Saturday, April 6, 2013

Blood Pressure; A public Health Priority

ಜನಾರೋಗ್ಯದ ಆದ್ಯತೆಯಾದ ರಕ್ತದೊತ್ತಡ


ಪ್ರತಿವರ್ಷ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನಾದ್ಯಂತ ಕಂಡುಬರುವ ಜನಾರೋಗ್ಯ ಸಮಸ್ಯೆಯ ಒಂದು ವಿಷಯವನ್ನು ಗಮನಕ್ಕೆ ತೆಗೆದುಕೊಂಡು ಇಡೀ ವರ್ಷ ಆ ಸಮಸ್ಯೆಯ ವ್ಯಾಪ್ತಿ, ಪರಿಹಾರ ಮುಂತಾದವುಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಸರಕಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಎಚ್ಚರಿಸುತ್ತಿದೆ. ಈ ವರ್ಷ ರಕ್ತದ ಏರೊತ್ತಡದ ಬಗ್ಗೆ ಜನಜಾಗೃತಿ ಏರ್ಪಡಿಸಲು ಏಪ್ರಿಲ್ 7, 2013ರಂದು ಈ ವಿಷಯದ ಬಗ್ಗೆ ಆರೋಗ್ಯ ದಿನಾಚರಣೆ ಏರ್ಪಡಿಸಲಾಗಿದೆ.
194 ದೇಶದಲ್ಲಿ ರಕ್ತದೊತ್ತಡ ಅಧ್ಯಯನ ನಂತರ ವಿಶ್ವ ಆರೋಗ್ಯ ಸಂಸ್ಥೆಯ ಈ ವರ್ಷದ (2013) ವಿಷಯ ರಕ್ತದ ಏರೊತ್ತಡ ಎಂದು ತೀರ್ಮಾನಿಸಿದೆ. ಜಗತ್ತಿನಾದ್ಯಂತ ಒಂದು ಶತಕೋಟಿ ಜನರು ರಕ್ತದ ಏರೊತ್ತಡದಿಂದ ಬಳಲುತ್ತಿದ್ದಾರೆ ಹಾಗೂ ಇವುಗಳಲ್ಲಿ 2/3 ಜನರು ಮುಂದುವರೆತ್ತಿರುವ ರಾಷ್ಟ್ರಗಳಲ್ಲಿದ್ದಾರೆ. ಜಗತ್ತಿನಾದ್ಯಂತ 9.4 ದಶಲಕ್ಷ ಜನರು ರಕ್ತದೊತ್ತಡದಿಂದಾದ ಅಕಾಲಿಕ ಮರಣದಿಂದ ಸಾವನ್ನಪ್ಪುತ್ತಿದ್ದಾರೆ. ಹಾಗೂ ದಕ್ಷಿಣ ಪೂರ್ವ ಏಷಿಯಾದಲ್ಲಿ 1.5 ದಶಲಕ್ಷ ಜನರು. ರಕ್ತದ ಏರೊತ್ತಡದಿಂದ ಬಳಲುವವರ ಸಂಖ್ಯೆ ಆಫ್ರಿಕಾದಲ್ಲಿ 46%, ಅಮೇರಿಕಾದಲ್ಲಿ ಅತಿ ಕಡಿಮೆ 25% ಹಾಗೂ  ದಕ್ಷಿಣಾ ಪೂರ್ವ ಏಶಿಯಾದಲ್ಲಿ 30% ರಕ್ತದೊತ್ತಡ ಗಂಡಸರಲ್ಲಿ ಹೆಚ್ಚು ಕಂಡುಬರುತ್ತದೆ.
