Saturday, March 1, 2014

Hospet Report in Vijay Karnataka

ರಾಷ್ಟ್ರೀಯ ವಿಜ್ಞಾನ ದಿನಾಚರಣೆ


ಹೊಸಪೇಟೆಯ ಸರಕಾರಿ ಮೊದಲ ದರ್ಜೆ ಕಾಲೇಜ್‌ನಲ್ಲಿ ಬೆಂಗಳೂರಿ
ನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸ್ಥಳೀಯ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜ್‌ನ ಪ್ರಾಧ್ಯಾಪಕ ಎಸ್.ಎಂ.ಶಶಿಧರ ಶುಕ್ರವಾರ ಚಾಲನೆ ನೀಡಿದರು.
ಹೊಸಪೇಟೆ; ವಿಜ್ಞಾನವು ವಿಸ್ಮಯಗಳ ಸಾಗರವಾಗಿದ್ದು, ವೈಜ್ಞಾನಿಕತೆಯ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಸ್ಥಳೀಯ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜ್‌ನ ಪ್ರಾಧ್ಯಾಪಕ ಎಸ್.ಎಂ.ಶಶಿಧರ ಹೇಳಿದರು.

ನಗರದ ಸರಕಾರಿ ಮೊದಲ ದರ್ಜೆ ಕಾಲೇಜ್‌ನಲ್ಲಿ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ವಿಜ್ಞಾನವು ಒಂದು ವಿಸ್ಮಯವಾದ ಜಗತ್ತನ್ನು ನಿರ್ಮಾಣ ಮಾಡಿದೆ. ತರ್ಕಬದ್ಧ ಸಮಸ್ಯೆಗೆ ಉತ್ತರ ಸಮರ್ಪಕ ಉತ್ತರ ನೀಡುವುದು ವಿಜ್ಞಾನ ಮಾತ್ರಎಂದರು.

ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರದ ಥಿನ್‌ಫಿಲಂ ವಿಭಾಗದ ಮುಖ್ಯಸ್ಥ ಬಿ.ಎಚ್.ಎಂ.ದಾರುಕೇಶ್ ಮಾತನಾಡಿ, ವೈಜ್ಞಾನಿಕತೆಗೆ ಆಧ್ಯತೆ ಕಡಿಮೆಯಾಗುತ್ತಿದೆ. ಮಾಧ್ಯಮಗಳಲ್ಲಿ ಜೋತಿಷ್ಯಗಳು ಹೆಳುವ ಭವಿಷ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಬೆಳವಣಿಗೆ ಸರಿಯಲ್ಲ ಎಂದರು. ಪ್ರಾಂಶುಪಾಲ ಡಾ.ಕಡ್ಲಬಾಳು ಪನ್ನಂಗಧರ ಅಧ್ಯಕ್ಷತೆವಹಿಸಿದ್ದರು. ವಿಜ್ಞಾನ ಪರೀಷತ್ತಿನ ಜಿಲ್ಲಾಧ್ಯಕ್ಷ ಡಾ.ಬಿ.ಗೊವೀಂದರಾಜು, ಕೊಪ್ಪಳ ಸರಕಾರಿ ಮೊದಲ ದರ್ಜೆ ಕಾಲೇಜ್‌ನ ಪ್ರಾಧ್ಯಾಪಕ ದಾರುಕಾಸ್ವಾಮಿ, ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು, ಪ್ರಾಧ್ಯಾಪಕರಾದ ಡಾ.ಕೆ.ವೆಂಕಟೇಶ್, ಡಾ.ಗದ್ದಿಗೇಶ್, ಬಿ.ಜೆ.ಕನಕೇಶ್‌ಮೂರ್ತಿ, ಡಾ. ಮೃತ್ಯುಂಜಯ ರುಮಾಲೆ, ಬಸವರಾಜ್, ನಟರಾಜ್, ರೂಪಾ, ವಾರುಣಿ, ಅಕ್ಕಿ ಮಲ್ಲಿಕಾರ್ಜುನ, ಡಾ.ತ್ರಿವೇಣಿ, ಕುಮಾರಿ ಇತರರಿದ್ದರು

No comments:

Post a Comment