Monday, June 16, 2014

Membership Campaign: Meeting Prof.HRR

KJVS Office bearers greeting Prof.HRR
E.Nanjappa and E.Basavaraju during membership campaign

Membership campaign initiated by Prof.HRR 
Membership campaign initiated by Prof.HRR 

Friday, June 13, 2014

Free Summer Camp by KJVS Gadag Taluk Unit

ಸಮ್ಮರ್ ಕ್ಯಾಂಪಲ್ಲಿ, ಸಕತ್ ಮಜಾ
ಸರ್ಕಾರಿ ಶಾಲೇಲಿ, ಸೃಜನಶೀಲ ಕಲೆಗಳ ಅನಾವರಣ





ಗದಗ: ಬ್ಯಾಸಿಗಿ ರಜೆ ಬಂತು, ಮದುವೆ, ಮುಂಜಿವಿ, ಸಂಬಂಧಿಕರ ಮನೆಗಳಿಗೆ ಬೇಟಿ ಇತ್ಯಾದಿ ಯೋಜನೆಗಳನ್ನು ಶಿಕ್ಷಕರು ರೂಪಿಸುತ್ತಿರುವಾಗಲೆ , ಗದಗಿನ ಕೆಲ ಕ್ರಿಯಾಶೀಲ ಶಿಕ್ಷಕರು  ರಜೆಯ ಅವಧಿಯಲ್ಲಿ ಚಿಣ್ಣರಿಗಾಗಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ.
  ಜನ ಸಮುದಾಯದಲ್ಲಿ ವೈಜ್ಞಾನಿಕ, ವೈಚಾರಿ ಪ್ರಜ್ಞೆ ಮೂಡಿಸಲು ಜನ್ಮ ತಳೆದ ಸಂಸ್ಥೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ. ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.16 ರಲ್ಲಿ ಎಸ್.ಆರ್.ಬಂಡಿಯವರ ನೆತೃತ್ವದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕಾ ಘಟಕ ಗದಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 19-04-2014 ರಿಂದ 23-04-2014 ರವರೆಗೆ ಚಿಣ್ಣರ ಚೈತ್ರದ ಚಿಗುರು ಬೇಸಿಗೆ ಶಿಬಿರ ಚಿಣ್ಣರ ಬಣ್ಣದ ಲೋಕವನ್ನು ಸೃಷ್ಠಿಸಿತ್ತು.
ಶಿಬಿರದಲ್ಲಿ ಸಂಘಟಿಸಿದ ಚಟುವಟಿಕೆಗಳು
ಯೋಗ, ಧ್ಯಾನ ಮತ್ತು ಪ್ರಾಣಾಯಾಮ.
ಮಕ್ಕಳ ಏಕಾಗ್ರತೆ ಹೆಚ್ಚಿಸಿ , ಓದಿನಲ್ಲಿ ಆಸಕ್ತಿ ಹೆಚ್ಚಿಸಲು ಬೆಳಗಿನ 6 ಗಂ.ಗೆ ಯೋಗ,ಧ್ಯಾನ ಮತ್ತು ಪ್ರಾಣಾಯಾಮದ ಅವಧಿ ನಡೆಯುತ್ತಿತ್ತು. ಕೆಲವರಿಗೆ ಯೋಗದ ಪರಿಚಯವಿದ್ರು, ಅನೆಕ ಮಕ್ಕಳು ಯೋಗವನ್ನು ಮೊದಲು ಬಾರಿ ಮಾಡಿತಿದ್ರು. ಅವರು ಧ್ಯಾನದಲ್ಲಿ ಮಗ್ನರಾದಾಗ ಸುಳಿಯುವ ಗಾಳಿಯು ಸೈಲಂಟಾದಂತ ಅನುಭವ ಆಗುತ್ತಿತ್ತು ಅನ್ನುತ್ತಾರೆ ಸಂಪನ್ಮೂಲ ವ್ಯಕ್ತಿ ಪಂಚಾಕ್ಷರಿ ಮುಧೋಳಮಠ.

