Thursday, February 28, 2013

National Science Day Report of Hospet-1

ಪ್ರಶ್ನಿಸುವ ಮನೋಭಾವ
ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

KJVS, Hospet, National Science Day

Jambanna addressing
Children Scientists

Children Scientists

Umamaheshwar singing Songs about the importance of Scientific orientation


ಹೊಸಪೇಟೆ.ಫೆ.28 :

ವಿದ್ಯಾರ್ಥಿ ಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಪಕ್ಷಿತಜ್ಞ ಅಬ್ದುಲ್ ಸಮದ್ ಕೊಟ್ಟೂರು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿ ದರು. 

ಅವರು ನಗರದ ಚಿತ್ತವಾಡ್ಗಿ ಯಲ್ಲಿರುವ ಅಶ್ವಿನಿ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಡಾರ್ವಿನ್ನನ ವಿಕಾಸವಾದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. 

ಯಾವುದೇ ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿವೇಚಿಸಿ, ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಬೇಕು. ಪ್ರಶ್ನಿಸುವ ಮನೋಭಾವ ವಿಜ್ಞಾನದ ತಳಹದಿ. ವಿಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕೆ ಹೊರತು, ದುರ್ಬಳಕೆ ಮಾಡಿಕೊಳ್ಳಬಾರದು. ಇಂದಿನ ಅನೇಕ ಮಾಧ್ಯಮಗಳು ತಂತ್ರಜ್ಞಾನವನ್ನು ಬಳಸಿಕೊಂಡು ಜೋತಿಷ್ಯ, ವಾಸ್ತು ಕುರಿತು ಮೌಢ್ಯವನ್ನು ತುಂಬುತ್ತಿರುವುದು ವಿಷಾದಕರ. ನೈಸರ್ಗಿಕ ಸಂಪನ್ಮೂಲಗಳನ್ನು ನಿಯಂತ್ರಿತವಾಗಿ ಬಳಸಿ, ಭೂಮಿಯ ಜೈವಿಕ ಸಮತೋಲನವನ್ನು ಕಾಪಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ಪ್ರೊ. ಎಸ್.ಎಂ. ಶಶಿಧರ ಮಾತನಾಡಿ, ಸರ್ಕಾರವು ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ಪ್ರತಿ ಮಗುವಿನಲ್ಲಿಯೂ ಒಬ್ಬ ವಿಜ್ಞಾನಿ ಇರುತ್ತಾನೆ. ಶಿಕ್ಷಣವು ಮಗುವಿನಲ್ಲಿರುವ ಕುತೂಹಲ ಹಾಗೂ ಬೆರಗುಗಳನ್ನು ಗುರುತಿಸಿ ಬೆಳೆಸಬೇಕು ಎಂದರು.

ಚೇತನ ಸಾಹಿತ್ಯ ಸಂಸ್ಥೆಯ ಜಂಬುನಾಥ ಎಚ್.ಎಂ., ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಶ್ವಿನಿ ಶಾಲೆಯ ಮುಖ್ಯಗುರು ಕೆ.ಬಿ.ವಿಜಯಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಆರಂಭದಲ್ಲಿ ಕಲಾವಿದ ಎಂ.ಉಮಾಮಹೇಶ್ವರ ವಿಜ್ಞಾನ ಗೀತೆಯನ್ನು ಹಾಡಿದರು. ಕರ್ನಾಟಕ ಸಾಂಸ್ಕøತಿಕ ಸಂಸ್ಥೆಯ ಟಿ.ಎಂ.ನಾಗಭೂಷಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಶಿಕ್ಷಕ ಲವಕುಮಾರ್ ವಂದಿಸಿದರು.

1 comment: