಸಾಹಿತ್ಯ ಪರಿಷತ್, ಹೊಸಪೇಟೆ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಹೊಸಪೇಟೆ

ಪ್ರಗತಿಪರ / ಕನ್ನಡಪರ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳಿಗೆ ಆತ್ಮೀಯ ಆಹ್ವಾನ

ನಾಗಭೂಷಣ ಟಿ.ಎಂ    ಡಾ.ಸುಲೋಚನ  ಜಂಬುನಾಥ ಹೆಚ್.ಎಂ.
ಅಧ್ಯಕ್ಷರು, ಕ.ಸಾ.ಸಂ.      ಅಧ್ಯಕ್ಷರು, ಪ್ರಿ.ಮ.ಸಂಘ    ಅಧ್ಯಕ್ಷರು ಚೇ.ಸಾ.ಸಂ.
   9886185146            9945188052     9008814457

Thursday, December 27, 2012

Secretary at Harapanahalli Function

KJVS Secretary E.Basavaraju was the Chief Guest in Gruha Pravesha Program of KJVS Activist Basavaraj at Harapanahalli recently. Dr.Veerabhadra Channamalla Swamiji of Nidumamidi Math was also another Guest in the function. Siddhana Gouda Patil, renowned Rationalist speaking on the occasion in the photograph. 

KJVS Meeting at Harapanahalli

KJVS at Extended EC Meeting washeld at Harapanahalli, Davangere district on 23 December 2012. Some photographs of the meeting.

  



KJVS News Dec 2012

KJVS News-ಸಂಪಾದಕೀಯ








ದೈನಂದಿನ ಆಗುಹೋಗುಗಳ ಬಗ್ಗೆ ಸಾರ್ವತ್ರಿಕವಾಗಿ ವಿಚಾರ ವಿನಿಮಯ ಪ್ರಜಾತ್ತಾತ್ಮಕ ವ್ಯವಸ್ಥೆಯಲ್ಲಿ ಸಹಜವೇ. ನಮ್ಮ ಬದುಕಿನ ಉದ್ದಗಲಕ್ಕೂ ಕಂಪ್ಯೂಟರ್ ಮತ್ತು ಅಂತರ್ಜಾಲವು ಹೆಣೆದುಕೊಂಡಿದೆ. ಫೇಸ್‍ಬುಕ್‍ನಲ್ಲಿ ಅಭಿಪ್ರಾಯ ಮಂಡನೆ ಮಾಡುವುದು, ಸಾರ್ವಜನಿಕವಾಗಿ ಚರ್ಚಿಸುವುದು ಸರ್ವೇಸಾಮಾನ್ಯ. ಇತ್ತೀಚೆಗೆ ಮುಂಬೈನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಅಭಿಪ್ರಾಯವನ್ನು ಫೇಸ್‍ಬುಕ್‍ನಲ್ಲಿ ಚರ್ಚಿಸಿದ ವಿಷಯವು ಈಗ ಐಟಿ ಕಾಯ್ದೆಯನ್ನೇ ಬದಲಿಸುವ ಚರ್ಚೆಗೆ ಪೀಠಿಕೆ ಆಗಿದೆ.
ಎರಡು ಗುಂಪುಗಳ ನಡುವೆ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಕಾರಣ ನೀಡಿ ಹಲವು ಕಲಂನಡಿಯಲ್ಲಿ ಈ ಇಬ್ಬರು ಹೆಣ್ಣುಮಕ್ಕಳ ಮೇಲೆ ಕೇಸು ಜಡಿಯಲಾಗಿದೆ. ತತ್ಪರಿಣಾಮವಾಗಿ ಭುಗಿಲೆದ್ದ ಚರ್ಚೆ, ಸರ್ವೋಚ್ಛ ನ್ಯಾಯಾಲದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಪರಿಣಮಿಸಿ, ಮಾಹಿತಿ ತಂತ್ರಜ್ಞಾನ ಅಧಿನಿಯಮದ ಸೆಕ್ಷನ್ 66 ಮತ್ತು 67ಗಳು ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತಾಗಿರುವುದರಿಂದ, ಈ ಸೆಕ್ಷನ್‍ಗಳು ತಿದ್ದುಪಡಿ ಆಗಬೇಕೆಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಅಂದರೆ ತಂತ್ರಜ್ಞಾನದ ಬಳಕೆ, ಸಾರ್ವಜನಿಕರ ಹಕ್ಕುಗಳು ಹಾಗೂ ಕಾನೂನುಗಳು ಮಾರ್ಪಾಡಾಗುವುದಕ್ಕೆ ಸಂಬಂಧವಿದೆ ಎಂಬುದೇ ಇಲ್ಲಿರುವ ಪಾಠ.

