Friday, February 28, 2014

National Science Day at Hospet

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು

 ಮೈಗೂಡಿಸಿಕೊಳ್ಳಬೇಕು

 -ಪ್ರೊ.ಎಸ್.ಎಂ ಶಶಿಧರ


ಹೊಸಪೇಟೆ : ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡರೆ ರಾಷ್ಟ್ರವು ಪ್ರಗತಿ ಹೊಂದಲು ಸಾಧ್ಯ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಪೊ. ಎಸ್. ಎಂ. ಶಶಿಧರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಮತ್ತು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಅನೇಕ ಕುತೂಹಲ ಮತ್ತು ವಿಸ್ಮಯಗಳ ಆಗರ. ವಿದ್ಯಾರ್ಥಿಗಳು ಪ್ರತಿಯೊಂದು ವಿದ್ಯಮಾನವನ್ನು ಪ್ರಶ್ನಿಸಿ ವಿಮರ್ಶಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ದೇಶವನ್ನು ಕಾಡುತ್ತಿರುವ ಮೌಢ್ಯಗಳ ವಿರುದ್ಧ ಪ್ರಬಲ ಧ್ವನಿ ಎತ್ತಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದ ಯುವ ವಿಜ್ಞಾನಿ ಬಿ ಹೆಚ್ ಎಂ. ದಾರುಕೇಶ ಭಾರತದ ಅಂತರಿಕ್ಷ ಸಂಶೋಧನೆಗಳನ್ನು ಕುರಿತು ಮಾತನಾಡಿ ನಮಗೆ ಇರುವ ಒಂದೇ ಭೂಮಿಯನ್ನು ಕಾಪಾಡಿಕೊಳ್ಳದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದರು.  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಇವರು ವಿಶ್ವವು ರೂಪುಗೊಂಡ ಬಗೆ, ಅದರ ವಿಕಸನವನ್ನು ಸಾಕ್ಷ್ಯಚಿತ್ರಗಳ ನೆರವಿನೊಂದಿಗೆ ವಿವರಿಸಿದರು.

ವನ್ಯಜೀವಿ ಸಂಶೋಧಕರಾದ ಕೆ.ಎಸ್. ಅಬ್ದುಲ್ ಸಮದ್ ಮಾತನಾಡಿ ಅಪರೂಪದ ಪ್ರಾಣಿ ಮತ್ತು ಪಕ್ಷಿಸಂಕುಲಗಳು ಮೂಢನಂಬಿಕೆಗಳ ಆಚರಣೆಯಿಂದಾಗಿ ಅವನತಿ ಹೊಂದುತ್ತಿವೆ ಎಂದು ವಿಷಾದಿಸಿದರಲ್ಲದೇ, ಮೂಢನಂಬಿಕೆ ನಿಷೇಧ ಕಾನೂನಿಗೆ ನಾಡಿನ ಪ್ರಜ್ಞಾವಂತರು  ಬೆಂಬಲಿಸುವುದು ವರ್ತಮಾನದ ಅಗತ್ಯವಾಗಿದೆ ಎಂದರು. 

ಇನ್ನೊಬ್ಬ ಅತಿಥಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಟಿ.ಹೆಚ್.ಎಂ. ದಾರುಕಾಸ್ವಾಮಿ ಅವರು ಸರ್ ಸಿ.ವಿ.ರಾಮನ್ ಅವರ ಕೊಡುಗೆಗಳನ್ನು ಕುರಿತು ಮಾತನಾಡಿದರಲ್ಲದೇ ಅವರ ಕುರಿತಾದ ಸಾಕ್ಷಚಿತ್ರವನ್ನು ಪ್ರದರ್ಶಿಸಿದರು.  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ  ಡಾ.ಬಿ.ಗೋವಿಂದರಾಜು ಅವರು ಮಾತನಾಡಿ ವಿಜ್ಞಾನದ ತಿಳುವಳಿಕೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಪನ್ನಂಗಧರ ವಹಿಸಿ ವಿದ್ಯಾರ್ಥಿಗಳು ಪಠ್ಯಕ್ಕಷ್ಟೇ ಸೀಮಿತವಾಗದೇ ವಿಶ್ವದ ವಿಶಾಲಜ್ಞಾನವನ್ನು ಓದುವುದರ ಮೂಲಕ ಅರಿಯುವ ಪ್ರಯತ್ನಕ್ಕೆ ಮುಂದಾಗಲಿ ಎಂದರು. 