  ಸಾಂಕ್ರಾಮಿಕವಲ್ಲದ ರೋಗಗಳು: ಜಗತ್ತಿನಾದ್ಯಂತ 2/3 ಸಾವುಗಳನ್ನು ಉಂಟುಮಾಡುವ ರೋಗಗಳಲ್ಲಿ ಮುಖ್ಯವಾದವು : 1. ಹೃದಯ ರೋಗಗಳು / ರಕ್ತನಾಳಗಳ ರೋಗಗಳು, 2. ಕ್ಯಾನ್ಸರ್, 3. ದೀರ್ಘಕಾಲದ ಉಸಿರಾಟದ ರೋಗಗಳು, 4. ಸಕ್ಕರೆ ಕಾಯಿ¯.É ಇತರೆ: ಮಾನಸಿಕ ರೋಗಗಳು, ನರರೋಗಗಳು, ಬಾಯಿಯ ರೋಗಗಳು, ಗಾಯ, ಕುರುಡು ಇತ್ಯಾದಿ
ಸಾಂಕ್ರಾಮಿಕವಲ್ಲದ ರೋಗಗಳ ಗುಣವಿಶೇಷತೆಗಳು : 1) ಇವು ಸೋಂಕುರೋಗಗಳಲ್ಲ 2) ದೀರ್ಘಕಾಲದ ರೋಗಗಳು, 3) ಪರೀಕ್ಷೆಗೆ ಹಾಗೂ ಚಿಕಿತ್ಸೆಗೆ ವೆಚ್ಚ ಹೆಚ್ಚು, 4) ದೀರ್ಘಕಾಲದವರೆಗೆ ಅಪಾಯ ಮಾಡುತ್ತವೆ,  5) ಇವುಗಳನ್ನು ತಡೆಗಟ್ಟಬಹುದು, 6) 35 ದಶಲಕ್ಷ ವಾರ್ಷಿಕ ಸಾವುಗಳಲ್ಲಿ 80% ಸಾವುಗಳು ಈ ರೋಗಗಳಿಂದ ಬಡ ಹಾಗೂ ಮಾಧ್ಯಮ ಆದಾಯದ ಜನರಲ್ಲಿ 25% ಸಾವುಗಳು (60 ವರ್ಷ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ)
  ರಕ್ತದ ಏರೊತ್ತಡವನ್ನು ‘ಶಾಂತ ಕೊಲೆಗಾರ’ (SIಐಇಓಖಿ ಏIಐಐಇಖ) ಎಂದು ಕರೆಯುವರು. ಜಗತ್ತಿನಾದ್ಯಂತ ಒಂದು ಶತಕೋಟಿ ಜನರು ರಕ್ತದ ಏರೊತ್ತಡದಿಂದ ಬಳಲುತ್ತಿದ್ದಾರೆ ಹಾಗೂ ಇವುಗಳಲ್ಲಿ 2/3 ಜನರು ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿದ್ದಾರೆ. ಜಗತ್ತಿನಾದ್ಯಂತ 9.4 ದಶಲಕ್ಷ ಜನರು ರಕ್ತದೊತ್ತಡದಿಂದಾದ ಅಕಾಲಿಕ ಮರಣದಿಂದ ಸಾವನ್ನಪ್ಪುತ್ತಿದ್ದಾರೆ. ಹಾಗೂ ದಕ್ಷಿಣ ಪೂರ್ವ ಏಷಿಯಾದಲ್ಲಿ 1.5 ದಶಲಕ್ಷ ಜನರು.
ರಕ್ತದೊತ್ತಡ ಎಂದರೇನು?
ರಕ್ತನಾಳಗಳೊಳಗೆ ರಕ್ತ ರಭಸದಿಂದ ಹೋಗುವಾಗ ರಕ್ತನಾಳಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ರಕ್ತದ ಚಲನ ವಲನೆಯ ಸಮಯದಲ್ಲಿ ಉಂಟಾಗುವ ಒತ್ತಡಕ್ಕೆ ಸಾಮಾನ್ಯ ರಕ್ತದೊತ್ತಡ (ಓಔಖಒಂಐ ಃಐಔಔಆ PಖಇSSUಖಇ) ಎನ್ನುವರು. ಕೆಲವರಲ್ಲಿ ಈ ಒತ್ತಡ ಹಲವಾರು ಕಾರಣಗಳಿಂದ ಹೆಚ್ಚಾಗಿರುತ್ತದೆ. ಅದಕ್ಕೆ ರಕ್ತದ ಏರೊತ್ತಡ ಎನ್ನುವರು.
ಆರೋಗ್ಯವಂತ ವ್ಯಕ್ತಿಯಲ್ಲಿ ರಕ್ತದೊತ್ತಡ
   ಸಿಸ್ಟಾಲಿಕ್ ಒತ್ತಡ    120ಕ್ಕಿಂತ ಕಡಿಮೆ
   ಡಯಾಸ್ಮಾಲಿಕ್ 80ಕ್ಕಿಂತ ಕಡಿಮೆ.