ನಮ್ಮ ದೇಶದ ಸಂವಿಧಾನದ ಪರಿಚ್ಛೇಧ 51ಎ(ಎಚ್) ಪ್ರಕಾರ, ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದಿದೆ. ಜನತೆಯಲ್ಲಿ ಮಾಹಿತಿ ಸಂವವಹನ, ಮನರಂಜನೆ ಮತ್ತು ಶಿಕ್ಷಣದ ಉದ್ದೇಶವಿರಬೇಕಿರುವ ಮಾಧ್ಯಮಗಳು, ಕೇವಲ ಮಾಹಿತಿ ಮತ್ತು ಮನರಂಜನೆ ಮಾರಾಟದಲ್ಲಿ ತೊಡಗಿವೆ. ಆದರೆ ಮಾಧ್ಯಮಗಳು ವೈಜ್ಞಾನಿಕ ಮನೋಭಾವವನ್ನು ಜನತೆಯಲ್ಲಿ ರೂಪಿಸುವ ಮಾತಿರಲಿ, ವಾಸ್ತು, ಹೋಮ, ಶಾಂತಿ, ಪ್ರಳಯ ಇತ್ಯಾದಿ ಬಗೆ ಬಗೆಯ ಮೌಢ್ಯವನ್ನು ಬಿತ್ತುವಲ್ಲಿ ಮುಳುಗಿಹೋಗಿವೆ. ಟಿವಿ ವಾಹಿನಿಗಳಂತೂ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಹೋಗಿದೆ. ಮಾಧ್ಯಮದಲ್ಲಿ ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲವೆಂಬುದು ಆಶಾದಾಯಕ ವಿಚಾರವೇನೋ ಸರಿ.
ಕೆಲವಾದರೂ ಇಂಗ್ಲಿಷ್ ವಾಹಿನಿಗಳು ಪರಿಸರ ಪ್ರಜ್ಞೆ, ವೈಜ್ಞಾನಿಕ ಮನೋಭಾವ, ವೈಚಾರಿಕತೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಆದರೆ ಈ ಕಾರ್ಯಕ್ರಮಗಳನ್ನು ಡಬ್ಬಿಂಗ್ ಮಾಡಬಾರದೆಂದು ಕನ್ನಡದ ಗುತ್ತಿಗೆ ಪಡೆದಿರುವ ಉದ್ಯಮಪತಿಗಳು ಧಮಕಿ ಹಾಕಿದ್ದಾರೆ.

ಆದರೆ, ಈ ವಿಷಯವೂ ಸ್ಪರ್ಧಾ ಆಯೋಗ (ಕಾಂಪಿಟೇಷ ನ್ ಕಮಿಷನ್ ಅಫ್ ಇಂಡಿಯಾ)ದಿಂದ ಚಲನಚಿತ್ರ ಮತ್ತು ವಾಣಿಜ್ಯ ಮಂಡಲಿಗೆ ನೋಟೀಸ್ ಬರಲು ಕಾರಣವಾಗಿದೆ. ಅತ್ತೆ-ಸೊಸೆ ಜಗಳ ಮತ್ತು ಹೆಂಗಸರನ್ನು ನಿರಂತರವಾಗಿ ಅಳಿಸುವ ಧಾರಾವಾಹಿಗಳು ಡಬ್ಬಿಂಗ್ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಅನ್ಯಭಾಷಿಕರಿಗಿಂತ ನಮ್ಮ ನಿರ್ಮಾಪಕರೇ ಚೆನ್ನಾಗಿ ಅಳಿಸುತ್ತಾರೆಂಬುದನ್ನು ಒಪ್ಪೋಣ. ಆದರೆ, ದಟ್ಟ ಅಡವಿಗಳಲ್ಲಿ ಹೋಗಿ ವರ್ಷಗಟ್ಟಲೆ ಶ್ರಮಿಸಿ ಚಿತ್ರಿಸಿದ ವನ್ಯಜೀವಿ ಚಿತ್ರಗಳನ್ನು, ಕೈಗಾರಿಕೆಗಳಲ್ಲಿ ನಡೆಯುವ ಉತ್ಪಾದನೆಯ ಸಾಕ್ಷ್ಯಚಿತ್ರಗಳಿಗೆ ಧ್ವನಿಯನ್ನು ಡಬ್ ಮಾಡಿದರೆ, ಕನ್ನಡಿಗರಿಗೆ ಉತ್ಕೃಷ್ಟ ಕಲಾ-ವೈಜ್ಞಾನಿಕ ಚಿತ್ರಗಳಿಗೆ ತಮ್ಮ ಭಾಷೆಯಲ್ಲೇ ತಿಳಿಯುವ ಅವಕಾಶವಾಗುತ್ತದೆ.