ಚಿಣ್ಣ-ಬಣ್ಣ
       ಸ್ಪ್ರೇ ಪೇಂಟಿಂಗ- ನಲ್ಲಿ ಪಕ್ಷಿಗಳು, ಪ್ರಾಣಿಗಳ ಚಿತ್ರ, ಮಿಕ್ಕಿ ಮೌಸ್‍ಗಳು ಮುಂತಾದ ಚಿತ್ರಗಳನ್ನು ಹಳೆಯ ಟೂತ್ ಬ್ರಶ್‍ಗಳನ್ನು ಬಳಸಿ ಕ್ಷಣಾರ್ಧದಲ್ಲಿ ರಚಿಸುತ್ತಿದ್ದರು. ಚಿತ್ರ ಪೂರ್ಣಗೊಳ್ಳುತ್ತಲೆ ಕೇಕೆ ಹಾಕಿ, ನಾ ಮೇಲೂ ತಾಮೇಲು ಅಂತ ತೋರಿಸಲು ಬರುತ್ತಿದ್ದರು. ಸಮಮಿತಿ ಚಿತ್ರ - ಪಾತರಗಿತ್ತಿ, ಪಕ್ಷಿ, ಮರಗಳ ಆಕೃತಿಯನ್ನು ವಿವಿಧ ಬಣ್ಣಗಳ ಹನಿಗಳನ್ನು ಹಾಕಿ ಪೇಪರ್ ನ್ನು ಸಮನಾಗಿ ಮಡಚಿ ಮೆಲ್ಲಗೆ ಉಜ್ಜುವಷ್ಟರಲ್ಲಿ ರಂಗು ರಂಗದ ಚಿತ್ತಾರ ಮೂಡಿಸಿದ, ಮಕ್ಕಳ ಉಲ್ಲಾಸಕ್ಕೆ ಮೆರೆಯೆ ಇರುತ್ತರಲಿಲ್ಲ. ದಾರದ ಚಿತ್ರ, ಬೆರಳು ಬೊಂಬೆ, ರೇಖಾ ಚಿತ್ರ ಬಿಡಿಸುವ ಅತ್ಯಂತ ಸರಳ ಶೈಲಿಯನ್ನು ಮಕ್ಕಳು ಕಲಿತರು. ಚಿತ್ರ ಕಲೆಯಲ್ಲಿ ಮಕ್ಕಳ ಆಸಕ್ತಿಗೆ ಮಿತಿಯೆ ಇರಲಿಲ್ಲ, ಸಮಯದ ಅಭಾವ ಅದಕ್ಕೆ ತಡೆಯೊಡ್ಡಿತು ಎನ್ನುತ್ತಾರೆ ಚಿತ್ರಕಲಾ ಶಿಕ್ಷಕ ಎನ್.ಬಿ.ಪರ್ವತಗೌಡರ.
ಮುಖವಾಡ ತಯಾರಿಕೆ
       ಕಾರ್ಡಶೀಟ್‍ಗಳಲ್ಲಿ ಆನೆ, ಆಕಳು, ವಿವಿಧ ಪಕ್ಷಿಗಳ ಮುಖವಾಡಗಳನ್ನು ತಾವೆ ತಯಾರಿಸಿ ಖುಶಿ ಪಟ್ಟರು. ಬಲೂನ್ ಬೊಂಬೆಗಳನ್ನು ಆಗಸದಲ್ಲಿ ತೇಲಿ ಬಿಟ್ಟು, ಕ್ಷಣಕಾಲ ಚಿಟ್ಟೆಯಂತೆ ನಲಿದಾಡಿದ ಮಕ್ಕಳು ನಕ್ಷತ್ರ ಲೋಕದಲ್ಲಿ ತೇಲುತ್ತರುವ ಅನುಭವ ವಾಯಿತು ಎನ್ನುತ್ತಾರೆ ಎ.ವ್ಹಿ.ಪ್ರಭು.

