
KJVS ಉಪಾಧ್ಯಕ್ಷ, ಸಮಾಜಸೇವಕ ಚಿದಂಬರಯ್ಯ ನಿಧನ
ತುಮಕೂರು: ಸಮಾಜಮುಖಿ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದ ಸಮಾಜ ಸೇವಕ ಬಿ.ಎ.ಚಿದಂಬರಯ್ಯ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
ಭಾರತ ಜ್ಞಾನ - ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಕುವೆಂಪು ವೇದಿಕೆಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪುಸ್ತಕ ಮನೆಗೆ ಭೇಟಿ ನೀಡಿ ಮೌಢ್ಯ ಕಂದಾಚಾರ ಹಾಗೂ ಸರ್ಕಾರದ ನೀತಿಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಕೈಗಾರಿಕೋದ್ಯಮಿಯೂ ಆಗಿದ್ದ ಚಿದಂಬರಯ್ಯ ಅವರು ಕಲಾರಾಧಕರು ಆಗಿದ್ದರು.
ನಾಟಕ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಚಿದಂಬರಯ್ಯನವರು ಹಲವಾರು ಬಂಧು ಬಳಗ ಹಾಗೂ ಒಡನಾಡಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ದೇವರಾಯನದುರ್ಗದಲ್ಲಿ ನೆರವೇರಿತು. ಇವರ ನಿಧನಕ್ಕೆ ಕುವೆಂಪು ವೇದಿಕೆ ಹಾಗು ಪುಸ್ತಕ ಮನೆಯ ಗೆಳೆಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕುವೆಂಪು ವೇದಿಕೆ ಮತ್ತು ಪುಸ್ತಕ ಮನೆಯ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಪ್ರಗತಿಪರ ಚಿಂತಕ ಕೆ.ದೊರೈರಾಜ್, ಸಾಹಿತಿ ಜಿ.ವಿ.ಆನಂದಮೂರ್ತಿ, ನಿವೃತ್ತ ಎಂಜಿನಿಯರ್ ರಾಮಚಂದ್ರಯ್ಯ ಮತ್ತು ಕೆ.ಈ.ಸಿದ್ದಯ್ಯ ಸಂತಾಪ ಸೂಚಿಸಿದ್ದಾರೆ.
ವಾರ್ತಾಭಾರತಿ
ವಾರ್ತಾಭಾರತಿ
ಗುರುವಾರ - ಸೆಪ್ಟೆಂಬರ್ -27-2012
No comments:
Post a Comment