Friday, April 4, 2014

Program about Scientific Temper at Bijapur


“ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳಸಿ”

‘ರಾಷ್ಟೀಯ ವಿಜ್ಞಾನ ದಿನಾಚರಣೆಯ’ ಅಂಗವಾಗಿ ದಿನಾಂಕ : 09-03-2014 ರಂದು ನಗರದ ಪ್ರತೀಷ್ಠಿತ ಸಂಸ್ಥೆಗಳಲ್ಲೊಂದಾದ ಚೇತನಾ ಬಿ.ಬಿ.ಎ., ಬಿ.ಸಿ.ಎ., ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬಿಜಾಪುರ ಜಿಲ್ಲಾ ಘಟಕ’ ದ ವತಿಯಿಂದ ‘ಮೂಢನಂಬಿಕೆ’ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 




ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಎಸ್.ಬಿ.ಕಲ್ಯಾಣಿ ಉಪನ್ಯಾಸಕರು ಸರಕಾರಿ ಪ.ಪೂ.ಮಹಾವಿದ್ಯಾಲಯ ಮಮದಾಪುರ ಇವರು ಮೂಢನಂಬಿಕೆ ಕುರಿತು ಮಾತನಾಡುತ್ತ ನಂಬಿಕೆ ಹಾಗೂ ಮೂಢನಂಬಿಕೆ ವ್ಯತ್ಯಾಸ ಅರಿತುಕೊಳ್ಳಬೆಕೆಂದು ತಿಳಿಸಿದರು. ಶ್ರೀಎಸ್.ಕೆ.ಚಿಕರಡ್ಡಿ ನಿವೃತ್ತ ಮುಖ್ಯೋಪಾಧ್ಯಾಯರು ಮಾತನಾಡಿ ಕೇವಲ ವಿಜ್ಞಾನ ಶಿಕ್ಷಕರಿಗೆ ಮಾತ್ರ ಈ ಕಾರ್ಯಕ್ರಮ ಸೀಮಿತವಾಗಿರದೆ ಎಲ್ಲರೂ ಭಾಗವಹಿಸುವಂತಾಗಬೇಕು. ಬಸವಣ್ಣನವರು ಹೇಳಿದಹಾಗೆ ‘ನುಡಿದಂತೆ ನಡೆ’ ಎಂಬಂತೆ ಕೇವಲ ಮಾತನಾಡಿದರೆ ಸಾಲದು ನಮ್ಮನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಜೀವನದ ದೃಷ್ಠಾಂತದೊಂದಿಗೆ ವಿವರಿಸಿದರು. ಶ್ರೀ ಎಮ್ ಓ. ಶಿರೂರ ಉಪನ್ಯಾಸಕರು, ಪಾಟೀಲ ಪ.ಪೂ.ಮಹಾವಿದ್ಯಾಲಯ ಮನಗೂಳಿ ಇವರು ಮಾತನಾಡುತ್ತ ವಿಜ್ಞಾನ ಇಷ್ಟು ಮುಂದುವರೆದಿದ್ದರೂ ಇನ್ನೂ ಹಲವೆಡೆ ಅವೈಜ್ಞಾನಿಕತೆಯಿಂದ ಕೂಡಿದ ಜನರಿಗೆ ಮೂಢನಂಬಿಕೆ ಹೋಗಲಾಡಿಸುವ  ವಿಚಾರಗಳು ತಲುಪುವಂತಾಗಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಮತಿ ಎಸ್.ವ್ಹಿ.ಹಂದಿಗೋಳ ಇವರು ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ, ಕೇವಲ ಪಠ್ಯವಸ್ತುವಿನಲ್ಲಿರುವ ವಿಷಯವನ್ನು ಉಪನ್ಯಾಸದ ಮೂಲಕ ಹೇಳದೆ ಹಲವಾರು ಪ್ರಯೋಗಗಳ ಮೂಲಕ ತಿಳಿಸಿದರೆ ಮಕ್ಕಳು ಆಸಕ್ತಿಯಿಂದ ಕಲಿಯಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 
ಚೇತನಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ||ದಯಾನಂದ ಜುಗತಿ ಅಧ್ಯಕ್ಷತೆವಹಿಸಿದ್ದರು. ಮೊದಲಿಗೆ ಶ್ರೀ ಜಿ.ಎಸ್.ಕಾಂಬಳೆ ಕಾರ್ಯದರ್ಶಿಗಳು ಸ್ವಾಗತಿಸಿದರು, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಎಸ್.ವ್ಹಿ.ಬುರ್ಲಿ ಪ್ರಾಸ್ತಾವಿಕ ಮಾತನಾಡಿ ಸಮಿತಿಯ ಜವಾಬ್ದಾರಿಗಳನ್ನು ವಿವರಿಸಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಜೆ.ಎಸ್.ಸೊಡ್ಡಗಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸಹ ಕಾರ್ಯದರ್ಶಿ ಎಸ್.ಎನ್.ಅವಟಿ, ಖಜಾಂಚಿ ಶ್ರೀ ಎ.ಎಸ್.ಗುಂಡಳ್ಳಿ, ಸದಸ್ಯರಾದ ಶ್ರೀ ಜಿ.ವಿ.ಹಿರೇಮಠ, ಶ್ರೀಪಿ.ಎಸ್.ಹಿರೇಮಠ ಶ್ರೀ ಎಲ್.ಎಚ್.ಹಡಪದ, ಶ್ರೀಮತಿ ಶ್ರೀದೇವಿ ಪಾಟೀಲ, ಶ್ರೀಮತಿ ಕಲ್ಪನಾ ಪಾಟೀಲ, ಶ್ರೀ ಬಿ.ಕೆ.ಅನಾಜೆ, ಫೆಢಿನಾ ಸಂಸ್ಥೆಯ ಸಿಬ್ಬಂದಿ,ಎಸ್.ಎಮ್.ಹೊರಗಿನಮನಿ ಅಧ್ಯಕ್ಷರು ಡಿ.ಇ.ಆರ್.ಒ ವಿಜಾಪುರ, ಜಿಲ್ಲೆಯ ವಿಜ್ಞಾನ ಆಸಕ್ತರು, ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
                                                                               
                                                                                                          
            (ಜಿ.ಎಸ.ಕಾಂಬಳೆ ಕಾರ್ಯದರ್ಶಿ,   ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಾಪುರ)

No comments:

Post a Comment