Monday, January 5, 2015

ಪ್ರಬಂಧ ಸ್ಪರ್ಧೆ

ಉದಯಭಾನು ಕಲಾಸಂಘ, ಬೆಂಗಳೂರು
ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು

ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-19. ದೂರವಾಣಿ: 080-26609343 

   ಉದಯಭಾನು ಕಲಾಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ 1965ರಲ್ಲಿ ಸ್ಥಾಪನೆಯಾದ ಉದಯಭಾನು ಕಲಾ ಸಂಘವು ಕನ್ನಡ ನಾಡಿನ ಬೆಳವಣಿಗೆಯ ಜೊತೆಗೆ ಹೆಜ್ಜೆ ಹಾಕುತ್ತಾ ಸುವರ್ಣ ಪಥ ಸಂಚಲನಕ್ಕೆ ಸಜ್ಜಾಗಿದೆ. ಜೂನ್ 2014 ರಿಂದ ಜೂನ್ 2015ರ ವರೆಗೆ ಸಂಘವು ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಅದಕ್ಕೆ ಪೂರಕವಾಗಿ ಕರ್ನಾಟಕದಾದ್ಯಂತ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿದಿರುವ ಸಮಕಾಲೀನ ಸಾಧಕರನ್ನು ಕುರಿತಾದ 50 ವ್ಯಕ್ತಿಚಿತ್ರಗಳನ್ನು ಪ್ರಕಟಿಸುವ ಯೋಜನೆಯಡಿಯಲ್ಲಿ ರೂಪುಗೊಂಡ ‘ಉದಯಭಾನು ಸುವರ್ಣ ಪುಸ್ತಕ ಮಾಲೆ’ ಯಲ್ಲಿ ಈಗಾಗಲೇ 30 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 11,000 ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತುಗಳ ಸುವರ್ಣ ಮಹೋತ್ಸವ ಭವನ ನಿರ್ಮಾಣ, ಬೆಂಗಳೂರು ದರ್ಶನ ಪರಿಷ್ಕøತ ಗ್ರಂಥಗಳ ಪ್ರಕಟಣೆ ಹಾಗೂ ಉದಯಭಾನು ರತ್ನ, ಉದಯಭಾನು ಸುವರ್ಣ ಪಥ, ಮುಂತಾದ ಪ್ರಕಟಣೆಗಳು, ಸಾಕ್ಷ್ಯ ಚಿತ್ರ ತಯಾರಿಕೆ, ಅಂತರ್ಜಾಲ ಸ್ಥಾಪನೆ ಮುಂತಾದ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 

ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ರಾಜ್ಯದ ಎಲ್ಲ ಜಿಲ್ಲೆ/ತಾಲ್ಲೂಕುಗಳ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ವಿಷಯ:
1. ವಿಜ್ಞಾನ ವಿಭಾಗ: ನಿತ್ಯ ಜೀವನದಲ್ಲಿ ವಿಜ್ಞಾನ
2. ಸಾಹಿತ್ಯ ವಿಭಾಗ: ಮಾತೃಭಾಷೆಯಲ್ಲಿ ಶಿಕ್ಷಣ
3. ಸಾಮಾಜಿಕ ವಿಭಾಗ: ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೊಣೆಗಾರಿಕೆ
ವಿಭಾಗ: 
1. ಪ್ರೌಢಶಾಲಾ ವಿಭಾಗ
2. ಪದವಿ ಪೂರ್ವ ವಿಭಾಗ
3. ಪದವಿ ವಿಭಾಗ
ಪ್ರವೇಶ: ಉಚಿತ
ಪ್ರಬಂಧ ಬರೆಯಲು ಅಗತ್ಯವಾದ ಹಾಳೆಗಳನ್ನು ಸ್ಥಳದಲ್ಲೇ ಒದಗಿಸಡಲಾಗುವುದು. ಪ್ರೌಢಶಾಲಾ ವಿಭಾಗಕ್ಕೆ 4 ಪುಟಗಳು, ಕಾಲೇಜು ವಿಭಾಗಕ್ಕೆ 6 ಪುಟಗಳು.
ಮೂರೂ ವಿಭಾಗಗಳಿಗೂ(ಪ್ರೌಢಶಾಲಾ ವಿಭಾಗ, ಪ.ಪೂರ್ವ ಶಿಕ್ಷಣ ವಿಭಾಗ ಮತ್ತು ಪದವಿ ವಿಭಾಗ) ವಿಷಯ ಒಂದೇ ಇರುತ್ತದೆ. ಒಂದು ಶಾಲೆ/ಕಾಲೇಜಿನಿಂದ ಒಂದೊಂದು ವಿಷಯಕ್ಕೆ ಒಬ್ಬರಂತೆ ಮೂರೂ ವಿಷಯಗಳಿಗೆ ಮೂರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಒಂದು ವೇಳೆ ಒಂದು ಶಾಲೆ/ಕಾಲೇಜಿನಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಲು ಆಸಕ್ತಿ ತೋರಿಸಿದಲ್ಲಿ ಶಾಲೆಯಲ್ಲೇ ಸ್ಪರ್ಧೆ ನಡೆಸಿ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳಿಸುವುದು. ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಗಳು ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಬಹುಮಾನಗಳು:
ಪ್ರತಿ ವಿಭಾಗಕ್ಕೆ ಮತ್ತು ಪ್ರತಿ ವಿಷಯಕ್ಕೆ ಮೂರು ಬಹುಮಾನಗಳಿರುತ್ತವೆ. ಅಂದರೆ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ, ಸಾಹಿತ್ಯ ಮತ್ತು ಸಾಮಾಜಿಕ ವಿಭಾಗಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಇರುತ್ತದೆ. ಹಾಗೆಯೇ ಪದವಿ ಪೂರ್ವ  ಮತ್ತು ಪದವಿ ವಿಭಾಗಕ್ಕೂ ಬಹುಮಾನಗಳಿರುತ್ತವೆ. ಒಟ್ಟು 27 ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಜೊತೆಗೆ ಜಿಲ್ಲಾಮಟ್ಟದಲ್ಲಿ ಪ್ರಬಂಧ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.

ಕಾರ್ಯಕ್ರಮದ ವೇಳಾಪಟ್ಟಿ:
ಜಿಲ್ಲಾಮಟ್ಟದ ಸ್ಪರ್ಧೆ(ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ) : 13.12.2014 ಬೆ.11ರಿಂದ 12
ಪದವಿ ಕಾಲೇಜುಗಳಿಗೆ : 2015ರ ಜನವರಿ 6, ಬೆ.11-12
ಜಿಲ್ಲಾಮಟ್ಟದ ಬಹುಮಾನ ವಿತರಣೆ ಹಾಗೂ ರಾಜ್ಯಮಟ್ಟದ ಸ್ಪರ್ಧೆ : 17.01.2015


ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: 
ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದವರಿಗೆ ಬಹುಮಾನ ನೀಡುವ ದಿನವೇ ಅದೇ ಜಿಲ್ಲಾ ಕೇಂದ್ರದಲ್ಲಿ ಬೇರೆ ವಿಷಯವನ್ನು ನೀಡಿ ರಾಜ್ಯಮಟ್ಟದ ಪ್ರಬಂಧಸ್ಪರ್ಧೆಯನ್ನು ದಿನಾಂಕ 17.01.2015ರ ಬೆಳಿಗ್ಗೆ 11-12ರ ವರೆಗೆ ನಡೆಸಲಾಗುವುದು. ಈ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮೌಲ್ಯಮಾಪನ ಮಾಡಿ ಆಯ್ಕೆಯಾದ 27 ವಿದ್ಯಾರ್ಥಿಗಳಿಗೆ(ಪ್ರತಿ ವಿಭಾಗದಿಂದ9) 2015ರ ಜೂನ್ 10-12ರ ವರೆಗೆ ಬೆಂಗಳೂರಿನಲ್ಲಿ ನಡೆಯುವ ಸುವರ್ಣಮಹೋತ್ಸವ ಆಚರಣಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಹುಮಾನ ನೀಡಲಾಗುವುದು. ಆಯ್ಕೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