ಅಪಾಯಕರ (ಪ್ರೀ ಹೈಪರ್‍ಟೆನ್‍ಶನ್)
   ಸಿಸ್ಟಾಲಿಕ್ 130-139 ಮಿ.ಮಿ.ಹೆಚ್.ಜಿ
   ಡಯಾಸ್ಟಾಲಿಕ್ 80-89 ಮೀ.ಮಿ. ಹೆಚ್.ಜಿ
ರಕ್ತದ ಏರೊತ್ತಡ
  ಸಿಸ್ಟಾಲಿಕ್ 140 ಮಿ.ಮಿ. ಅಥವಾ ಹೆಚ್ಚು
  ಡಯಸ್ಟಾಲಿಕ್    90 ಮಿ.ಮಿ. ಅಥವಾ ಹೆಚ್ಚು
ರಕ್ತದೊತ್ತಡ ಕಂಡುಹಿಡಿಯಲು ಸ್ಪಿಗ್ಮಾಮ್ಯಾನೋಮೀಟರ್ ಎಂಬ ಉಪಕರಣ ಬಳಸಲಾಗುತ್ತದೆ.
ರಕ್ತದೊತ್ತಡಕ್ಕೆ ಕಾರಣವೇನು? ಜೀವನಶೈಲಿ ಈ ರೋಗ ತರಲು ಪ್ರಮುಖ ಪಾತ್ರವಹಿಸುತ್ತದೆ.
ರೋಗತೊಂದರೆಗಳೇನು?
ರಕ್ತದ ಏರೊತ್ತಡವನ್ನು ‘ಶಾಂತ ಕೊಲೆಗಾರ’ (SIಐಇಓಖಿ ಏIಐಐಇಖ) ಎಂದು ಕರೆಯುವರು. ಕಾರಣ ರಕ್ತದೊತ್ತಡವಿದೆಯೆಂದು ಕಂಡುಬಂದರೂ ಅನೇಕ ಬಾರಿ ಯಾವ ರೋಗ ತೊಂದರೆಯೂ ಇರದೇ ಇರಬಹುದು. ಅನೇಕರಿಗೆ ರಕ್ತದ ಏರೊತ್ತಡ ಇದ್ದರೂ ಅವರಿಗೆ ಗೊತ್ತೇ ಇರುವುದಿಲ್ಲ. ಆದ್ದರಿಂದ ರಕ್ತದ ಒತ್ತಡದಿಂದ ತೊಂದರೆಯಾಗಲು ಸಾಧ್ಯ.. ಕೆಲವರಲ್ಲಿ ರಕ್ತದ ಒತ್ತಡದಿಂದ ಬೆಳಗಿನ ಜಾವದ ತಲೆನೋವು, ಹೃದಯದ ಬಡಿತ ಏರುಪೇರು, ಹಾಗೂ ಕಿವಿಯಲ್ಲಿ ಶಬ್ದ ಕೇಳಿಬರುತ್ತದೆ.
ವಿಪರೀತ ರಕ್ತದೊತ್ತಡವಿದ್ದಾಗ, ಸುಸ್ತು, ವಾಕರಿಕೆ, ವಾಂತಿ ಗೊಂದಲ, ಆತಂಕ, ಎದೇನೋವು, ಮೂಗಿನಿಂದ ರಕ್ತ ಹಾಗೂ ಕೈಕಾಲು ನಡುಕ ಕಂಡುಬರಬಹುದು.
ರಕ್ತದ ಏರೊತ್ತಡದಿಂದಾಗುವ ಅಪಾಯಗಳೇನು?
ರಕ್ತದ ಏರೊತ್ತಡ ಇದ್ದ ಎಲ್ಲರಿಗೂ ಅಪಾಯವಾಗದಿರಬಹುದು.
1. ಎದೆನೋವು ಅಥವಾ ಎಂಜೈನಾ (ಂಓಉIಓಂ)
2. ಹೃದಯ ವೈಫಲ್ಯ : ರಕ್ತವನ್ನು ಪಂಪ್ (PUಒP) ಮಾಡಲು ಸಾಧ್ಯವಾಗದಿರುವುದು
3. ಹೃದಯಾಘಾತ : ಹೃದಯಕ್ಕೆ ಅಗತ್ಯ ಪ್ರಮಾಣದ ರಕ್ತ ಹರಿಯದಿರುವುದು
4. ಪಾಶ್ರ್ವವಾಯು: ರಕ್ತದ ಏರೊತ್ತಡದಿಂದ ರಕ್ತನಾಳ ಒಡೆದು ಹೋಗಬಹುದು. ಹಾಗೂ ರಕ್ತದ ಪೂರೈಕೆ ನಿಂತುಹೋಗಬಹುದು. ಈ ಬೆಳವಣಿಗೆಯಿಂದ ಪಾಶ್ರ್ವವಾಯು ಸಂಭವಿಸಬಹುದು.

