Thursday, February 28, 2013

National Science Day Report of Hospet-2

Prof.Abdul Samad Kotturu addressing as the Chief Guest

Ashwini School Students and Teachers in the audience

Jambanna HM Speaking in the program

National Science Day Report of Hospet-1

ಪ್ರಶ್ನಿಸುವ ಮನೋಭಾವ
ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

KJVS, Hospet, National Science Day

Jambanna addressing
Children Scientists

Children Scientists

Umamaheshwar singing Songs about the importance of Scientific orientation


ಹೊಸಪೇಟೆ.ಫೆ.28 :

ವಿದ್ಯಾರ್ಥಿ ಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಪಕ್ಷಿತಜ್ಞ ಅಬ್ದುಲ್ ಸಮದ್ ಕೊಟ್ಟೂರು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿ ದರು. 

ಅವರು ನಗರದ ಚಿತ್ತವಾಡ್ಗಿ ಯಲ್ಲಿರುವ ಅಶ್ವಿನಿ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಡಾರ್ವಿನ್ನನ ವಿಕಾಸವಾದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. 

ಯಾವುದೇ ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿವೇಚಿಸಿ, ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಬೇಕು. ಪ್ರಶ್ನಿಸುವ ಮನೋಭಾವ ವಿಜ್ಞಾನದ ತಳಹದಿ. ವಿಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕೆ ಹೊರತು, ದುರ್ಬಳಕೆ ಮಾಡಿಕೊಳ್ಳಬಾರದು. ಇಂದಿನ ಅನೇಕ ಮಾಧ್ಯಮಗಳು ತಂತ್ರಜ್ಞಾನವನ್ನು ಬಳಸಿಕೊಂಡು ಜೋತಿಷ್ಯ, ವಾಸ್ತು ಕುರಿತು ಮೌಢ್ಯವನ್ನು ತುಂಬುತ್ತಿರುವುದು ವಿಷಾದಕರ. ನೈಸರ್ಗಿಕ ಸಂಪನ್ಮೂಲಗಳನ್ನು ನಿಯಂತ್ರಿತವಾಗಿ ಬಳಸಿ, ಭೂಮಿಯ ಜೈವಿಕ ಸಮತೋಲನವನ್ನು ಕಾಪಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಪ್ರೊ. ಎಸ್.ಎಂ. ಶಶಿಧರ ಮಾತನಾಡಿ, ಸರ್ಕಾರವು ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ಪ್ರತಿ ಮಗುವಿನಲ್ಲಿಯೂ ಒಬ್ಬ ವಿಜ್ಞಾನಿ ಇರುತ್ತಾನೆ. ಶಿಕ್ಷಣವು ಮಗುವಿನಲ್ಲಿರುವ ಕುತೂಹಲ ಹಾಗೂ ಬೆರಗುಗಳನ್ನು ಗುರುತಿಸಿ ಬೆಳೆಸಬೇಕು ಎಂದರು.

ಚೇತನ ಸಾಹಿತ್ಯ ಸಂಸ್ಥೆಯ ಜಂಬುನಾಥ ಎಚ್.ಎಂ., ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಶ್ವಿನಿ ಶಾಲೆಯ ಮುಖ್ಯಗುರು ಕೆ.ಬಿ.ವಿಜಯಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಆರಂಭದಲ್ಲಿ ಕಲಾವಿದ ಎಂ.ಉಮಾಮಹೇಶ್ವರ ವಿಜ್ಞಾನ ಗೀತೆಯನ್ನು ಹಾಡಿದರು. ಕರ್ನಾಟಕ ಸಾಂಸ್ಕøತಿಕ ಸಂಸ್ಥೆಯ ಟಿ.ಎಂ.ನಾಗಭೂಷಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಶಿಕ್ಷಕ ಲವಕುಮಾರ್ ವಂದಿಸಿದರು.

Wednesday, February 27, 2013

National Science day at Hospet


ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಬಳ್ಳಾರಿ ಜಿಲ್ಲಾ ಘಟಕ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ

28-02-2013 ಗುರುವಾರ
ಮಧ್ಯಾಹ್ನ 2.30
ಅಶ್ವಿನಿ ಪ್ರೌಢಶಾಲೆಚಿತ್ತವಾಡಿಗಿಹೊಸಪೇಟೆ.

ಉಪನ್ಯಾಸ : ಶ್ರೀ ಸಮದ್ ಕೊಟ್ಟೂರ್.
ಉಪನ್ಯಾಸಕರುಸ.ಪ.ಪೂ.ಕಾಲೇಜ್ಟಿ.ಬಿ.ಡ್ಯಾಂ.
ವಿಷಯ     : ಡಾರ್ವಿನ್ ವಿಕಾಸ ವಾದ
ಅತಿಥಿಗಳು : ಶ್ರೀ ವಿಜಯಕುಮಾರ
ಮುಖ್ಯ ಗುರುಗಳುಅಶ್ವಿನಿ ಶಾಲೆ. ಚಿತ್ತವಾಡಿಗಿ.
ಅಧ್ಯಕ್ಷತೆ    : ಪ್ರೊ. ಎಸ್.ಎಂ.ಶಶಿಧರ
ರಾಜ್ಯ ಸಹ ಕಾರ್ಯದರ್ಶಿಗಳುಕ.ಜ್ಞಾ.ವಿ.ಸ. ಬೆಂಗಳೂರು

ಸಹಕಾರ
ಚೇತನ ಸಾಹಿತ್ಯ ಸಂಸ್ಥೆಹೊಸಪೇಟೆ
ಕರ್ನಾಟಕ ಸಾಂಸ್ಕೃತಿಕ ಸಂಸ್ಥೆಹೂವಿನಹಡಗಲಿ / ಹೊಸಪೇಟೆ
ಸಮುದಾಯಹೊಸಪೇಟೆ

KJVS Sammilana-2

 KJVS Sammilana- 3D Wall 2 
(Needs Adobe Flash Player plugin browser; Best viewed in Chrome)

Tuesday, February 19, 2013

Friday, February 15, 2013

SHAIKSHANIKA SAMMILANA

The invitation for the release of SHIKSHANA SHILPI magazine and SHAIKSHANIKA SAMMILANA to be held in KR Nagar on 16th and 17th in Govt.First Grade College, K.R.Nagar. 


Friday, February 8, 2013

ಶೈಕ್ಷಣಿಕ ಸಮಾವೇಶ ೧೬ರಿಂದ

ಫೆಬ್ರವರಿ ೧೬ ಮತ್ತು ೧೭ರಂದು ಮೈಸೂರು ಜಿಲ್ಲೆ ಕೆ.ಅರ್. ನಗರದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿ ಕೊಂಡಿದೆ.
ಈ ಸಮಾವೇಶದಲ್ಲಿ ಶಿಕ್ಷಣ ಹಕ್ಕು ಕಾಯಿದೆ, ನಿರಂತರ ಮೌಲ್ಯ ಮಾಪನ, ವಿಜ್ಞಾನ ಶಿಕ್ಷಣ, ಗಣಿತದ ಚಟುವಟಿಕೆಗಳು, ವಿಜ್ಞಾನ ಸಂಘ ಮುಂತಾದ ವಿಷಯಗಳ ಬಗ್ಗೆ ಶೈಕ್ಷಣಿಕ ಗೋಷ್ಟಿಗಳು ಜರುಗಲಿದ್ದು, ಸಮಾವೇಶದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜೆಯನ್ನು ನಿರ್ದೇಶಕರು, ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಸುತ್ತೊಲೆಯನ್ನು ಹೊರಡಿಸಿದ್ದು, ಬಳ್ಳಾರಿ ಜಿಲ್ಲೆಯ ಆಸಕ್ತ ಶಿಕ್ಷಕರು, ವಿಜ್ಞಾನಾಸಕ್ತರು ಈ  ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಜ್ಯ ಜಂಟಿ ಕಾರ್ಯದರ್ಶಿ ಎಸ್. ಎಂ. ಶಶಿಧರ (ಮೋ. ೯೯೮೬೨೧೪೩೭೫) ಹಾಗೂ  ಟಿ.ಎಂ.ನಾಗಭೂಷಣ (ಮೋ. ೯೮೮೬೧೮೫೧೪೬) ಇವರನ್ನು ಸಂಪರ್ಕಿಸಲು ಕೋರಲಾಗಿದೆ.





ಫೆ.16ರಿಂದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ- ಪ್ರಜಾವಾಣಿ



ಕೆ.ಆರ್.ನಗರ: ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಪಟ್ಟಣದಲ್ಲಿ ಫೆಬ್ರುವರಿ 16 ಮತ್ತು 17ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ ಮತ್ತು `ಶಿಕ್ಷಣ ಶಿಲ್ಪಿ' ವಾರಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಬದಲಾವಣೆ ಅವಶ್ಯ. ಇಂತಹ ಬದಲಾವಣೆಗಳ ಬಗ್ಗೆ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ ಮತ್ತು ಸಮುದಾಯದ ಗಮನ ಸೆಳೆಯುವ ಉದ್ದೇಶದಿಂದ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ `ಶಿಕ್ಷಣ ಶಿಲ್ಪಿ' ಶೈಕ್ಷಣಿಕ ವಾರಪತ್ರಿಕೆ ಹೊರ ತರಲಾ ಗುತ್ತಿದೆ ಎಂದರು.
ಫೆ 16ರಂದು ನಡೆಯುವ ಉದ್ಘಾಟ ನಾ ಕಾರ್ಯಕ್ರಮಕ್ಕೆ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಡಿಎಸ್‌ಇಆರ್‌ಟಿ ನಿರ್ದೇಶಕ ರಾಮ ರಾವ್, ಬಿಸಿಯೂಟ ಸಹನಿರ್ದೇಶಕ ಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಪ್ರೊ. ಎಚ್.ಆರ್. ರಾಮಕೃಷ್ಣರಾವ್, ವಾರಪತ್ರಿಕೆ ಸಂಪಾದಕ ಈ.ನಂಜಪ್ಪ, ಶಾಸಕ ಸಾ.ರಾ. ಮಹೇಶ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಜ್ಞರು ಭಾಗವಹಿಸಲಿದ್ದಾರೆ ಎಂದರು.
`ಸಾರ್ವಜನಿಕ ಶಿಕ್ಷಣ- ನಮ್ಮ ಬದ್ಧತೆ' ಮತ್ತು `ಶಿಕ್ಷಣ ಹಕ್ಕು ಮಸೂದೆ' ಕುರಿತು ವಿಚಾರಗೋಷ್ಠಿ ನಡೆಯಲಿದೆ.
ಅದೇ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ಜನಾರ್ದನ್ ಅವರಿಂದ ಗಾಯನ, ಹುಲಿಕಲ್ ನಟರಾಜ್ ಅವರಿಂದ ಪವಾಡ ರಹಸ್ಯ ಬಯಲು ಪ್ರದರ್ಶನ, `ಚಂದನ ಚಿಗುರು' ಚಿತ್ರ ಪ್ರದರ್ಶನ, ಬೆಂಗಳೂರಿನ ಅಸ್ಟ್ರನಾಮಿಕಲ್ ಸೊಸೈಟಿ ವತಿಯಿಂದ ಆಕಾಶ ವೀಕ್ಷಣೆ ಏರ್ಪಡಿಸ ಲಾಗಿದೆ ಎಂದು ಬಿಇಒ ತಿಳಿಸಿದರು.
ಫೆ. 17ರಂದು `ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನ' ಕುರಿತು ಬೆಂಗಳೂರಿನ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಗಣೇಶ್ ಭಟ್ಟ ಮಾತನಾಡಲಿದ್ದಾರೆ. ವಿಜ್ಞಾನ ಕಲಿಕೆ, ಗಣಿತದ ಚಟುವಟಿಕೆಗಳು, ತರಗತಿಯಲ್ಲಿ ಪರಿಣಾಮಕಾರಿ ಸಂವಹನ, ಓರಿಗಾಮಿ, ಮಕ್ಕಳ ವಿಜ್ಞಾನ ಸಂಘಗಳನ್ನು ರಚಿಸಿ ನಡೆಸುವುದು ಹೇಗೆ, ಗಣಿತದ ಕಿಟ್ ಪರಿಚಯ, ಮಕ್ಕಳಿಗಾಗಿ ಬೇಸಿಗೆ ಶಿಬಿರ ಕುರಿತು ಕಾರ್ಯಾಗಾರ ನಡೆಯಲಿದೆ.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ತಜ್ಞ ಜಿ.ಎಸ್. ಜಯದೇವ್, ಪಠ್ಯ ಪುಸ್ತಕ ನಿರ್ದೇಶನಾಲಯದ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಡಿಡಿಪಿಐಗಳು ಭಾಗವಹಿಸ ಲಿದ್ದಾರೆ. ಈ ಎರಡು ದಿನಗಳ ಕಾರ್ಯ ಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಫೆ. 15ರೊಳಗಾಗಿ ರೂ. 200 ಶುಲ್ಕ ನೀಡಿ ಹೆಸರು ನೋಂದಾಯಿಸಿ  ಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.
ರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಬಿ.ಸಿ. ದೊಡ್ಡೇಗೌಡ, ಶಿಕ್ಷಕರಾದ ಲೋಕೇಶ್, ಗಿರೀಶ್, ಮಹೇಶ್, ಜಿ.ಟಿ. ರಾಮೇಗೌಡ, ಲಕ್ಷ್ಮೀಕಾಂತ್, ಜಗದೀಶ್ ಇದ್ದರು.