 ಕಾರ್ಯಕ್ರಮದ ಅಂಗವಾಗಿ ಜರುಗಿದ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಪುಸ್ತಕ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸುವ ಕಿರುಚಿತ್ರಗಳು  ವಿದ್ಯಾರ್ಥಿಗಳ ಗಮನ ಸೆಳೆದವು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ.ಬಿ.ಜಿ.ಕನಕೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾವೀನ್ಯ ಕೂಟದ ಸಂಚಾಲಕ ಹಾಗೂ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ಸಮನ್ವಯಾಧಿಕಾರಿ ಡಾ.ಕೆ.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು ಮತ್ತು ರಾಷ್ಟ್ರೀಯ ಸೇವಾಯೋಜನಾಧಿಕಾರಿ ಟಿ.ಹೆಚ್.ಬಸವರಾಜ ವಂದಿಸಿದರು.  

Thursday, February 27, 2014

Challenges of girl child education


Session on the Challenges

of Girl-Child Education

Speakers in the session on challeges of girl child education during state level education conference organised on the occasion of First Anniversary of Education monthly SHIKSHANA SHILPI published by karnataka jnana Vijnana Samithi on 21st Feb.2014 at Besant park, Doddaballapur, Banglore Rural District
Ramadevi, Vice-President of Karnataka state Primary Teachers Association
Prof.Kodirangappa, Govt. college of Education, Chikkaballapur 
Dr.B.T.Lalithanaik, Writer and former minister
Dr.B.T.Lalithanaik, Writer and former minister

Main speakers are Ramadevi, vice president of Karnataka state primary teachers association, Prof.Kodirangappa, Govt. college of education, Chikkaballapur, Mr.N.Krishanappa Kodipalya, CEO of Bangalore rual Zilla Panchayath. The session was chaired by Dr.B.T.Lalithanaik, witer and ex minister. The session conducted by H.Chandrappa, Jt.secretary of KJVS

Sunday, February 23, 2014

Doddaballapur Shaikshanika sammila Inauguration-2

 ಹೀಗೂ ಒಂದು ಉದ್ಘಾಟನೆ; ಕನ್ನಡದ ಮುದ್ದಾದ ಅಕ್ಷರ ಮಾಲೆಯ ಸು-ದರ್ಶನ, ನಾಡು-ನುಡಿಯ ಪ್ರೀತಿಯ ದ್ಯೋತಕ; ಕೆಜೆವಿಎಸ್ ಸಮ್ಮಿಲನದಲ್ಲಿ.
Inaugurated differently, by exhibiting Kannada alphabets
BT Lalitha Naik, HR Ranganath of Public TV, HR Ramakrishna Rao, E,Nanjappa, E.Basavaraju, Hulikal Nataraj, Samethanahali Lakshman Singh, N.Hanumanthe Gowda nad others on dias
 Delegates- a 'mini Karnataka'
Felicitation to the dignitaries
Introductory remarks by E.Basavaraju secretary,Karnataka Jnana Vijnana Samithi during state level education conference organised on the occasion of first anniversary of Shikshana Shilpi education monthly.