ರಕ್ತದ ಏರೋತ್ತಡವನ್ನು ಹೇಗೆ ತಡೆಗಟ್ಟಬಹುದು ಹಾಗೂ ಹತೋಟಿಗೆ ತರಬಹುದು?
ರಕ್ತದ ಏರೊತ್ತಡ ತಡೆಯಲು ಪ್ರಾರಂಭದಲ್ಲಿ ಜೀವನ ಶೈಲಿಯ ಬದಲಾವಣೆ ಬಹಳ ಉಪಯುಕ್ತವಾದುದು. ರಕ್ತದೊತ್ತಡ ಹತೋಟಿಯಲ್ಲಿಟ್ಟರೆ, ಹೃದಯದ ಮೇಲೆ ಆಗುವ ತೊಂದರೆಗಳನ್ನು ತಡೆಯಬಹುದು.
1. ಮಾನಸಿಕ ಒತ್ತಡ ಹತೋಟಿಗೆ ತರಬೇಕು.
2. ಆರೋಗ್ಯಕರ ಆಹಾರವನ್ನು ತಿನ್ನಬೇಕು. ತರಕಾರಿ ಹಣ್ಣು ತಿನ್ನುವುದು ಅಗತ್ಯ. ಕಾರಣ ಅವುಗಳಿಂದ ಪೊಟ್ಯಾಶಿಯಂ ಹಾಗೂ ನಾರಿನಾಂಶ ದೇಹಕ್ಕೆ ದೊರೆಯುತ್ತದೆ.
3. ಆಹಾರದಲ್ಲಿ ದಿನಕ್ಕೆ ಕೇವಲ 5 ಗ್ರಾಂ (ಒಂದು ಸಣ್ಣ ಚಮಚ) ಉಪ್ಪು ಸೇವಿಸಬಹುದು, ಉಪ್ಪಿನಕಾಯಿ, ಹಪ್ಪಳ, ಚಟ್ನಿ, ಸಾಸ್ (ಟೊಮೊಟೋ, ಚಿಲ್ಲಿ) ಗಳಲ್ಲಿ ಹೆಚ್ಚು ಉಪ್ಪು ಇರುತ್ತದೆ. ಅವನ್ನು ಉಪಯೋಗಿಸುವಾಗ ಜಾಗರೂಕತೆಯಿಂದಿರಬೇಕು. ಪರಿಪೂರ್ಣ ಕೊಬ್ಬು (SಂಖಿUಖಂಖಿಇಆ ಈಂಖಿS) ಹಾಗೂ ಟ್ರಾನ್ಸ್‍ಫ್ಯಾಟ್ (ಖಿಖಂಓS ಈಂಖಿS) ಗಳನ್ನು ಕಡಿಮೆ ಸೇವಿಸಿ.
   4  ದೇಹದ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತೂಕ ಹೆಚ್ಚಿದರೆ ರಕ್ತದೊತ್ತಡ ಹೆಚ್ಚುತ್ತದೆ. ತೂಕ ಕಡಿಮೆಯಾದರೆ
      ರಕ್ತದ ಒತ್ತಡ ಕಡಿಮೆಯಾಗುತ್ತದೆ.
5   ದೈಹಿಕವಾಗಿ ಕ್ರಿಯಾಶೀಲವಾಗಿರಬೇಕು. ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ವಯಸ್ಕರು ಪ್ರತಿದಿವಸ 30 ನಿಮಿಷದ ದೈಹಿಕ ವ್ಯಾಯಾಮವನ್ನು ಮಾಡುವುದು ಅವಶ್ಯಕ.
6    ತಂಬಾಕು ರಕ್ತನಾಳಗಳನ್ನು ಗಡಸುಗೊಳಿಸುತ್ತವೆ ಹಾಗೂ ಹೃದಯಾಘಾತ, ಪಾಶ್ರ್ವವಾಯುವಿಗೆ ಕಾರಣವಾಗುತ್ತವೆ.