ತಮಿಳುನಾಡಿನ ಜನರಿಗೆ ಈ ಭಾಗ್ಯವಿದೆ. ಅಲ್ಲಿ ಬಿಬಿಸಿ, ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಗಳ ಕಾರ್ಯಕ್ರಮಗಳು ತಮಿಳು ಧ್ವನಿಯಲ್ಲಿ ಮೂಡಿಬರುತ್ತಿವೆ. ಕನ್ನಡದ ನಿರ್ಮಾಪಕರು ಆ ಗುಣಮಟ್ಟದ ಕಾರ್ಯಕ್ರಮಗಳನ್ನು ಮಾಡಲಾರರು, ಡಬ್ಬಿಂಗ್ ಮಾಡಲು ಬಿಡಲಾರರು.

ವೈಜ್ಞಾನಿಕ ಮನೋಭಾವವನ್ನು ರೂಪಿಸುವ ಸೆಲೆಗಳನ್ನೇ ಚಿವುಟಿ ಹಾಕಿದರೆ, ವಾಸ್ತು, ಪ್ರಳಯ ಇತ್ಯಾದಿ ಗೊಬ್ಬರಗಳನ್ನು ನಮ್ಮ ಜನರಿಗೆ ತಿನ್ನಿಸುವುದನ್ನು ಅವ್ಯಾಹತವಾಗಿ ಮುಂದುವರಿಸಬಹುದಲ್ಲವೆ? ಮಾಧ್ಯಮದ ಮಿತ್ರರಿಗೆ ಬಾಯಿ ದೊಡ್ಡದು, ಕಿವಿ ತುಂಬ ಚಿಕ್ಕದು ಎಂಬ ಆರೋಪವಂತೂ ಇದೆ. ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರೆಯೇ?

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಪ್ರಳಯ ಎಂಬುದು ಹಳಸಲು ಸುದ್ದಿ : ಶಂಕರ ಹಲಗತ್ತಿ

ಹೆಬ್ಬಳ್ಳಿ: ಡಿಸೆಂಬರ 14: ಪ್ರಳಯ ಎಂಬುದು ಹಳಸಲು ಸುದ್ದಿಯಾಗಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ಅವರು ಸೋಮಾಪೂರದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈ ಭೂಮಿಗೆ ವೈಜ್ಞಾನಿಕ ದಾಖಲೆಯ ಪ್ರಕಾರ 1000 ಕೋಟಿ ( 10 ಬಿಲಿಯನ್) ವರ್ಷಗಳು. ಈಗಾಗಲೇ 500 ಕೋಟಿ ವರ್ಷ ಪೂರೈಸಿದ್ದ ಇನ್ನೂ 500 ಕೋಟಿ ವರ್ಷಗಳು ಆಯಸ್ಸು ಭೂಮಿಗಿದೆ. ಒಬ್ಬ ಮನುಷ್ಯನ ಆಯಸ್ಸು 100 ವರ್ಷಗಳು ಮಾತ್ರ. ಪ್ರಳಯ ಗಿಳಯ ಏನೂ ಇಲ್ಲ. ಮಾನವನ ಸ್ವಾರ್ಥ ಸಾಧನೆಗಾಗಿ ಇಂದು ಪರಿಸರ ನಾಶದಂತಹ ಕಾರ್ಯಕ್ರಮಗಳಿಂದ ಮಳೆ ಕಡಿಮೆಯಾಗಿ, ಪರಿಸರದ ಏರು ಪೇರು ಆಗಲಿದ್ದು, ಪ್ರತಿಯೊಬ್ಬರೂ ಗಿಡಮರ ಬೆಳೆಸಿ ಪರಿಸರ ಸಂರಕ್ಷಿಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಗಮನ ಹರಿಸುವ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಂ. ಸದಸ್ಯ ಯೋಗೇಶಗೌಡ ಗೌಡರ ಈ ದೇಶದ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ಪವಾಡ ಎನ್ನುವ ಸಂಗತಿಗಳಲ್ಲಿ ಏಕೆ ಏನು ಹೇಗೆ ಎಂಬ ಪ್ರಶ್ನೆಗಳ್ನನು ಹಾಕುವುದರ ಮೂಲಕ ವೈಜ್ಞಾನಿಕ ಸತ್ಯವನ್ನು ಅರಿಯಬೇಕೆಂದು ಕರೆಯಿತ್ತರು.

