Saturday, February 22, 2014

Report of KJVS Conference in Kannada Prabha

KannadaprabhaSaturday, March 01, 2014 11:33AM IST





ವೈಚಾರಿಕ ಚಿಂತನೆಯಿಂದ ದೇಶ ಪ್ರಗತಿ ಸಾಧ್ಯ

ದೊಡ್ಡಬಳ್ಳಾಪುರ: ವೈಚಾರಿಕ ಚಿಂತನೆಗಳನ್ನು ದೇಶ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆದರೆ ಮೌಢ್ಯವನ್ನು ಬಿತ್ತುವ ಮತ್ತು ಪ್ರಚೋದಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿರುವುದು ಆತಂಕಕಾರಿ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಾನವ ಹಕ್ಕುಗಳ ಜಾಗೃತಿ ಸಮಿತಿ ನೇತೃತ್ವದಲ್ಲಿ ಇಲ್ಲಿನ ಬೆಸೆಂಟ್ ಪಾರ್ಕ್ನಲ್ಲಿ ಶುಕ್ರವಾರ ಆರಂಭವಾದ ಶಿಕ್ಷಣ ಶಿಲ್ಪಿ ಮಾಸಪತ್ರಿಕೆ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ವಿಚಾರವಂತಿಕೆಯ ಮೂಲ ಆದರ್ಶಗಳು ಬೆಳೆಯಬೇಕು. ನಮ್ಮ ಮಕ್ಕಳನ್ನು ಭವಿಷ್ಯದ ಆತಂಕಗಳನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಮಾನಸಿಕವಾಗಿ ಸಶಕ್ತಗೊಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಮೇಲಿರುವ ಜವಾಬ್ದಾರಿ ಮಹತ್ವದ್ದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಪವಾಡ ಭಂಜಕ ಹುಲಿಕಲ್ ನಟರಾಜ್ ಅವರ ಆತ್ಮಕಥೆ 'ಕಲ್ಲು ಮುಳ್ಳಿನ ಹಾದಿ' ಪುಸ್ತಕವನ್ನು ಪತ್ರಕರ್ತ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿದರು.
ಸಮಿತಿ ಕಾರ್ಯದರ್ಶಿ ಈ.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್, ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಬಿಇಒ ತಿಮ್ಮೇಗೌಡ ಸೇರಿದಂತೆ ಜ್ಞಾನ  ವಿಜ್ಞಾನ ಸಮಿತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಸಮಾರೋಪ: ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಫೆ.22ರ ಶನಿವಾರ ನಡೆಯಲಿದೆ. ಸರ್ವಶಿಕ್ಷಣ ಅಭಿಯಾನ ಯೋಜನಾ ನಿರ್ದೇಶಕ ಮುದ್ದುಮೋಹನ್ ಸಮಾರೋಪ ಭಾಷಣ ಮಾಡಲಿದ್ದು, ಜ್ಞಾನ ವಿಜ್ಞಾನ ಸಮಿತಿ ಸಹ ಕಾರ್ಯದರ್ಶಿ ಎಸ್.ಎಂ.ಶಶಿಧರ್ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕರಾದ ಎಂಟಿಬಿ ನಾಗರಾಜ್, ಡಾ.ಅಶ್ವತ್ಥ್ನಾರಾಯಣ್, ವೈ.ಎ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಐಎಎಸ್ ಅಧಿಕಾರಿ ಭರತ್ಲಾಲ್ ಮೀನಾ ಅಧ್ಯಕ್ಷತೆಯಲ್ಲಿ ಶಿಕ್ಷಕರು ಮತ್ತು ಸಾಮಾಜಿಕ ಬದಲಾವಣೆ ವಿಚಾರ ಗೋಷ್ಠಿ, ವಿಚಾರವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ನಟರಾಜ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ-2013 ಕುರಿತ ಗೋಷ್ಠಿಗಳು ನಡೆಯಲಿವೆ

No comments:

Post a Comment