ನೃತ್ಯ ಸಂಯೋಜನೆ:
ನಗರದ ನಟರಾಜ ನೃತ್ಯ ಅಕ್ಯಾಡೆಮಿಯ ಸುನಿಲ್ ನಾಯಕ್ ರ ಸಾರಥ್ಯದಲ್ಲಿ ಮಕ್ಕಳಿಗೆ ಭರತವೇಗವೆಂಬ ಭಕ್ತಿ ಗೀತೆಗೆ ನೃತ್ಯ ಸಂಯೊಜನೆ ಮಾಡಿ ಪ್ರದರ್ಶನ ಮಾಡಲಾಯಿತು. ಇದರೊಂದಿಗೆ ಎಲ್ಲಾ ಮಾಯ, ಹಸಿರು ಹಾಡು, ನಲಿಯುವ ಚಿಣ್ಣರು , ಆನೆ ಬಂತು ಆನೆ ಮುಂತಾದ ಪದ್ಯಗಳಿಗೆ ಸಾಮೂಹಿಕ ನೃತ್ಯ ಮಾಡಿಸ ಲಾಯಿತು.
ನಮ್ಮೂರ ಆಟ.
       ಇಲ್ಲಿ ಮಕ್ಕಳು ಲಡ್ಡು ಲಡ್ಡು ತಿಮ್ಮಯ್ಯ, ಲಗೋರಿ, ಕಳ್ಳ ಮಳ್ಳೆ ಕಪಾತ ಮಳ್ಳೆ , ಪಂಚಂ ಪಗಡಂ, ಚಕ್ಕಾ,  ಸರ್ ಮನಿ ಮುಂತಾದ ಆಟಗಳನ್ನು ಬಿಸಿಲಿನ ದಗೆಯನ್ನು ಲೆಕ್ಕಿಸದೆ ಮಕ್ಕಳು ಕೆಕೆ ಹಾಕುತ್ತ, ಮೈದಾನದಲ್ಲಿ ಆಡುವುದನ್ನು ಕಂಡು ಬಿಸಿಲಿಗೂ ಬ್ಯಾಸರಾತು. ಇಲ್ಲಿನ ಚಟುವಟಿಕೆಗಳು ಸೆಕೆಗೆ ಸೆಡ್ಡು ಹೊಡೆದು ಕಿನ್ನರ ಸೃಜನಾತ್ಮಕ ಲೋಕವನ್ನು ಸೃಷ್ಠಿ ಮಾಡಿದ್ದವು ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿ ರವಿ ದೇವರಡ್ಡಿಯವರು.
ಓರಿಗಾಮಿ
       ಮಕ್ಕಳು ಬಿಳಿ ಹಾಳೆÉಯನ್ನು ಮಡಚುತ್ತಲೆ, ರೇಖಾ ಗಣಿತದ ಅನೇಕ ಆಕೃತಿಗಳನ್ನು , ಗುರುತಿಸಿದರು.  ಆಡುತ್ತಲೆ ಕಲಿತ ಗಣಿತ ಮಕ್ಕಳಿಗೆ ಮುದ ನೀಡಿತು. ಇಲ್ಲಿ ಚೌಕ ಮತ್ತು ಆಯತ ಎರಡು ಹಾಳೆಗಳಿಂದಲೂ ಸಮಭಾಹು ತ್ರಿಭುಜ. ಸಮಧ್ವೀಭಾಹು ತ್ರೀಭುಜ, ಸಮಾಂತರ ಚತುರ್ಭುಜ, ತ್ರಾಪಿಜ್ಯ, ಕೊಟ್ಟ ಹಾಳೆಯನ್ನು ಅಗತ್ಯ ಭಾಗಗಳನ್ನಾಗಿ ಮಾಡುವುದು ಮುಂತಾದ ಕಲೆಯನ್ನು ಮಕ್ಕಳು ಇದು ಗಣಿತಕ್ಕೆ ಸಂಭಂದಿಸಿದ್ದು ಎಂಬ ಅರಿವಿಲ್ಲದೆ ನಲಿಯುತ್ತಲೆ ಕಲಿತಿದ್ದಾರೆ.
     ಪವಾಡಬಯಲು
    ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೈಲ್ಲಿ ಕರ್ಪೂರ ಉರಿಸುವುದು, ಕುದಿಯುವ ಎಣ್ಣೆಯಲ್ಲಿ ಕೈ ಅದ್ದುವುದು, ನೀರಿನಿಂದ ಬೆಂಕಿ ಹಚ್ಚುವುದು, ನೀರಿನಿಂದ ದೀಪ ಉರಿಸುವುದುಮುಂತಾದ 40ಕ್ಕೂ ಹೆಚ್ಚು ಕೈ ಚಳಕಗಳನ್ನು ಮಕ್ಕಳಿಂದಲೆ ರವಿ ದೇವರಡ್ಡಿಯವರ ನೆತೃತ್ವದಲ್ಲಿ ಪ್ರಾಯೋಗಿಕವಾಗಿ  ಮಾಡಿಸಲಾಯಿತು.   ವ್ಯಕ್ತತ್ವ ವಿಕಸನಕ್ಕಾಗಿ ವಿವೇಕವಾಣಿ- ಚಲನ ಚಿತ್ರ ಪ್ರದರ್ಶನ ಅಧ್ಯಾತ್ಮ ಲೋಕದ ಅನಾವರಣ - ಮಕ್ಕಳನ್ನು ಹೊಸದೊಂದು ಪ್ರಪಂಚ ಪರಿಚಯಿಸಿತ್ತು.