ಗ್ರಾಪ ಸದಸ್ಯ ಬಸವರಾಜ ಬಿ ಮಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ , ಗುರು ತಿಗಡಿ, ಪ್ರಾರೆ ಸಮನ್ವಾಧಿಕಾರಿ ಎಸ್.ಎಚ್. ಬೆಳವಟಗಿ, ಆರ್.ಎಸ್.ಗುರುಮಠ, ಜಿ.ಬಿ.ಸಜ್ಜನ, ವೀರಣ್ಣ ಒಡ್ಡಿನ, ಚಂದ್ರು ತಿಗಡಿ, ಮಡಿವಾಳಪ್ಪ ಅಣ್ಣಿಗೇರಿ, ರತ್ನವ್ವ ಸಿರಗುಪ್ಪಿ, ಗಂಗವ್ವ ಮಾಯಕರ, ಶೇಖರಗೌಡ ಪಾಟೀಲ, ಕರೆಪ್ಪ ಮುತ್ತಗಿ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಲಕ್ಕಮ್ಮನವರ ಸ್ವಾಗತಿಸಿದರು. ಸಿದ್ದಪ್ಪ ಮುತ್ತಗಿ ನಿರೂಪಿಸಿದರು. ಪಾಟೀಲ ವಂದಿಸಿದರು. ನಂತರ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರು ಕೆಲವು ಮಾಟದ ಪ್ರಾತ್ಯಕ್ಷಿಕೆಗಳನ್ನು ಮಾಡಿತೋರಿಸಿ ಪವಾಡದ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಮನದಟ್ಟು ಮಾಡಿದರು.

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಯಶಸ್ವಿ

ಹೆಬ್ಬಳ್ಳಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಸದ್ಗುರು ವಾಸುದೇವ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಲಾಯಿತು.

ತಾಲೂಕ ಪಂಚಾಯತ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಸಂವಿಧಾನದ ಆಶಯ ಮತ್ತು ಮೂಲಭೂತ ಹಕ್ಕುಗಳಲ್ಲಿ ಪ್ರಧಾನವಾದ ಅಂಶ ಈ ದೇಶದ ಪ್ರತಿಯೊಬ್ಬರಿಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿದೆ.  ಸೌರವ್ಯೂಹ ಭೂಮಿ ಸೂರ್ಯ, ಆಕಶ ವಿಶ್ವದ ಅಗಾಧ ವಿಸ್ಮಯಗಳು ಇವುಗಳಲ್ಲಿ ವ್ಯತ್ಯಾಸ ಮತ್ತು ಬದಲಾವಣೆಗಳು ನಿರಂತರವಾಗಿ ಆಗುತ್ತವೆ. ಯಾವುದೇ ಪವಾಡ ಎಂದು ಜನತೆ ನಂಬಬಾರದು. ಪವಾಡದ ಹಿಂದೆ ಇರುವ ಸತ್ಯ ಅರಿಯಬೇಕು.  ಪವಾಡದ ಹಿಂದೆ ವೈಜ್ಞಾನಿಕ ಕಾರಣ ಇರುವುದನ್ನು ಕಂಡುಕೊಳ್ಳಲೇಬೇಕೆಂದರು.

ಧಾರವಾಡ ತಾಲೂಕ ಕೆ.ಜೆ.ವಿ.ಎಸ್. ಅಧ್ಯಕ್ಷ ಜಿ.ಟಿ.ಶಿರೋಳ ಬಹುಸಂಖ್ಯಾತ ಜನರ ಭಾವನೆಗಳ ಜೊತೆ ಸಮಸ್ಯೆಗಳ ಜೊತೆ ಬದುಕಿನ ಜೊತೆ ಮುಗ್ಧತೆಯ ಮತ್ತು ಅಜ್ಞಾನದ ಜೊತೆ ಮನುಕುಲ, ಪವಾಡ ಎಂಬ ವಿಷಯದ ಕುರಿತು ಆಟವಾಡುತ್ತಿದ್ದ ಜನರಿಗೆ ಮಂಕು ಬೂದಿ ಎರಚುವ ಜನರಿಂದ ಜಾಗೃತಿಯಿಂದಿರಲು ಕರೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಲಕ್ಕಮ್ಮನವರ, ಹಸೀನಾ ಸಮುದ್ರಿ, ರಾಠೋಡ, ಮಹಾಂತೇಶ.ಟಿ., ಎಲ್.ಆಯ್.ಲಕ್ಕಮ್ಮನವರ, ಕೆ.ಜಿ.ನಾಡಗೇರ, ಶಿವು ಬನ್ನಿಗಿಡದ ಮುಂತಾದವರು ಹಾಜರಿದ್ದರು.

