Saturday, January 5, 2013

PARABLE ON TIME MANAGEMENT

A PARABLE ON TIME MANAGEMENT





ಸಮಯ ನಿರ್ವಹಣೆ ನಿಪುಣರಾದ ಒಬ್ಬ ಪ್ರೊಫೆಸರ್ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಸಮಯ ನಿರ್ವಹಣೆ ಕುರಿತು ವಿವರಿಸುತ್ತಿದ್ದರು. ವಿದ್ಯಾರ್ಥಿಗಳು ಎಂದೂ ಮರೆಯದಂತೆ, ಮನಮುಟ್ಟುವಂತೆ ತಿಳಿಸಬೇಕೆಂದು ಒಂದು ಪ್ರಾಯೋಗಿಕ  ನಿರೂಪಣೆಯನ್ನು ಬಳಸಿಕೊಂಡರು.

ಆಗಲೇ ಅಪಾರ ಸಾಧನೆ ಮಾಡಿದ್ದ, ಬುದ್ಧಿವಂತರಾಗಿದ್ದ ವಿದ್ಯಾರ್ಥಿಗಳ ಮುಂದೆ ನಿಂತು ಅವರು "ನಿಮಗೆ ಈಗ  ರಸಪ್ರಶ್ನೆ ಸಮಯ, ಓಕೆನಾ?" ಎಂದು ಕೇಳುತ್ತಾ ಒಂದು ಗ್ಯಾಲನ್ ಸೈಜಿನ, ಅಗಲವಾದ ಕಂಠದ  ಗಾಜಿನ ಪಾತ್ರೆಯನ್ನು ಮೇಜಿನ ಮೇಲೆ ಇಟ್ಟರು. ಅವರು ಸುಮಾರು ಹನ್ನೆರಡು ಮುಷ್ಟಿ ಗಾತ್ರದ ಕಲ್ಲುಗಳನ್ನು ವಿದ್ಯಾರ್ಥಿಗಳಿಗೆ ತೋರಿಸುತ್ತಾ, ಎಚ್ಚರಿಕೆಯಿಂದ ಜಾರ್ ನೊಳಕ್ಕೆ, ಒಂದೊಂದನ್ನೇ ಇರಿಸುತ್ತಾ ಹೋದರು. ಜಾರ್ ಮೇಲಿನವರೆಗೂ ಕಲ್ಲುಗಳಿಂದ ತುಂಬಿಕೊಂಡಿತ್ತು ಮತ್ತು ಯಾವುದೇ ಕಲ್ಲುಗಳಿಗೂ ಇನ್ನು ಸ್ಥಳವಿರಲಿಲ್ಲ.

ಪ್ರೊಫೆಸರ್  ಕೇಳಿದರು, "ಈ ಜಾರ್ ತುಂಬಿದೆಯಾ?" ತರಗತಿಯ ಪ್ರತಿಯೊಬ್ಬರೂ "ಹೌದು, ಹೌದು.", ಎಂದು ಕೂಗಿದರು. ಪ್ರೊಫೆಸರ್ "ರಿಯಲಿ?", ಎನ್ನುತ್ತ ಅವರು ಮೇಜಿನ ಅಡಿಯಲ್ಲಿ ಕೈ ಹಾಕಿ ಒಂದು ಬಕೆಟ್ ಹೊರತೆಗೆದರು. ಅದರ ತುಂಬಾ ಜಲ್ಲಿ ಕಲ್ಲುಗಲಳಿದ್ದವು. ಅವುಗಳಲ್ಲಿ ಕೆಲವನ್ನು ದೊಡ್ಡ ಕಲ್ಲುಗಳ ನಡುವೆ ಸುರಿದರು ಹಾಗೂ ಜಾರನ್ನು ಅಲ್ಲಾಡಿಸಿದರು. ದೊಡ್ಡ ಕಲ್ಲುಗಳ ನಡುವಿನ ಖಾಲಿ ಸ್ಥಳಗಳಲ್ಲಿ ಜಲ್ಲಿಕಲ್ಲಿನ ಚೂರುಗಳು ಸೇರಿಕೊಂಡವು.

ನಂತರ ಮತ್ತೊಮ್ಮೆ ಗುಂಪನ್ನು ಕೇಳಿದರು, "ಜಾರ್ ತುಂಬಿದೆಯಾ?" ಈ ಹೊತ್ತಿಗೆ ವಿದ್ಯಾರ್ಥಿಗಳು  ಪ್ರೊಫೆಸರ್  ಅವರ ಪ್ರಯೋಗದ ಜಾಡು ಹಿಡಿಯತೊಡಗಿದ್ದರು.  "ಬಹುಶಃ ಇಲ್ಲ," ಒಂದು ಒಬ್ಬ ಉತ್ತರಿಸಿದ. "ಗುಡ್!" ಅವರು ಉತ್ತರಿಸಿದರು. ಅವರು ಮೇಜಿನ ಅಡಿಯಲ್ಲಿ ತಲುಪಿ ಮರಳಿನ ಒಂದು ಬಕೆಟ್ ಹೊರತೆಗೆದರು. ಅವರು ಜಾಡಿಯಲ್ಲಿ ಮರಳು ಹರಡುವುದಕ್ಕೆ ಪ್ರಾರಂಭಿಸಿದರು. ಅದು ಕಲ್ಲುಗಳ ಮತ್ತು ಜಲ್ಲಿ ನಡುವೆ ಬಿಟ್ಟ ಜಾಗಗಳಲ್ಲಿ ಹರಡಿಕೊಳ್ಳತೊಡಗಿತು.