 ಕಾನೂನಿನ ಅರಿವು ನೆರವು : ನ್ಯಾಯಮೂರ್ತಿ ಶಿಗ್ಲಿಯವರೊಡನೆ ಮಕ್ಕಳು ಕಾನೂನಿನ ಅನೇಕ ವಿಚಾರಗಳ ಕುರಿತು ಸಂವಾದ ನಡೆಸಿದರು.
ಇಷ್ಟ ಇರಲಿ,ಬಿಡಲಿ ಟಿ.ವ್ಹಿ.ಯಲ್ಲಿ ಬಂದ ಕಾರ್ಯಕ್ರಮ ನೋಡಿ ಟೈಮ್ ಹಾಳಮಾಡ್ತಿದ್ವೀ. ಇಲ್ಲಿ ನಮ್ಮ ಏರಿಯಾದಾಗ ಫ್ರೀಯಾಗಿ ಬ್ಯಾಸಿಗಿ ಶಿಬಿರ ಏರ್ಫಡಿಸಿದ್ದು ಬಾಳ ಖುಶಿ ಕೊಟ್ಟಿತು.ನಾವಿಲ್ಲಿ ಪೇಂಟಂಗ ಮಾಡಿದ್ವಿ,ಮುಖವಾಡ ಮಾಡೋದನ್ನು ಕಲತ್ವೀ, ಕೈ ಚಳಕದಿಂದ ಬಾಬಾಗಳು ಹ್ಯಾಂಗ ಮೊಸ ಮಾಡ್ತಾರಂತ ಪವಾಡ ಬಯಲು ಕಾರ್ಯಕ್ರಮದಾಗ ತಿಳಕೊಂಡ್ವಿ ಖೂಶಯಾತು.
 ಅಕ್ಷತಾ ಕೆ.ಕೊಣ್ಣೂರ. ಶಿಬಿರಾರ್ಥಿ
ದಾರದಾಗ ಬಣ್ಣ ಎದ್ದಿ ಚಿತ್ರ ಬಿಡಿಸಿದ್ದು, ಪೇಪರ್ನ್ಯಾಗ ರಾಕೇಟ್ ಮಾಡಿ ಹಾರಿಬಿಟ್ಟಿದ್ದು, ನಮ್ಮ ಸುತ್ತಲಿನ ವಸ್ತುಗಳನ್ನು ಬಳಸಿ ಕೈಚಳಕದಿಂದ ಪವಾಡ ಜನರಿಗೆ ವಂಚಿಸೋದು ತೀಳಿದು ಬಾಳ ಖುಶಿಯಾತು.
                ವಿಶಾಲ ವ್ಹಿ. ಪಾಟೀಲ, ಶಿಬಿರಾರ್ಥಿ
ವ್ಯವಹಾರದ ಲವಲೇಶವೂ ಇಲ್ಲದೆ. ಇಲ್ಲಿ ಗ್ರಾಮರ್, ಗಣಿತ ಅಂತ ಮಕ್ಕಳಿಗೆ ಬೋರ್ ಹೊಡಿಸದೆ, ಸೃಜನಾತ್ಮಕ ಕಲೆಗಳಲ್ಲಿ ತಲ್ಲೀನಗೊಳಿಸಿದ, ಶಿಕ್ಷಕರ ಕಲೆ ದೊಡ್ಡದು. ಮುಂದಿನ ವರ್ಷ ಇಲ್ಲೆ ನಡೆಸಿದ್ರ ನಾವೆಲ್ಲಾ ಸಹಕಾರ ಕೊಡ್ತೀವಿ.
                    ಸುಮಾ ನಾಡಪ್ಪನವರ, ಪಾಲಕರು.


             ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡಿದ ಗೆಳೆಯರು
ಎ.ಎಸ್.ಹಾದಿ, ವಿವೇಕಾನಂದಗೌಡ ಪಾಟೀಲ, ಎಸ್.ಎಮ್.ಪಾಟೀಲ, ಕೆ.ಬಿ.ಕೊಣ್ಣೂರ, ಎನ್.ಡಿ.ಶೇಠ, ವಿಶ್ವನಾಥ ಕಮ್ಮಾರ, ಎಸ್.ಎಸ್.ಗೌಡರ, ರಾಜೇಶ್ವರಿ ಯಲ್ಲಪ್ಪಗೌಡರ, ಸುನಿಲ್ ನಾಯಕ ಎಸ್.ಬಿ.ಕುಂದಗೋಳ್. 

-ರವಿ ಸೋ. ದೇವರಡ್ಡಿ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ ವೆಂಕಟೇಶ ನಗರ, ತಾ: ಮುಂಡರಗಿ ಜಿ:ಗದಗ 582118 
http://gpkunited.tripod.com/imagelib/sitebuilder/pictures/hrlines/hr2.gif
KJVS Gadag taluk committe has conducted a nice programme.
Let it conduct these type of camps every year and all units shall emulate this model please. 
-Krishnegowda Channalli