Wednesday, March 12, 2014

Kannada Prabha Report of Womens Day Program at Hospet

Kannadaprabha



ಸ್ವಾವಲಂಬಿಯಾದಾಗ ಮಹಿಳೆಗೆ ಮನ್ನಣೆ: ಸಾವಿತ್ರಿ
ಹೊಸಪೇಟೆ: ಮಹಿಳೆಯರು ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ವಿಶೇಷ ಗೌರವ-ಮನ್ನಣೆಗಳು ದೊರೆಯುತ್ತವೆ ಎಂದು ಶಿಕ್ಷಕಿ ಡಾ.ಎಸ್.ಎಂ. ಸಾವಿತ್ರಿ ಹೇಳಿದರು.


ನಗರದ ಸಿದ್ದಲಿಂಗಪ್ಪ ಚೌಕಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಇಲ್ಲಿನ ಭಾವೈಕ್ಯತಾ ವೇದಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಶಿಕ್ಷಣ  ಕುರಿತು ಉಪನ್ಯಾಸ ನೀಡಿದರು.


ಪ್ರಿಯದರ್ಶಿನಿ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಡಾ.ಎಸ್.ಡಿ. ಸುಲೋಚನಾ ಮಾತನಾಡಿ, ಮನೆಯನ್ನು ನಿಭಾಯಿಸುವುದರಿಂದ ಹಿಡಿದು, ಆಧುನಿಕ ತಂತ್ರಜ್ಞಾನದಲ್ಲೂ ತಮ್ಮ ಸಾಧನೆಯನ್ನು ಮೆರೆದ ಮಹಿಳೆಯರು ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತಿದ್ದಾರೆ. ಆದರೆ ಮೊದಲು ಮಹಿಳೆಗೆ ಮನೆಯಲ್ಲಿಯೆ ಸಹಕಾರ, ಬೆಂಬಲ ಅಥವಾ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.

 ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಎಂ. ಶಶಿಧರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾವೈಕ್ಯತಾ ವೇದಿಕೆ ಸಂಸ್ಥಾಪಕ ಪಿ. ಅಬ್ದುಲ್, ತಾಲೂಕಾಧ್ಯಕ್ಷ ಡಾ.ಎನ್.ಎಂ. ನಾಗಭೂಷಣ, ಸೊ.ದ. ವಿರೂಪಾಕ್ಷಗೌಡ, ಡಾ. ದಯಾನಂದ ಕಿನ್ನಾಳ, ಎಚ್.ಎಂ. ನಿರಂಜನ, ಶಿಕ್ಷಕಿ ಡಾ. ಉಷಾ ನಿರಂಜನ, ತಿಲೋತ್ತಮ, ಎಚ್.ಎಂ. ಜಂಬುನಾಥ ಭಾಗವಹಿಸಿದ್ದರು. ಎಂ. ಉಮಾಮಹೇಶ್ವರ ಪ್ರಾರ್ಥಿಸಿದರು. ಅನ್ನಪೂರ್ಣಾ ಸ್ವಾಗತಿಸಿದರು. ಅನ್ನಪೂರ್ಣಾ ಶ್ರೀನಾಥ ನಿರೂಪಿಸಿದರು. ಎಸ್.ಎಂ. ನಾಗರತ್ನಾ ವಂದಿಸಿದರು.

 

No comments:

Post a Comment