Sunday, February 9, 2014

ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ

ಫೆಬ್ರವರಿ ೨೧ ಮತ್ತು ೨೨ ರಂದು
ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್) ಹೊರತರುತ್ತಿರುವ ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನಕಾರ್ಯಕ್ರಮ ೨೦೧೪ರ ಫೆಬ್ರವರಿ ೨೧ ಮತ್ತು ೨೨ ರಂದು ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕಿನಲ್ಲಿ(ಸ್ಕೌಟ್ ಕ್ಯಾಂಪ್)ನಡೆಯಲಿದೆ.     ಎರಡು ದಿನಗಳ ಕಾಲ ನಡೆಯಲಿರುವ ಈ ಶೈಕ್ಷಣಿಕ ಸಮ್ಮಿಲನದಲ್ಲಿ ಉದ್ಗಾಟನೆಯನ್ನು ಮಾಜಿ ಶಿಕ್ಷಣ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ನೆರವೇರಿಸಲಿದ್ದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಹನುಮಂತೇಗೌಡರು, ಪಬ್ಲಿಕ್ ಟಿ.ವಿ ಯ ಶ್ರೀ ರಂಗನಾಥ್, ಪ್ರೊ.ರವಿವರ್ಮಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಮಾನವ ಹಕ್ಕು ಜಾಗೃತಿ ಸಮಿತಿಗಳು ಶಿಕ್ಷಣ ಇಲಾಖೆಯ ಸಹಕಾರದಿಂದ ಸಂಘಟಿಸುತ್ತಿವೆ. ದೊ.ಬ.ಪುರ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮ್ಮಿಲನದಲ್ಲಿ ೪ಗೋಷ್ಠಿಗಳು ನಡೆಯಲಿವೆ.

೧) ಹೆಣ್ಣುಮಕ್ಕಳ ಶಿಕ್ಷಣ - ಸವಾಲುಗಳು : ಪ್ರಸ್ತುತ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರ ಕುರಿತಂತೆ ಈ ಗೋಷ್ಠಿಯಲ್ಲಿ  ವಿಷಯ ಮಂಡನೆ ಹಾಗೂ ಚರ್ಚೆ ನಡೆಯಲಿದೆ. ಪ್ರೊ.ಕೋಡಿರಂಗಪ್ಪ, ಮಾಜಿಸಚಿವೆ ಬಿ.ಟಿ.ಲಲಿತಾನಾಯಕ್, ರಾಜ್ಯಸರ್ಕಾರಿ ನೌಕರರ ಸಂಘದ ರಮಾದೇವಿ ಮುಂತಾದವರು  ಮಾತನಾಡಲಿದ್ದಾರೆ. 
೨) ಸರ್ಕಾರಿ ಶಾಲೆಗಳ ಸಬಲೀಕರಣ : ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಚರ್ಚಿಸಿ ಸಾಧ್ಯವಿರುವ ಮಾರ್ಗಗಳನ್ನು ಕಂಡುಕೊಳ್ಳುವುದು. ಈ ಗೋಷ್ಠಿಯಲ್ಲಿ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜಗುರಿಕಾರ, ಕಾರ್ಯದರ್ಶಿ ನಾರಾಯಣಸ್ವಾಮಿ ಮುಂತಾದವರು ಮಾತನಾಡಲಿದ್ದಾರೆ.
೩) ಶಿಕ್ಷಕರು ಮತ್ತು ಸಾಮಾಜಿಕ ಬದಲಾವಣೆ : ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಲು ಸಾಧ್ಯವಿದೆ. ಸಮಾಜದ ಬದಲಾವಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಬಲ್ಲರು. ಈ ಬಗ್ಗೆ ಶಿಕ್ಷಕರೊಂದಿಗೆ ಸಂವಾದ ನಡೆಯಲಿದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಭರತ್ ಲಾಲ್ ಮೀನಾ ಅವರು ವಹಿಸಲಿದ್ದು ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ.ರವಿ, ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಡಾ.ರಾಜಾನಾಯಕ್, ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳು ಮಾತನಾಡಲಿದ್ದಾರೆ.
೪) ವೈಜ್ಞಾನಿಕ ಸಾಕ್ಷರತೆ : ಮೌಢ್ಯಾಚರಣೆಗಳ ನಿಯಂತ್ರಣಕ್ಕಾಗಿ ತಜ್ಞರ ತಂಡವು  ಮಸೂದೆಯನ್ನು ರಚಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿರುವ ಮಾಹಿತಿಗಳನ್ನು ಪೂರ್ಣವಾಗಿ ಅರಿಯದೆ ಪರ-ವಿರೋಧಗಳ ಚರ್ಚೆಗಳಾಗುತ್ತಿದೆ. ಮಸೂದೆಯಲ್ಲಿರುವ ವಾಸ್ತವಾಂಶಗಳ ಬಗ್ಗೆ ಚರ್ಚಿಸಿ ಬರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಗೋಷ್ಠಿಯಲ್ಲಿ ಮಸೂದೆ ರಚನಾ ತಂಡದ ಸದಸ್ಯರಾದ ಪ್ರೊ.ಎ.ಎಸ್.ನಟರಾಜ್, ಡಾ.ಹನುಮಂತಪ್ಪ, ಪ್ರೊ.ನಗರಗೆರೆ ರಮೇಶ್, ಶ್ರೀ ಹುಲಿಕಲ್ ನಟರಾಜು ಮುಂತಾದವರು ಮಾತನಾಡಲಿದ್ದಾರೆ.
  ೨೧ರ ರಾತ್ರಿ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ಅವರಿಂದ ಹಾಡುಗಳು, ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ರಹಸ್ಯ ಬಯಲು ತರಬೇತಿ, ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಹಾಗೂ ಕೋಲಾರದ ಶ್ರೀ ವಿ.ಎಸ್.ಎಸ್ ಶಾಸ್ತ್ರಿ ಅವರಿಂದ ಆಕಾಶ ವೀಕ್ಷಣೆಕಾರ್ಯಕ್ರಮವನ್ನು ಏರ್ಪಡಿಸಿದೆ. ಎರಡೂ ದಿನಗಳ ಕಾಲ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು, ಕಲಿಕಾ ಸಾಮಾಗ್ರಿಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಕರು ಫೆಬ್ರವರಿ ೧೫ರೊಳಗೆ ೨೦೦ರೂಗಳನ್ನು ಸ್ಥಳೀಯ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯಕರ್ತರ ಬಳಿ ಅಥವಾ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ನಂ.೮೫೬, ೩ನೇ ಸಿಕ್ರಾಸ್, ೩ನೇ ಮೇನ್, ಪ್ರಕಾಶ್‌ನಗರ, ಬೆಂಗಳೂರು-೫೬೦೦೨೧ ಈ ವಿಳಾಸಕ್ಕೆ ಕಳಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರತಿನಿಧಿಗಳಿಗೆ ಆಹಾರ, ವಸತಿ, ಲೇಖನ ಸಾಮಗ್ರಿ ಹಾಗೂ ಬ್ಯಾಗ್ ನೀಡಲಾಗುತ್ತದೆ. ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದೆ. 

No comments:

Post a Comment