 ಜಿಲ್ಲಾ ಸಂಚಾಲಕರು:
ಬಾಗಲಕೋಟೆ ಗುಲ್ಬರ್ಗ ಸಂದೀಪ್
ಬೆಂ. ಗ್ರಾಮಾಂತರ ಹಾಸನ ಗ್ಯಾರಂಟಿ ರಾಮಣ್ಣ
ಬೆಂಗಳೂರು ನಗರ ಎಂ.ಎಸ್.ಗುಜ್ಜಾರ್
ಹಾವೇರಿ ಬೆಳಗಾವಿ ಪ್ರಕಾಶ್ ದೇಯಣ್ಣವರ್
ಕೊಡಗು ಕೆ.ಕೆ.ಮಂಜುನಾಥಕುಮಾರ್
ಬಳ್ಳಾರಿ ಕೋಲಾರ ನಾಗರಾಜ್
ಬೀದರ್ ರಮೇಶ್ ಬಿರಾದಾರ್
ಕೊಪ್ಪಳ ದೇವೇಂದ್ರ ಜಿರ್ಲಿ
ಬಿಜಾಪುರ ರಾಘವೇಂದ್ರ ನಿಸಾಳೆ
ಮಂಡ್ಯ ರಾಮಚಂದ್ರ
ಚಾಮರಾಜನಗರ  ಮೈಸೂರು ಲಕ್ಷ್ಮೀಕಾಂತ್
ಚಿಕ್ಕಬಳ್ಳಾಪುರ ಕೆ.ಎಂ.ರೆಡ್ಡೆಪ್ಪ
ರಾಯಚೂರು ದೇವಯ್ಯಸ್ವಾಮಿ
ಚಿಕ್ಕಮಗಳೂರು ರಾಮನಗರ
ಚಿತ್ರದುರ್ಗ ಜಿ.ಎಂ.ಶಂಕರಮೂರ್ತಿ
ಶಿವಮೊಗ್ಗ ಅಣ್ಣಪ್ಪ ಒಚಿಟಮಾಳಗಿ
ದಕ್ಷಿಣ ಕನ್ನಡ ತುಮಕೂರು ಪರಮೇಶ್ವರಯ್ಯ
ದಾವಣಗೆರೆ  ಉಡುಪಿ ಸದಾನಂದ ಬೈಂದೂರ್
ಧಾರವಾಡ ಉತ್ತರ ಕನ್ನಡ
ಗದಗ್ ಬಸವರಾಜ ಪೂಜಾರ್
ಯಾದಗೀರ್ ಸೈದಪ್ಪ ಗತ್ತೇದಾರ್
(ಜಿಲ್ಲಾ ಸಂಚಾಲಕರು ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕು ಸಂಚಾಲಕರನ್ನು ಗುರ್ತಿಸಿ ಅವರುಗಳ ಮೂಲಕ ಪ್ರಬಂಧ ಸ್ಪರ್ಧೆ ನಡೆಸುವುದು)
ರಾಜ್ಯಮಟ್ಟದ ಸಂಚಾಲನಾ ಸಮಿತಿ ಸದಸ್ಯರು:
ಈ.ಬಸವರಾಜು-9448957666, ಟಿ.ವಿ.ಸೂರ್ಯಪ್ರಕಾಶ್-9448375138, ಡಿ.ಮಲ್ಲಾರೆಡ್ಡಿ-9901108836
ವಿ.ವೆಂಕಟಸುಬ್ಬರಾವ್-9845505765, ಕೋ.ವೆಂ.ರಾಮಕೃಷ್ಣೇಗೌಡ-9448851781, ಎ.ಬಿ.ನರೇಂದ್ರ-9538086020
ಈ.ಬಸವರಾಜು,ಕಾರ್ಯದರ್ಶಿ,ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ  
 ಎಂ.ನರಸಿಂಹ, ಸಂಸ್ಥಾಪಕ ಗೌ.ಕಾರ್ಯದರ್ಶಿ, ಉದಯಭಾನು ಕಲಾಸಂಘ