ಮತ್ತೊಮ್ಮೆ ಅವರು "ಈ ಜಾರ್ ತುಂಬಿದೆಯೇ?" ಎಂಬ ಪ್ರಶ್ನೆ ಕೇಳಿದಾಗ,  "ಇಲ್ಲ!" ಎಂದು ವಿದ್ಯಾರ್ಥಿಗಳು ಕೂಗಿದರು. ಮತ್ತೊಮ್ಮೆ ಅವರು, "ಗುಡ್" ಎಂದು ಹೇಳಿದರು. ನಂತರ ನೀರಿನ ಹೂಜಿ ಹೊರತೆಗೆದರು. ಮತ್ತು ಜಾರ್ ಕಂಠಪೂರ್ತಿ ತುಂಬುವ ತನಕ ಅದರಲ್ಲಿ ನೀರು ಸುರಿದರು.

ನಂತರ ವಿದ್ಯಾರ್ಥಿಗಳತ್ತ ನೋಡಿದ ಪ್ರೊಫೆಸರ್  ಕೇಳಿದರು "ಈ ನಿರೂಪಣೆಯ ಉದ್ದೇಶ ನಿಮಗೆ ಅರ್ಥವಾಯಿತೆ?"

ಒಬ್ಬ ಉತ್ಸಾಹಿ ವಿದ್ಯಾರ್ಥಿ ಎದ್ದು ಉತ್ತರಿಸಿದ. "ನಿಮ್ಮ ಕೆಲಸ -ಕಾರ್ಯಗಳ ವೇಳಾಪಟ್ಟಿ ಎಷ್ಟೇ ಪೂರ್ಣವಾಗಿದ್ದರೂ ಪ್ರಯತ್ನ ಪಟ್ಟಲ್ಲಿ ಮತ್ತಷ್ಟು ಕಾರ್ಯಗಳನ್ನು ಅಳವಡಿಸಿಕೊಳ್ಳಬಹುದು.!"
"ಅಲ್ಲ," ಪ್ರೊಫೆಸರ್  ಉತ್ತರಿಸಿದರು.
“ಈ ನಿರೂಪಣೆಯ ಉದ್ದೇಶ ಅದಲ್ಲ!”
"ಈ ನಿರೂಪಣೆ ನಮಗೆ ಕಲಿಸುವ ಸತ್ಯ ಏನೆಂದರೆ, ನೀವು ಮೊದಲು ದೊಡ್ಡ ಕಲ್ಲುಗಳನ್ನು ಇರಿಸದೇ ಇದ್ದಲ್ಲಿ, ನೀವು ಅವುಗಳನ್ನು ಜಾರ್ ನೊಳಕ್ಕೆ ಎಂದಿಗೂ ಇರಿಸುವುದು ಸಾಧ್ಯವೇ ಇಲ್ಲ!”

ನಿಮ್ಮ ಜೀವನದಲ್ಲಿ 'ದೊಡ್ಡ ಕಲ್ಲುಗಳು’ ಯಾವುವು ಎಂದು ಆಲೋಚಿಸಿ;

ಪ್ರೀತಿಪಾತ್ರರೊಂದಿಗೆ ಸಮಯ ಹಂಚಿಕೊಳ್ಳುವುದು, ನಿಮ್ಮ ನಂಬಿಕೆ, ನಿಮ್ಮ ಶಿಕ್ಷಣ, ನಿಮ್ಮ ಕನಸುಗಳು, ಒಂದು ಸಾರ್ಥಕ ಕಾರಣ,...ಯಾವುವು?

ಮೊದಲು ಈ ದೊಡ್ಡ ಕಲ್ಲುಗಳನ್ನು ಇರಿಸುವುದನ್ನು ಮರೆಯದಿರಿ; ಇಲ್ಲವಾದರೆ ನೀವು ಎಂದಿಗೂ ಅವುಗಳನ್ನು ಪಡೆಯಲಾರಿರಿ. ಎಂದೆಂದಿಗೂ ನೆನಪಿಡಿ., ಇಂದು ರಾತ್ರಿ ಅಥವಾ ಬೆಳಗ್ಗೆ, ಈ ಸಣ್ಣ ಕಥೆ ನಿಮ್ಮೊಳಗೆ ಕಾಡುವ ಸಂದರ್ಭದಲ್ಲಿ ನೀವೇ ಈ ಪ್ರಶ್ನೆ ಕೇಳಿಕೊಳ್ಳಿ, "ನನ್ನ ಜೀವನದಲ್ಲಿ 'ದೊಡ್ಡ ಕಲ್ಲುಗಳು’ ಯಾವುವು?", ನಂತರ, ಮೊದಲು ನಿಮ್ಮ ಜಾರ್ ನೊಳಕ್ಕೆ ಅವುಗಳನ್ನು ಇರಿಸುತ್ತಾ ಹೋಗಿರಿ.




No comments:

Post a Comment