Monday, April 7, 2014

Science behind 'miracles'...

ಪವಾಡಗಳ ಹಿಂದೆ ಕೈಚಳಕ
ಮತ್ತು ವಿಜ್ಞಾನ ಅಡಗಿದೆ
-ರವಿ ದೇವರಡ್ಡಿ

ಗದಗ: ಕಷ್ಠದಲ್ಲಿರುವ ಜನರು ಪರಿಹಾರಕ್ಕಾಗಿ ದೇವರ ಬಳಿ ತೆರಳಿದಾಗ ಅಲ್ಲಿನ ಪೂಜಾರಿಗಳು, ಬಾಬಾಗಳು ಅವರನ್ನು ಪವಾಡದ ಹೆಸರಿನಲ್ಲಿ ಶೋಷಣೆ ಮಾಡುವುದು ಸಾಮಾನ್ಯವಾಗಿದೆ. ಪವಾಡಗಳು ಕೈಚಳಕ ಮತ್ತು ವಿಶೇಷ ವಸ್ತುಗಳನ್ನು ಬಳಸಿ ಜನರಿಗೆ ವಂಚಿಸಲು ಹಿಡಿದ ವಾಮ ಮಾರ್ಗವಾಗಿದೆ. ಇವುಗಳ ಹಿಂದೆ ಒಂದು ವೈಜ್ಞಾನಿಕ ತತ್ವ ಅಡಗಿದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ರವಿ ದೇವರಡ್ಡಿ ತಿಳಿಸಿದರು.

ಅವರು ಸ.ಹಿ.ಪ್ರಾ.ಶಾಲೆ ಗುಜಮಾಗಡಿ ಹಾಗೂ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಜಿಲ್ಲಾ ಘಟಕ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಪವಾಡ ಬಯಲು ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಮಾತನಾಡುತ್ತಿದ್ದರು.


ಮುಂದುವರೆದು ಮಾತನಾಡಿ ದುರ್ಬಲ ಮನಸ್ಸಿನ ಮಹಿಳೆಯರು ಮತ್ತು ಮಕ್ಕಳನ್ನೆ ಗುರಿಯಾಗಿರಿಸಿ ಕೊಂಡ ಬೂದಿ ಬಾಬಾಗಳು ಅನೇಕ ರೀತಿಯ ಕೈಚಳಕಗಳಿಂದ ನಿತ್ಯ ಸಮಾಜದ ಶೋಣೆಗೆ ನಿಂತಿದ್ದಾರೆ.ಸಮೂಹ ಮಾಧ್ಯಮಗಳು ಅನೇಕ ಸಂದರ್ಭಗಳಲ್ಲಿ ಇವುಗಳ ವಿಶ್ಲೇಷಣೆ ಮಾಡದೆ, ಪದೆ ಪದೆ ಬಿತ್ತರಿಸಿ ಡೋಂಗಿ ಬಾಬಾಗಳಿಗೆ ಪ್ರಚೋದನೆ ನಿಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಖಾಲಿ ಕೈಯಲ್ಲಿ ಬೂದಿ ಬರಿಸುವುದು, ತುಂಡಾದ ಹಗ್ಗವನ್ನು ಮಂತ್ರ ಶಕ್ತಿಯಿಂದ ಜೋಡಿಸುವದು, ಡಬ್ಬಿಯಲ್ಲಿ ಮುಚ್ಚಿಟ್ಟ ಸಂಖ್ಯೆ ಹೇಳುವುದು, ಮೈಗೆ ಬೆಂಕಿ ಹಚ್ಚಿಕೊಳ್ಳುವುದು, ಕೈಯಲ್ಲಿ ಕರ್ಪೂರ ಉರಿಸಿಕೊಳ್ಳುವುದು, ನೀರಿನಿಂದ ಬೆಂಕಿ ಹಚ್ಚುವುದು,ನೀರಿನಿಂದ ದೀಪ ಬೆಳಗಿಸುವುದು ಮುಂತಾದ ಪವಾಡಗಳ ಕೈಚಳಕವನ್ನು ಮಾಡಿ ತೋರಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಕೆ.ತಳವಗೇರಿ ವಹಿಸಿದ್ದರು. ವೇದಿಕೆಯ ಮೇಲೆ ಪ್ರಧಾನ ಗುರುಮಾತೆ ಎಸ್.ಪಿ.ಹೂಗಾರ, ಶಿಕ್ಷಕರಾದ ಬಿ.ಎಲ್.ಕುಂಬಾರ,ಎಸ್.ಬಿ.ಕನ್ನಿಕೆ, ಪಿ.ಕೆ.ಬಗಾಡೆ, ಭಾಗವಹಿಸಿದ್ದರು. ಎಸ್.ಕೆ. ಮಠಪತಿ ಕಾರ್ಯಕ್ರಮ ನಿರೂಪಿಸಿ,ಎಮ್.ಆರ್.ಕಲ್ಗುಡಿ ವಂದಿಸಿದರು.

No comments:

Post a Comment