Saturday, June 2, 2012

ಬಳ್ಳಾರಿ ಜಿಲ್ಲಾ ಘಟಕದಿಂದ ಶುಕ್ರ ಸಂಕ್ರಮ ಕಾರ್ಯಗಾರ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬಳ್ಳಾರಿ ಜಿಲ್ಲಾ ಘಟಕ

“ಶುಕ್ರ ಸಂಕ್ರಮ ಅಪರೂಪ ಖಗೋಳ ಕೌತುಕ"

 - ಪ್ರೊ, ಎಸ್.ಎಂ.ಶಶಿಧರ
ಹೊಸಪೇಟೆ 2 ಜೂನ್ 2012

“ಶುಕ್ರ ಸಂಕ್ರಮವು ಇದೇ ಜೂನ್ 6 ಭುದುವಾರ ದಂದು ಸಂಭವಿಸಲಿದ್ದು, ಅದನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಬೇಡಿ” ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ (KJVS) ಸಹ ಕಾರ್ಯದರ್ಶಿ ಪ್ರೊ.ಎಸ್.ಎಂ.ಶಶಿಧರ ಕರೆ ನೀಡಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗು ಕರ್ನಾಟಕ ಜ್ಞಾನ ವಿಜ್ವಾನ ಸಮಿತಿ (KJVS) ಬಳ್ಳಾರಿ ಜಿಲ್ಲಾ ಘಟಕ ಜಂಟಿಯಾಗಿ ಆಯೋಜಿಸಿದ್ದ ಶುಕ್ರ ಸಂಕ್ರಮ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಯೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

“ಜೂನ್ 6, 2012 ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಿಗ್ಗೆ 10.20ರ ವರೆಗೆ ಶುಕ್ರಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಇದುವೇ ಶುಕ್ರಸಂಕ್ರಮ. ಇದೊಂದು ಅಪರೂಪದ ಖಗೋಳ ವಿದ್ಯಮಾನ.  ದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮವು ವೀಕ್ಷಣೆಗೆ ಲಭ್ಯವಾಗಿದೆ. ಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟುವರ್ಷಗಳ ಮಧ್ಯಂತರ ಅವಧಿಯಂತೆ) ಶುಕ್ರ ಸಂಕ್ರಮ ಸಂಭವಿಸುತ್ತದೆ. ಈ ಹಿಂದಿನ ಸಂಕ್ರಮಗಳು ಕ್ರಮವಾಗಿ 1631 ಮತ್ತು 1639, 1761 ಮತ್ತು 1769, 1874 ಮತ್ತು 1882 ಹಾಗೂ ಈಚೆಗೆ 2004 ರಲ್ಲಿ ಸಂಭವಿಸಿರುತ್ತವೆ. ಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದು. ವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮವನ್ನು ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆ!. ಇದು ನಮಗೂ ಕೊನೆಯ ಅವಕಾಶ. ಈ ಶತಮಾನದ ಕೊನೆಯ ಘಟನೆ. ಮುಂದಿನ ಶುಕ್ರ ಸಂಕ್ರಮವು 105 ವರ್ಷಗಳ ನಂತರ ಅಂದರೆ 2117ರಲ್ಲಿ ನೋಡಲು ಸಾಧ್ಯ” ಎಂದು ಅವರು ಕಾರ್ಯಗಾರದಲ್ಲಿ ತಿಳಿಸಿದರು

ಶುಕ್ರ ಸಂಕ್ರಮ ವೀಕ್ಷೀಸುವ ಸಂದರ್ಭದಲ್ಲಿ ಪ್ರಖರ ಸೂರ್ಯ ಕಿರಣಗಳಿಂದ ಕಣ್ಣಿಗೆ ಹಾನಿಯಾಗದಂತೆ ಸೂಕ್ತ ರಕ್ಷಣಾ ವಿಧಾನಗಳನ್ನು ಅವರು ಸೂಚಿಸಿದರು. ವೈಜ್ಞಾನಿಕವಾಗಿ ತಯಾರಿಸಿ ದೃಡೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು. ಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಟುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು.

ಈ ಕಾರ್ಯಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿ.ಡಿ.ಐ.ಟಿ. ಪ್ರಾಂಶುಪಾಲರಾದ ಡಾ.ಪಿ.ಖಗೇಶನ್ ಮಾತನಾಡಿ ಖಗೋಳ ಶಾಸ್ತ್ರವು ಅನೇಕ ವಿಸ್ಮಯಗಳ ಆಗರವಾಗಿದ್ದು, ಮಕ್ಕಳಲ್ಲಿ ಆಕಾಶ ವೀಕ್ಷಣೆಯ ಆನಂದ ಆಸಕ್ತಿ ತುಂಬಬೇಕೆಂದು ಅಭಿಪ್ರಾಯ ಪಟ್ಟರು.

ಚೇತನ ಸಾಹಿತ್ಯ ಸಂಸ್ಥೆ ಹಾಗು ಕರ್ನಾಟಕ ಸಾಂಸ್ಕøತಿಕ ಸಂಸ್ಥೆ ಹೊಸಪೇಟೆಯ ಪದಾಧಿಕಾರಿಯಾದ ಪ್ರಭಾಕರ ಕೆಂದೂಳಿಯವರು ಮಾತನಾಡಿ ತಂತ್ರಜ್ಞಾನ ಅಬ್ಬರದ ನಡುವೆ ಇಂತಹ ಕಾರ್ಯಕ್ರಮಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನೆರವಾಗತ್ತುವೆ, ಪಿಡಿಐಟಿಯ ಪ್ರಾಧ್ಯಾಪಕರಾದ ಪ್ರೊ. ವಸಂತಮ್ಮ ಹಾಗು ಪಾರ್ವತಿ ಕಡ್ಲಿಯವರು, ಬಿ.ಎಂ.ಶ್ರೀನಾಥ ಉಪಸ್ಥಿತರಿದ್ದರು. ಅಧ್ಯಾಪಕಿ ಸುಮಲತಾ ಸ್ವಾಗತಿಸಿದರು, ಶ್ರೀಮತಿ ಫಿರ್ದೋಶ್ ಪರವೀನ್ ನಿರೂಪಿಸಿದರು,  KJVSನ ಟಿ.ಎಂ.ನಾಗಭೂಷಣ ವಂದಿಸಿದರು. 

Photo

 ಕರ್ನಾಟಕ ಜ್ಞಾನ ವಿಜ್ವಾನ ಸಮಿತಿ (KJVS) ಬಳ್ಳಾರಿ ಜಿಲ್ಲಾ ಘಟಕ ಪಿ.ಡಿ.ಐ.ಟಿ (PDIT, Hospet) ಜಂಟಿಯಾಗಿ  ಆಯೋಜಿಸಿದ್ದ ಶುಕ್ರ ಸಂಕ್ರಮ ಕುರಿತ ಕಾರ್ಯಗಾರವನ್ನು ಪ್ರಾಂಶುಪಾಲ ಡಾ.ಪಿ.ಖಗೇಶನ್ ಉದ್ಘಾಟಿಸಿದರು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊ.ಎಸ್.ಎಂ.ಶಶಿಧರ, ಪ್ರಭಾಕರ ಕೆಂದೂಳಿ, ಪ್ರೊ. ವಸಂತಮ್ಮ ಹಾಗು ಪಾರ್ವತಿ ಕಡ್ಲಿಯವರು ಉಪಸ್ಥಿತರಿದ್ದರು, 
 ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊ.ಎಸ್.ಎಂ.ಶಶಿಧರ ಮಾತನಾಡುತ್ತಿರುವುದು.

No comments:

Post a Comment