Tuesday, June 5, 2012

`ಶುಕ್ರ ಸಂಕ್ರಮ: ಖಗೋಳ ಉತ್ಸವವಾಗಿಸಿ' - ಇ.ಬಸವರಾಜು

logo



`ಶುಕ್ರ ಸಂಕ್ರಮ: ಖಗೋಳ ಉತ್ಸವವಾಗಿಸಿ'

  • June 03, 2012


ಬೆಂಗಳೂರು: `ಜೂನ್ 6 ರಂದು ನಡೆಯಲಿರುವ ಶತಮಾನದ ಕಡೆಯ ಅಪರೂಪದ ಶುಕ್ರ ಸಂಕ್ರಮವನ್ನು ರಾಜ್ಯದ ಎಲ್ಲ ಜನರು ವಿಕ್ಷೀಸಲು ಆ ದಿನವನ್ನು ಖಗೋಳ ಉತ್ಸವವನ್ನಾಗಿ ಎಲ್ಲ ಶಾಲೆ, ಕಾಲೇಜು, ಗ್ರಾಮ ಬಡಾವಣೆಗಳಲ್ಲಿ ಆಚರಿಸಬೇಕೆಂದು` ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಸವರಾಜು ಕರೆ ನೀಡಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಹಿಂದಿನ ಶುಕ್ರ ಸಂಕ್ರಮ 2004 ರಲ್ಲಿ ಸಂಭವಿಸಿತ್ತು. ಮುಂದಿನ ಶುಕ್ರ ಸಂಕ್ರಮ ಸಂಭವಿಸುವುದು 2117 ಅಂದರೆ 105 ವರ್ಷಗಳ ನಂತರ.
ಕಿರು ಗ್ರಹಣ ಎಂದು ಕರೆಯಲ್ಪಡುವ ಈ ವಿದ್ಯಮಾನ ಈಗ ಬದುಕಿರುವವರು ಮತ್ತೆ ನೋಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಜನಸಮೂಹದಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು. ಸುರಕ್ಷಿತವಾಗಿ `ಶುಕ್ರ ಸಂಕ್ರಮ` ವೀಕ್ಷಿಸಲು ವಿಜ್ಞಾನ ಅಭಿವೃದ್ಧಿ ಕೇಂದ್ರ, ಬೆಂಗಳೂರು ಅಸ್ಟ್ರಾನಾಮಿಕಲ್ ಸೊಸೈಟಿ ಸಂಸ್ಥೆಗಳು ರಾಜ್ಯದ ಎಲ್ಲಡೆ ಕಾರ್ಯಾಗಾರ, ಗ್ರಹಗಳು, ಅವುಗಳ ನಡುವಿನ ಹಾಗೂ ಸೂರ್ಯನಿಗೂ ಅವುಗಳಿಗೂ ಇರುವ ಸಾಪೇಕ್ಷದೂರ, ಗ್ರಹಣಗಳು ಕುರಿತು ಉಪನ್ಯಾಸ, ಚರ್ಚೆಗಳು ನಡೆಯಲಿವೆ` ಎಂದು ಅವರು ವಿವರಿಸಿದರು.

`ರಾಜ್ಯದಾದ್ಯಂತ ಈಗಾಗಲೇ ಐವತ್ತಕ್ಕೂ ಹೆಚ್ಚು ಕಾರ್ಯಗಾರಗಳು ನಡೆದಿವೆ. ಇನ್ನೂ ಐವತ್ತು ಕಾರ್ಯಾಗಾರಗಳನ್ನು ಸಂಘಟಿಸಲಾಗುವುದು. ಇದಕ್ಕೆ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೈ ಜೋಡಿಸಿದೆ. ಸೂರ್ಯ ಗ್ರಹಣವನ್ನು ವೀಕ್ಷಿಸಲು ಮುಂಬೈನ ನವನಿರ್ಮಿತ ಸಂಸ್ಥೆಯವರು ತಯಾರಿಸಿದ ಸುರಕ್ಷಿತ ಕನ್ನಡಕಗಳನ್ನು ತರಿಸಿ 10 ರೂಪಾಯಿ ಒಂದೆಕ್ಕೆ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದ್ದು, ಈ ಬಾರಿ ಉತ್ಸಾಹ ತುಂಬಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ`ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಅಸ್ಟ್ರಾನಾಮಿಕಲ್ ಸೊಸೈಟಿ ಉಪಾಧ್ಯಕ್ಷ ನವೀನ್ ನಂಜುಡಪ್ಪ, ವಿಜ್ಞಾನ ಮತ್ತು ಅಭಿವೃದ್ಧಿ ಕೇಂದ್ರದ ಸಹ ಕಾರ್ಯದರ್ಶಿ ವಿ.ಎಸ್.ಎಸ್.ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು

No comments:

Post a Comment