Thursday, December 27, 2012

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಪ್ರಳಯ ಎಂಬುದು ಹಳಸಲು ಸುದ್ದಿ : ಶಂಕರ ಹಲಗತ್ತಿ

ಹೆಬ್ಬಳ್ಳಿ: ಡಿಸೆಂಬರ 14: ಪ್ರಳಯ ಎಂಬುದು ಹಳಸಲು ಸುದ್ದಿಯಾಗಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ಅವರು ಸೋಮಾಪೂರದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈ ಭೂಮಿಗೆ ವೈಜ್ಞಾನಿಕ ದಾಖಲೆಯ ಪ್ರಕಾರ 1000 ಕೋಟಿ ( 10 ಬಿಲಿಯನ್) ವರ್ಷಗಳು. ಈಗಾಗಲೇ 500 ಕೋಟಿ ವರ್ಷ ಪೂರೈಸಿದ್ದ ಇನ್ನೂ 500 ಕೋಟಿ ವರ್ಷಗಳು ಆಯಸ್ಸು ಭೂಮಿಗಿದೆ. ಒಬ್ಬ ಮನುಷ್ಯನ ಆಯಸ್ಸು 100 ವರ್ಷಗಳು ಮಾತ್ರ. ಪ್ರಳಯ ಗಿಳಯ ಏನೂ ಇಲ್ಲ. ಮಾನವನ ಸ್ವಾರ್ಥ ಸಾಧನೆಗಾಗಿ ಇಂದು ಪರಿಸರ ನಾಶದಂತಹ ಕಾರ್ಯಕ್ರಮಗಳಿಂದ ಮಳೆ ಕಡಿಮೆಯಾಗಿ, ಪರಿಸರದ ಏರು ಪೇರು ಆಗಲಿದ್ದು, ಪ್ರತಿಯೊಬ್ಬರೂ ಗಿಡಮರ ಬೆಳೆಸಿ ಪರಿಸರ ಸಂರಕ್ಷಿಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಗಮನ ಹರಿಸುವ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಂ. ಸದಸ್ಯ ಯೋಗೇಶಗೌಡ ಗೌಡರ ಈ ದೇಶದ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ಪವಾಡ ಎನ್ನುವ ಸಂಗತಿಗಳಲ್ಲಿ ಏಕೆ ಏನು ಹೇಗೆ ಎಂಬ ಪ್ರಶ್ನೆಗಳ್ನನು ಹಾಕುವುದರ ಮೂಲಕ ವೈಜ್ಞಾನಿಕ ಸತ್ಯವನ್ನು ಅರಿಯಬೇಕೆಂದು ಕರೆಯಿತ್ತರು.

ಗ್ರಾಪ ಸದಸ್ಯ ಬಸವರಾಜ ಬಿ ಮಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ , ಗುರು ತಿಗಡಿ, ಪ್ರಾರೆ ಸಮನ್ವಾಧಿಕಾರಿ ಎಸ್.ಎಚ್. ಬೆಳವಟಗಿ, ಆರ್.ಎಸ್.ಗುರುಮಠ, ಜಿ.ಬಿ.ಸಜ್ಜನ, ವೀರಣ್ಣ ಒಡ್ಡಿನ, ಚಂದ್ರು ತಿಗಡಿ, ಮಡಿವಾಳಪ್ಪ ಅಣ್ಣಿಗೇರಿ, ರತ್ನವ್ವ ಸಿರಗುಪ್ಪಿ, ಗಂಗವ್ವ ಮಾಯಕರ, ಶೇಖರಗೌಡ ಪಾಟೀಲ, ಕರೆಪ್ಪ ಮುತ್ತಗಿ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಲಕ್ಕಮ್ಮನವರ ಸ್ವಾಗತಿಸಿದರು. ಸಿದ್ದಪ್ಪ ಮುತ್ತಗಿ ನಿರೂಪಿಸಿದರು. ಪಾಟೀಲ ವಂದಿಸಿದರು. ನಂತರ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರು ಕೆಲವು ಮಾಟದ ಪ್ರಾತ್ಯಕ್ಷಿಕೆಗಳನ್ನು ಮಾಡಿತೋರಿಸಿ ಪವಾಡದ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಮನದಟ್ಟು ಮಾಡಿದರು.

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಯಶಸ್ವಿ

ಹೆಬ್ಬಳ್ಳಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಸದ್ಗುರು ವಾಸುದೇವ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಲಾಯಿತು.

ತಾಲೂಕ ಪಂಚಾಯತ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಸಂವಿಧಾನದ ಆಶಯ ಮತ್ತು ಮೂಲಭೂತ ಹಕ್ಕುಗಳಲ್ಲಿ ಪ್ರಧಾನವಾದ ಅಂಶ ಈ ದೇಶದ ಪ್ರತಿಯೊಬ್ಬರಿಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿದೆ.  ಸೌರವ್ಯೂಹ ಭೂಮಿ ಸೂರ್ಯ, ಆಕಶ ವಿಶ್ವದ ಅಗಾಧ ವಿಸ್ಮಯಗಳು ಇವುಗಳಲ್ಲಿ ವ್ಯತ್ಯಾಸ ಮತ್ತು ಬದಲಾವಣೆಗಳು ನಿರಂತರವಾಗಿ ಆಗುತ್ತವೆ. ಯಾವುದೇ ಪವಾಡ ಎಂದು ಜನತೆ ನಂಬಬಾರದು. ಪವಾಡದ ಹಿಂದೆ ಇರುವ ಸತ್ಯ ಅರಿಯಬೇಕು.  ಪವಾಡದ ಹಿಂದೆ ವೈಜ್ಞಾನಿಕ ಕಾರಣ ಇರುವುದನ್ನು ಕಂಡುಕೊಳ್ಳಲೇಬೇಕೆಂದರು.

ಧಾರವಾಡ ತಾಲೂಕ ಕೆ.ಜೆ.ವಿ.ಎಸ್. ಅಧ್ಯಕ್ಷ ಜಿ.ಟಿ.ಶಿರೋಳ ಬಹುಸಂಖ್ಯಾತ ಜನರ ಭಾವನೆಗಳ ಜೊತೆ ಸಮಸ್ಯೆಗಳ ಜೊತೆ ಬದುಕಿನ ಜೊತೆ ಮುಗ್ಧತೆಯ ಮತ್ತು ಅಜ್ಞಾನದ ಜೊತೆ ಮನುಕುಲ, ಪವಾಡ ಎಂಬ ವಿಷಯದ ಕುರಿತು ಆಟವಾಡುತ್ತಿದ್ದ ಜನರಿಗೆ ಮಂಕು ಬೂದಿ ಎರಚುವ ಜನರಿಂದ ಜಾಗೃತಿಯಿಂದಿರಲು ಕರೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಲಕ್ಕಮ್ಮನವರ, ಹಸೀನಾ ಸಮುದ್ರಿ, ರಾಠೋಡ, ಮಹಾಂತೇಶ.ಟಿ., ಎಲ್.ಆಯ್.ಲಕ್ಕಮ್ಮನವರ, ಕೆ.ಜಿ.ನಾಡಗೇರ, ಶಿವು ಬನ್ನಿಗಿಡದ ಮುಂತಾದವರು ಹಾಜರಿದ್ದರು.

ಬಸವರಾಜ ಕುಕನೂರ ಸ್ವಾಗತಿಸಿದರು.  ಮಂಗಳಾ ಬನ್ನಿಗಿಡದ ನಿರೂಪಿಸಿದರು. ಬಸಮ್ಮ ಪೂಜಾರ ವಂದಿಸಿದರು.


ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

No comments:

Post a Comment