ಶುಕ್ರ ಸಂಗ್ರಮ ಕಾರ್ಯಾಗಾರ
ತುಮಕೂರು: ಶತಮಾನದ ದ್ವಿತೀಯ ಖಗೋಳ ವಿಸ್ಮಯ ಶುಕ್ರ ಸಂಕ್ರಮ ಕಾರ್ಯಾಗಾರ ಕುರಿತ ಒಂದು ದಿನದ ಕಾರ್ಯಾಗಾರವನ್ನು ಜೂ.೩ರಂದು ಬೆಳಗ್ಗೆ ೧೧ ಗಂಟೆಗೆ ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.
ವೈಜ್ಞಾನಿಕ ವಿಧಾನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕವಾಗಿ ತಿಳಿಸಿಕೊಡಲಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಖಗೋಳಾಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ಅಪರೂಪದ ಘಟನೆಗಳನ್ನು ವೀಕ್ಷಿಸಲು ಕೋರಲಾಗಿದೆ.
ಈ ಕಾರ್ಯಾಗಾರದಲ್ಲಿ ಶುಕ್ರ ಸಂಕ್ರಮ ಉಂಟಾಗುವ ಬಗ್ಗೆ, ಅದರ ಹಂತಗಳು ಮತ್ತು ವೀಕ್ಷಣೆಯನ್ನು ಮಾಡಲು ಸಹಕಾರಿಯಾಗುವ ಕಿಟ್‌ಗಳು ಮತ್ತು ಶುಕ್ರ ಸಂಕ್ರಮ ಪುಸ್ತಕ, ವಿಶೇಷ ಕನ್ನಡಕಗಳನ್ನು ಮಾರಾಟ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಚ್.ಎಂ. ವಸಂತಕುಮಾರ್, ೯೯೮೦೩೭೯೮೨೯, ಶಿವಕುಮಾರಸ್ವಾಮಿ, ೯೪೪೮೩೪೪೨೬೮ ಸಂಪರ್ಕಿಸುವಂತೆ ಕೋರಲಾಗಿದೆ.