ಬಸವರಾಜ ಕುಕನೂರ ಸ್ವಾಗತಿಸಿದರು.  ಮಂಗಳಾ ಬನ್ನಿಗಿಡದ ನಿರೂಪಿಸಿದರು. ಬಸಮ್ಮ ಪೂಜಾರ ವಂದಿಸಿದರು.


ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

Monday, December 24, 2012

KJVS Committees Formation



ರಾಜ್ಯದ ಇಪ್ಪತ್ತೆಂಟು ಜಿಲ್ಲೆಗಳಲ್ಲಿ ಕೆಜೆವಿಎಸ್ ಸದಸ್ಯತ್ವ ನೋಂದಣಿಯಾಗಿದ್ದು ಸದಸ್ಯತ್ವ ಆಗಿರುವ ಎಲ್ಲೆಡೆ ಸಮಿತಿಗಳನ್ನು ರಚನೆ ಮಾಡಲು ರಾಜ್ಯ ಸಮಿತಿ ಮನವಿ ಮಾಡಿದೆ.

ಸ್ಥಳೀಯ ಸಮಿತಿ: ಹತ್ತು ಜನ ಸದಸ್ಯರಿರುವ ಕಡೆಗಳಲ್ಲಿ ಸ್ಥಳೀಯ ಸಮಿತಿಯನ್ನು ರಚನೆ ಮಾಡುವುದು. ಸ್ಥಳೀಯ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ ಐದು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಇದರಂತೆ ಸಮಿತಿಯನ್ನು ರಚಿಸಿ ಎಲ್ಲ ಸದಸ್ಯರ ವಿಳಾಸ, ದೂರವಾಣಿ, ಈಮೇಲ್ ಇತರ ವಿವರಗಳನ್ನು ರಾಜ್ಯ ಕಛೇರಿಗೆ ಕಳಿಸಿಕೊಡುವುದು.

ತಾಲೂಕು ಸಮಿತಿ: ಇಪ್ಪತ್ತು ಜನ ಸದಸ್ಯರಿರುವ ಕಡೆಗಳಲ್ಲಿ ಅಥವಾ ಎರಡು ಸ್ಥಳೀಯ ಸಮಿತಿಗಳಿರುವ ತಾಲೂಕುಗಳಲ್ಲಿ ತಾಲೂಕು ಸಮಿತಿಯನ್ನು ರಚನೆ ಮಾಡುವುದು. ತಾಲೂಕು ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ ಎಂಟು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಇದರಂತೆ ಸಮಿತಿಯನ್ನು ರಚಿಸಿ ಎಲ್ಲ ಸದಸ್ಯರ ವಿಳಾಸ, ದೂರವಾಣಿ, ಈಮೇಲ್ ಇತರ ವಿವರಗಳನ್ನು ರಾಜ್ಯ ಕಛೇರಿಗೆ ಕಳಿಸಿಕೊಡುವುದು.

ಜಿಲ್ಲಾ ಸಮಿತಿ: ಒಂದು ಜಿಲ್ಲೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೆಜೆವಿಎಸ್ ತಾಲೂಕು ಸಮಿತಿಗಳಿದ್ದಲ್ಲಿ ಕೆಜೆವಿಎಸ್ ಜಿಲ್ಲಾ ಸಮಿತಿಯನ್ನು ರಚಿಸುವುದು. ಜಿಲ್ಲಾ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಎರಡು ಜನ ಉಪಾಧ್ಯಕ್ಷರು, ಎರಡು ಜನ ಸಹಕಾರ್ಯದರ್ಶಿಗಳಿರಬಹುದು. ಇವರುಗಳ ಜೊತೆಗೆ ಎಂಟು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ.

ಸಮಿತಿ ಸಭೆಗಳು: ಸ್ಥಳೀಯ ಸಮಿತಿ ಹಾಗೂ ತಾಲೂಕು ಸಮಿತಿಗಳು  ಕನಿಷ್ಟ ತಿಂಗಳಿಗೊಮ್ಮೆ ಹಾಗೂ ಜಿಲ್ಲಾ ಸಮಿತಿ ಕನಿ ಕನಿಷ್ಟ ಎರಡು ತಿಂಗಳಿಗೊಮ್ಮೆ ಸಭೆ ಸೇರುವುದು. ತುರ್ತು ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಸಭೆ ಸೇರುವುದು. ಸಭೆ ನಡೆದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ತುಂಬಿಸಿ ರಾಜ್ಯ ಕಛೇರಿಗೆ ಕಳಿಸುವುದು.