Thursday, April 10, 2014

World Health Day Program at Bijapur

“ಕಡಿತ ಚಿಕ್ಕದು; ಬೆದರಿಕೆ ದೊಡ್ಡದು”
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜಾಪುರ :
      ಅಂಜುಮನ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಾಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ದಿನಾಂಕ :-08-04-2014 ರಂದು ಬಿ.ಡಿ.ಜತ್ತಿ ಹಿಂದಿ ಬಿ.ಈಡಿ.ಶಿಕ್ಷಣ ಮಹಾವಿದ್ಯಾಲಯದಲ್ಲಿ “ವಿಶ್ವ ಆರೋಗ್ಯ ದಿನಾಚರಣೆ” ಅಂಗವಾಗಿ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ ಎಸ್. ದಾರವಾಡಕರ ಇವರ ಉಪನ್ಯಾಸ ಏರ್ಪಡಿಸಲಾಗಿತ್ತು.

    ವಿಶ್ವ ಆರೋಗ್ಯ ಸಂಸ್ಥೆ ಬೆಳೆದುಬಂದ ರೀತಿಯನ್ನು ವಿವರಿಸುತ್ತ ಈ ಸಲದ ಸ್ಲೋಗನ್ ‘ಕಡಿತ ಚಿಕ್ಕದು ಬೆದರಿಕೆ ದೊಡ್ಡದು’ ಎಂದು ತಿಳಿಸಿ, ಮೂರು ತರ ಸೊಳ್ಳೆ ಕಡಿದರೆ ಐದುರೋಗಗಳಾದ ಮಲೇರಿಯಾ, ಡೆಂಗ್ಯೂ, ಮೆದುಳು ಜ್ವರ, ಆನೆಕಾಲು ರೋಗ, ಚಿಕನ್ ಗುನ್ಯ ಬರುತ್ತವೆಂದು ತಿಳಿಸಿದರು. ಸಿಹಿನೀರಿನಲ್ಲಿ ಬೆಳೆಯುವ ಸೊಳ್ಳೆ ಇಲಿಸಿಜಿಪ್ತ ಹಾಗೂ ಹೊಲಸು ನೀರಿನಲ್ಲಿ ಬೆಳೆಯವ ಸೊಳ್ಳೆ ಕ್ಯೂಲೆಕ್ಸ ಬಗ್ಗೆ ತಿಳಿಸುತ್ತಾ ಅವುಗಳಿಂದ ಹರಡುವ ರೋಗಗಳ ಬಗ್ಗೆ ವಿವರಣೆ ನೀಡಿ, ಮನೆ ಮುಂದೆ, ರಸ್ತೆಯ ಅಕ್ಕ ಪಕ್ಕದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆವಹಿಸಬೇಕೆಂದು ಅಭಿಪ್ರಾಯಪಟ್ಟರು.
    ಡಾ.ಎಸ್.ಎ.ಬಿರಾದಾರ ತಾಲೂಕಾ ಆರೋಗ್ಯ ಅಧಿಕಾರಿಗಳು ವಿಜಾಪುರ ಇವರು ಮಾತನಾಡುತ್ತಾ, “ರೋಗ ಬಂದ ನಂತರ ಚಿಕಿತ್ಸೆ ಪಡೆಯುವದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಸೂಕ್ತ” ಎಂದು ತಿಳಿಸಿದರು. ಪೋಲಿಯೊ,ಕಾಮಲೆ, ಟಿಬಿ,ಲೆಪ್ರೆಸಿ ಹೀಗೆ ಹಲವಾರು ರೋಗಗಳು ಬಾರದಂತೆ ನೋಡಿಕೊಳ್ಳುವುದೇ ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶವಾಗಿದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಇಂತಹ ಮಹತ್ವದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮಚ್ಚುಗೆ ವ್ಯಕ್ತಪಡಿಸಿದರು.
    ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ.ಬುರ್ಲಿ ಇವರು ಉದ್ದೇಶ ಹಾಗೂ ಸಮಿತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶ್ರೀಮತಿ ಎನ್.ಎಮ್.ಪಾಠಾಣ ಇವರು ಆರೋಗ್ಯದ ಬಗ್ಗೆ ಗಮನ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇಂತಹ ಕಾರ್ಯಕ್ರಮಗಳು ನಡೆಯುತ್ತಾ ಇರಬೆಕೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
    ಕಾರ್ಯದರ್ಶಿಗಳಾದ ಶ್ರೀ ಎಸ್.ಜಿ.ಕಾಂಬಳೆ ಹಾಗೂ ಸದಸ್ಯರು, ಅಂಜುಮನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಡಿ.ಎಚ್.ನದಾಫ್, ಸಂಯೊಜಕರಾದ ಶ್ರೀಮತಿ ಗುಡದೂರ, ಶ್ರೀ ಸಾರವಾಡ, ಉಪನ್ಯಾಸಕರು ಹಾಗೂ 90ಕ್ಕು ಹೆಚ್ಚು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು

-ಜಿ.ಎಸ್.ಕಾಂಬಳೆ (ಕಾರ್ಯದರ್ಶಿಗಳು), ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ

No comments:

Post a Comment