Doddaballapur Shaikshanika sammila Inauguration-1


Inaugural session of state level Shaikshanika sammila on the occasion of first anniversary of SHIKSHANA SHILPI Education Monthly published by Karnataka Jnana Vijnana Samithi (KJVS)

BT Lalitha Naik, HR Ranganath of Public TV, HR Ramakrishna Rao, E,Nanjappa, E.Basavaraju, Hulikal Nataraj, Samethanahali Lakshman Singh, N.Hanumanthe Gowda nad others on dias.
Thousands of Delegates from all over Karnataka attended this Sammilana

Report of KJVS Conference in Udayavani


ಜಾಗತೀಕರಣದಿಂದ ಮಹಿಳೆಯಲ್ಲಿ ಇಬ್ಬಂದಿತನ

Saturday, February 22, 2014

Report of KJVS Conference in Kannada Prabha

KannadaprabhaSaturday, March 01, 2014 11:33AM IST





ವೈಚಾರಿಕ ಚಿಂತನೆಯಿಂದ ದೇಶ ಪ್ರಗತಿ ಸಾಧ್ಯ

ದೊಡ್ಡಬಳ್ಳಾಪುರ: ವೈಚಾರಿಕ ಚಿಂತನೆಗಳನ್ನು ದೇಶ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆದರೆ ಮೌಢ್ಯವನ್ನು ಬಿತ್ತುವ ಮತ್ತು ಪ್ರಚೋದಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿರುವುದು ಆತಂಕಕಾರಿ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಾನವ ಹಕ್ಕುಗಳ ಜಾಗೃತಿ ಸಮಿತಿ ನೇತೃತ್ವದಲ್ಲಿ ಇಲ್ಲಿನ ಬೆಸೆಂಟ್ ಪಾರ್ಕ್ನಲ್ಲಿ ಶುಕ್ರವಾರ ಆರಂಭವಾದ ಶಿಕ್ಷಣ ಶಿಲ್ಪಿ ಮಾಸಪತ್ರಿಕೆ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ವಿಚಾರವಂತಿಕೆಯ ಮೂಲ ಆದರ್ಶಗಳು ಬೆಳೆಯಬೇಕು. ನಮ್ಮ ಮಕ್ಕಳನ್ನು ಭವಿಷ್ಯದ ಆತಂಕಗಳನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಮಾನಸಿಕವಾಗಿ ಸಶಕ್ತಗೊಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಮೇಲಿರುವ ಜವಾಬ್ದಾರಿ ಮಹತ್ವದ್ದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಪವಾಡ ಭಂಜಕ ಹುಲಿಕಲ್ ನಟರಾಜ್ ಅವರ ಆತ್ಮಕಥೆ 'ಕಲ್ಲು ಮುಳ್ಳಿನ ಹಾದಿ' ಪುಸ್ತಕವನ್ನು ಪತ್ರಕರ್ತ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿದರು.
ಸಮಿತಿ ಕಾರ್ಯದರ್ಶಿ ಈ.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್, ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಬಿಇಒ ತಿಮ್ಮೇಗೌಡ ಸೇರಿದಂತೆ ಜ್ಞಾನ  ವಿಜ್ಞಾನ ಸಮಿತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಸಮಾರೋಪ: ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಫೆ.22ರ ಶನಿವಾರ ನಡೆಯಲಿದೆ. ಸರ್ವಶಿಕ್ಷಣ ಅಭಿಯಾನ ಯೋಜನಾ ನಿರ್ದೇಶಕ ಮುದ್ದುಮೋಹನ್ ಸಮಾರೋಪ ಭಾಷಣ ಮಾಡಲಿದ್ದು, ಜ್ಞಾನ ವಿಜ್ಞಾನ ಸಮಿತಿ ಸಹ ಕಾರ್ಯದರ್ಶಿ ಎಸ್.ಎಂ.ಶಶಿಧರ್ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕರಾದ ಎಂಟಿಬಿ ನಾಗರಾಜ್, ಡಾ.ಅಶ್ವತ್ಥ್ನಾರಾಯಣ್, ವೈ.ಎ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಐಎಎಸ್ ಅಧಿಕಾರಿ ಭರತ್ಲಾಲ್ ಮೀನಾ ಅಧ್ಯಕ್ಷತೆಯಲ್ಲಿ ಶಿಕ್ಷಕರು ಮತ್ತು ಸಾಮಾಜಿಕ ಬದಲಾವಣೆ ವಿಚಾರ ಗೋಷ್ಠಿ, ವಿಚಾರವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ನಟರಾಜ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ-2013 ಕುರಿತ ಗೋಷ್ಠಿಗಳು ನಡೆಯಲಿವೆ

Sunday, February 16, 2014

Welcome to Doddaballapura

KJVS Shaikshanika Sammilana (Educational Summit)
 will be organised on 21-22 Feb 2014 at Scout camp of Doddaballapura.
All those who wish to share and gain knowledge and experience
in the domain of education, are welcome to this program.


Saturday, February 15, 2014

Sunday, February 9, 2014

OOD Letter for KJVS Shaikshanika Sammmilana


ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ

ಫೆಬ್ರವರಿ ೨೧ ಮತ್ತು ೨೨ ರಂದು
ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್) ಹೊರತರುತ್ತಿರುವ ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನಕಾರ್ಯಕ್ರಮ ೨೦೧೪ರ ಫೆಬ್ರವರಿ ೨೧ ಮತ್ತು ೨೨ ರಂದು ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕಿನಲ್ಲಿ(ಸ್ಕೌಟ್ ಕ್ಯಾಂಪ್)ನಡೆಯಲಿದೆ.     ಎರಡು ದಿನಗಳ ಕಾಲ ನಡೆಯಲಿರುವ ಈ ಶೈಕ್ಷಣಿಕ ಸಮ್ಮಿಲನದಲ್ಲಿ ಉದ್ಗಾಟನೆಯನ್ನು ಮಾಜಿ ಶಿಕ್ಷಣ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ನೆರವೇರಿಸಲಿದ್ದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಹನುಮಂತೇಗೌಡರು, ಪಬ್ಲಿಕ್ ಟಿ.ವಿ ಯ ಶ್ರೀ ರಂಗನಾಥ್, ಪ್ರೊ.ರವಿವರ್ಮಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಮಾನವ ಹಕ್ಕು ಜಾಗೃತಿ ಸಮಿತಿಗಳು ಶಿಕ್ಷಣ ಇಲಾಖೆಯ ಸಹಕಾರದಿಂದ ಸಂಘಟಿಸುತ್ತಿವೆ. ದೊ.ಬ.ಪುರ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮ್ಮಿಲನದಲ್ಲಿ ೪ಗೋಷ್ಠಿಗಳು ನಡೆಯಲಿವೆ.

