Friday, March 1, 2013

National Science Day: Dharwad District Unit

 ವನಹಳ್ಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಶಸ್ವಿ 






ಹೆಬ್ಬಳ್ಳಿ: ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಸಿ.ವಿ. ರಾಮನ್ ಇವರು ದಿ ಡಿಸ್ಕವರಿ ಆಫ್ ರಾಮನ್ ಇಫೆಕ್ಟ್ ಬೆಳಕು ಚದುರುವಿಕೆಯ ನಿಯಮವನ್ನು ೧೯೨೮ ಫೆಬ್ರುವರಿ ೨೮ ರಂದು ರಾಷ್ಟ್ರಕ್ಕೆ ಸಮರ್ಪಿಸಿ ಮುಂದೆ ೧೯೩೦ ರಂದು ಇವರಿಗೆ ನೋಬಲ್ ಅವಾರ್ಡ ಘೋಷಣೆಯಾದ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು ತಾಲೂಕಿನ ಕೊನೆಯ ಪುಟ್ಟ ಹಳ್ಳಿ ವನಹಳ್ಳಿ ಗ್ರಾಮದಲ್ಲಿ  ಪ್ರಾಥಮಿಕ ಶಾಲಾ ಮಕ್ಕಳು ತಾವೇ ತಯಾರಿಸಿದ ವಿಜ್ಞಾನದ ಪ್ರಯೋಗಗಳು ವಿಜ್ಞಾನದ ಹೊಸ ಹೊಸ ಚಟುವಟಿಕೆಗಳ ಗಣಿತ ಮತ್ತು ವಿಜ್ಞಾನ ಮೇಳವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಧಾರವಾಡ ಇವರ ಆಶ್ರಯದಲ್ಲಿ ಯಶಸ್ವಿಗೊಳಿಸಲಾಯಿತು.

ಆಲೂಗಡ್ಡೆಯಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಯೊಂದಿಗೆ ಮೇಳವನ್ನು ಉದ್ಘಾಟಿಸಿದ ಗ್ರಾಮದ ಶಿಕ್ಷಣ ಪ್ರೇಮಿ ಸಿದ್ದಪ್ಪ ವೆಂಕಪ್ಪ ಪ್ಯಾಟಿ ಮಕ್ಕಳಿಗೆ ರಾಷ್ಟ್ರೀಯ ದಿನಗಳ ಮಹತ್ವವನ್ನು ಚಟುವಟಿಕೆಯಾಧಾರಿತವಾಗಿ ಕಲಿಸುತ್ತಿರುವುದು ಶ್ಲಾಘನೀಯವಾಗಿದ್ದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಮತ್ತು ಏಕೆ? ಏನು? ಹೇಗೆ? ಮುಂತಾದ ಪ್ರಶ್ನೆಗಳ ಮುಖೇನ ಮಕ್ಕಳನ್ನು ಕ್ರಿಯಾತ್ಮಕರನ್ನಾಗಿ ಮಾಡಲು ವಿಜ್ಞಾನ ಸಮಿತಿಯ ಕಾರ್ಯ ಕಾಯಕ ಶ್ಲಾಘನೀಯವಾಗಿದೆ ಎಂದರು.

ಕುಮಾರಿ ಪವಿತ್ರಾ ನಾವಳ್ಳಿ ಪರಿಸರ ಸ್ನೇಹಿ ಗ್ರಾಮದ ಮಾದರಿಯನ್ನು ವಿವರಿಸಿ ಅಚ್ಚರಿ ಮೂಡಿಸಿದಳು.  ಕೈಬೆರಳಿನಿಂದ ಮಗ್ಗಿಗಳು, ದ್ವಿಮಾನದಿಂದ ದಶಮಾನ ಪದ್ಧತಿಗೆ ಪರಿವರ್ತನೆ ಮಾಯಾ ಚೌಕ ಗಣಿತದ ಮ್ಯೂಜಿಕ್ ಅಂಕಿಗಳು, ಲಿಫ್ಟನ ಮಾದರಿ, ರಾಕೇಟನ ಮಾದರಿ, ಖಾರ ಕುಟ್ಟುವ ಯಂತ್ರ, ಜೆ.ಸಿ.ಬಿ. ವಿದ್ಯುತ್ ರೈಲು  ಮುಂತಾದ ವಿಜ್ಞಾನದ ಮತ್ತು ಗಣಿತದ ಮಾದರಿಗಳನ್ನು ಮಕ್ಕಳಿಗೆ ತಯಾರಿಸಿ ನೆರೆದ ಗ್ರಾಮಸ್ಥರಿಗೆ ವಿವರಿಸಿದ್ದು ಗ್ರಾಮದ ಜನರಿಗೆ ಅಚ್ಚರಿಯ ಜೊತೆಗೆ ಮಕ್ಕಳ ಕಲಿಕೆ ಸಾಧನೆ ಕುರಿತು iಕ್ಕಳು ಮತ್ತು ಶಿಕ್ಷಕರನ್ನು ಹಾಡಿ ಹೊಗಳಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ನಾವಳ್ಳಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಎಲ್.ಆಯ್.ಲಕ್ಕಮ್ಮನವರ, ಅಶೋಕ ನಾವಳ್ಳಿ, ಎಮ್.ಎಚ್.ಹೊನ್ನಕೊರೆನ್ನವರ, ನೀಲಪ್ಪ ಹೊಳೆಬಸಣ್ಣವರ, ಪಂಚಯ್ಯ ಹಿರೇಮಠ, ಶಿವಾನಂದ ಬಡಿಗೇರ, ಬಸಪ್ಪ ಹೆಬ್ಬಳ್ಳಿ ಮುಂತಾದವರು ಹಾಜರಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ಯೋಗೇಶ.ಜಿ. ಸ್ವಾಗತಿಸಿದರು. ಕೆಜೆವಿಎಸ್ ಕಾರ್ಯದರ್ಶಿ ಬಸವರಾಜ ಕರೂರ ನಿರೂಪಿಸಿದರು. ಬಿ.ವಾಯ್.ಬಿರುಕಲ್ ವಂದಿಸಿದರು.