   7    ಮದ್ಯಪಾನವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಅಥವಾ ಸಂಪೂರ್ಣ ನಿಲ್ಲಿಸಬೆಕು.
ಮೇಲಿಂದ ಮೇಲೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ರಕ್ತದೊತ್ತಡ ಹತೋಟಿಗೆ ಜೀವನಶೈಲಿಯ ಬದಲಾವಣೆ ಹಾಗೂ ಔಷಧಿ ಚಿಕಿತ್ಸೆ ಅಗತ್ಯ. ರಕ್ತದೊತ್ತಡ ಇದ್ದ 60% ವ್ಯಕ್ತಿಗಳಲ್ಲಿ ಸಕ್ಕರೆ ಕಾಯಿಲೆ ಇರಲು ಸಾಧ್ಯ. ಆದ್ದರಿಂದ ರಕ್ತದ ಏರೊತ್ತಡವಲ್ಲದೇ ಇತರೇ ಸಮಸ್ಯೆಗೂ ಪರೀಕ್ಷೆ ಹಾಗೂ ಚಿಕಿತ್ಸೆ ಅಗತ್ಯವಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಇರಬೇಕು, ಅನೇಕ ಬಾರಿ ಆರೊಗ್ಯ ಕಾರ್ಯಕರ್ತರೂ ಈ ಸಮಸ್ಯೆ ಗುರುತಿಸಿ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜನೆರಿಕ್ ಔಷಧಿಗಳನ್ನು ಔಷಧಿ ಕೇಂದ್ರಗಳಲ್ಲಿ ದೊರಕಿಸಿ ಕೊಡಬೇಕು. ಬಿಪಿ ಉಪಕರಣ, ತೂಕ ನೋಡುವ ಉಪಕರಣ, ರಕ್ತದ ಸಕ್ಕರೇ ನೋಡುವ ಗ್ಲೂಕೋಮೀಟರ್, ಮೂತ್ರಪರೀಕ್ಷೆ ಮಾಡುವ ವ್ಯವಸ್ಥೆ ಈ ಕಾರ್ಯಕರ್ತರಿಗೆ ದೊರಕಬೇಕು. ಇದಲ್ಲದೆ ಔಷಧಿಗಳಾದ ಆಸ್ಪ್ರಿನ್, ಸ್ಮಾಟಿನ್, ಬಿಪಿ ಹತೋಟಿಗೆ ತರುವ ಔಷಧಿಗಳಾದ ಏಸ್ ಇನ್‍ಹಿಬಿಟಾರ್, ಡೈಯುರೆಟಿಕ್, ಬೀಟಾ ಬ್ಲಾಕರ್, ಕ್ಯಾಲ್ಸಿಯಂ ಚಾನಲ್ ಬ್ಲಾಕರ್, ಸಕ್ಕರೇ ಕಾಯಿಲೆ ಔಷಧಿ, ಇನ್ಸುಲಿನ್ ಎಲ್ಲವೂ ದೊರಕಬೇಕು.  ರೋಗಿಗಳಿಗೆ ಆಪ್ತಸಮಾಲೋಚನೆಗೆ ವ್ಯವಸ್ಥೆ ಮಾಡಬೇಕು.
ರಕ್ತದೊತ್ತಡ ಕೇವಲ ಆರೋಗ್ಯ ಸಮಸ್ಯೆಯಾಗದೇ ಜನಾರೋಗ್ಯ ಸಮಸ್ಯೆಯಾಗಿದೆ.. 2013 ಏಪ್ರಿಲ್ 7 ರಿಂದ 2014 ಏಪ್ರಿಲ್ 6ರವರೆಗೆ ಜನ ಜಾಗೃತಿ ಉಂಟುಮಾಡಲು ಸರಕಾರದ ಎಲ್ಲ ಪ್ರಯತ್ನಗಳಿಗೆ ಜನರು ಸ್ಪಂದಿಸಬೇಕಿದೆ.
 ಡಾ. ಪ್ರಕಾಶ್ ಸಿ. ರಾವ್
ಅಧ್ಯಕ್ಷರು, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು
ಮೊ: 9632726177
ಎಲ್ಲರೊಳಗೊಂದಾಗು ಮಂಕುತಿಮ್ಮ

No comments:

Post a Comment