೧) ಹೆಣ್ಣುಮಕ್ಕಳ ಶಿಕ್ಷಣ - ಸವಾಲುಗಳು : ಪ್ರಸ್ತುತ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ ಕುರಿತಂತೆ ಈ ಗೋಷ್ಠಿಯಲ್ಲಿ  ವಿಷಯ ಮಂಡನೆ ಹಾಗೂ ಚರ್ಚೆ ನಡೆಯಲಿದೆ. ಪ್ರೊ.ಕೋಡಿರಂಗಪ್ಪ, ಮಾಜಿಸಚಿವೆ ಬಿ.ಟಿ.ಲಲಿತಾನಾಯಕ್, ರಾಜ್ಯಸರ್ಕಾರಿ ನೌಕರರ ಸಂಘದ ರಮಾದೇವಿ ಮುಂತಾದವರು  ಮಾತನಾಡಲಿದ್ದಾರೆ. 
೨) ಸರ್ಕಾರಿ ಶಾಲೆಗಳ ಸಬಲೀಕರಣ : ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಚರ್ಚಿಸಿ ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಳ್ಳುವುದು. ಈ ಗೋಷ್ಠಿಯಲ್ಲಿ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಗುರಿಕಾರ, ಕಾರ್ಯದರ್ಶಿ ನಾರಾಯಣಸ್ವಾಮಿ ಮುಂತಾದವರು ಮಾತನಾಡಲಿದ್ದಾರೆ.
೩) ಶಿಕ್ಷಕರು ಮತ್ತು ಸಾಮಾಜಿಕ ಬದಲಾವಣೆ : ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಲು ಸಾಧ್ಯವಿದೆ. ಸಮಾಜದ ಬದಲಾವಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಬಲ್ಲರು. ಈ ಬಗ್ಗೆ ಶಿಕ್ಷಕರೊಂದಿಗೆ ಸಂವಾದ ನಡೆಯಲಿದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಭರತ್ ಲಾಲ್ ಮೀನಾ ಅವರು ವಹಿಸಲಿದ್ದು ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ.ರವಿ, ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಡಾ.ರಾಜಾನಾಯಕ್, ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳು ಮಾತನಾಡಲಿದ್ದಾರೆ.
೪) ವೈಜ್ಞಾನಿಕ ಸಾಕ್ಷರತೆ : ಮೌಢ್ಯಾಚರಣೆಗಳ ನಿಯಂತ್ರಣಕ್ಕಾಗಿ ತಜ್ಞರ ತಂಡವು  ಮಸೂದೆಯನ್ನು ರಚಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿರುವ ಮಾಹಿತಿಗಳನ್ನು ಪೂರ್ಣವಾಗಿ ಅರಿಯದೆ ಪರ-ವಿರೋಧಗಳ ಚರ್ಚೆಗಳಾಗುತ್ತಿದೆ. ಮಸೂದೆಯಲ್ಲಿರುವ ವಾಸ್ತವಾಂಶಗಳ ಬಗ್ಗೆ ಚರ್ಚಿಸಿ ಬರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಗೋಷ್ಠಿಯಲ್ಲಿ ಮಸೂದೆ ರಚನಾ ತಂಡದ ಸದಸ್ಯರಾದ ಪ್ರೊ.ಎ.ಎಸ್.ನಟರಾಜ್, ಡಾ.ಹನುಮಂತಪ್ಪ, ಪ್ರೊ.ನಗರಗೆರೆ ರಮೇಶ್, ಶ್ರೀ ಹುಲಿಕಲ್ ನಟರಾಜು ಮುಂತಾದವರು ಮಾತನಾಡಲಿದ್ದಾರೆ.
  ೨೧ರ ರಾತ್ರಿ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ಅವರಿಂದ ಹಾಡುಗಳು, ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ರಹಸ್ಯ ಬಯಲು ತರಬೇತಿ, ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಹಾಗೂ ಕೋಲಾರದ ಶ್ರೀ ವಿ.ಎಸ್.ಎಸ್ ಶಾಸ್ತ್ರಿ ಅವರಿಂದ ಆಕಾಶ ವೀಕ್ಷಣೆಕಾರ್ಯಕ್ರಮವನ್ನು ಏರ್ಪಡಿಸಿದೆ. ಎರಡೂ ದಿನಗಳ ಕಾಲ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು, ಕಲಿಕಾ ಸಾಮಾಗ್ರಿಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಕರು ಫೆಬ್ರವರಿ ೧೫ರೊಳಗೆ ೨೦೦ರೂಗಳನ್ನು ಸ್ಥಳೀಯ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯಕರ್ತರ ಬಳಿ ಅಥವಾ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ನಂ.೮೫೬, ೩ನೇ ಸಿಕ್ರಾಸ್, ೩ನೇ ಮೇನ್, ಪ್ರಕಾಶ್‌ನಗರ, ಬೆಂಗಳೂರು-೫೬೦೦೨೧ ಈ ವಿಳಾಸಕ್ಕೆ ಕಳಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರತಿನಿಧಿಗಳಿಗೆ ಆಹಾರ, ವಸತಿ, ಲೇಖನ ಸಾಮಗ್ರಿ ಹಾಗೂ ಬ್ಯಾಗ್ ನೀಡಲಾಗುತ್ತದೆ. ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದೆ.