Thursday, June 7, 2012

ಶುಕ್ರ ಸಂಕ್ರಮ ವೀಕ್ಷಿಸಿದ ವಿದ್ಯಾರ್ಥಿಗಳು

ಶುಕ್ರ ಸಂಕ್ರಮಣ ವೀಕ್ಷಿಸಿದ ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ.

ಶುಕ್ರ ಸಂಕ್ರಮಣದ ಖಗೋಳ ವಿಸ್ಮಯವನ್ನು ತಾಲೂಕಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ನಾಗರಿಕರು ಬುಧವಾರ ಬೆಳಗ್ಗೆ ವೀಕ್ಷಿಸಿದರು.
ಯಾವತ್ತಿಗೂ ಬೆಳ್ಳಿ ಚುಕ್ಕೆಯಾಗಿ ಮಿಂಚುವ ಶುಕ್ರ ಇಂದು ಕಪ್ಪುಚುಕ್ಕೆಯಾಗಿ ಸೂರ್ಯನ ಪ್ರಖರ ಬೆಳಕಿನ ಬೆಳ್ಳಿ ತಟ್ಟೆಯಲ್ಲಿ ಶುಕ್ರನು ಬಟಾಣಿ ಕಾಳಿನಂತೆ ಮಂದಗತಿಯಲ್ಲಿ ಚಲಿಸಿದನ್ನು ಕಂಡು ನಾಗರಿಕರು ಬೆರಗಾದರು.

ಹೊಸಪೇಟೆಯ ವಿಜ್ಞಾನ ಹಾಗೂ ಖಗೋಳ ಆಸಕ್ತರಿಗೆ ಹಬ್ಬದ ವಾತಾವರಣ. ಮುಂಜಾವದಲ್ಲಿಯೇ ಲಗುಬಗೆಯಿಂದ ಸಂಕ್ರಮಣ ವೀಕ್ಷಿಸಲು ಅಲ್ಲಲ್ಲಿ ಗುಂಪು ಗುಂಪಾಗಿ ಬಂದಿದ್ದರು. ಆದರೆ, ಮೋಡ ಕವಿದಿದ್ದರಿಂದ ವೀಕ್ಷಣೆಗೆ ತೊಂದರೆಯಾಗುತ್ತಿತ್ತು. ಶುಕ್ರನ ಸಂಕ್ರಮಣ ನೋಡಿ ಜನರು ಕಣ್ತುಂಬಿ ನೋಡಿ ಜನರು ಸಂಭ್ರಮಪಟ್ಟರು.

ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಪ್ರೌಢದೇವರಾಯ ತಾಂತ್ರಿಕ ಕಾಲೇಜುಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ವ್ಯವಸ್ಥೆ ಮಾಡಿತ್ತು. ಸುರಕ್ಷಿತ ಸೌರ ಶೋಧಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪೂರೈಸಿತು. ಎಲ್ಲರಿಗೂ ಕೈಗೆಟುಕುವ ರು. ೧೦ ಬೆಲೆಯ ಈ ಕನ್ನಡಕಗಳನ್ನು ಶಾಲಾ ಮಕ್ಕಳು ಖರೀದಿಸಿಕೊಂಡು ಸಂಕ್ರಮಣ ವೀಕ್ಷಿಸಿದರು.

ಈ ಶತಮಾನದ ಕೊನೆಯ ಖಗೋಳ ವಿಸ್ಮಯ ಇದಾಗಿದ್ದರಿಂದ ಸಾರ್ವಜನಿಕರು ವಿಶೇಷ ಶಿಬಿರಗಳು ಮತ್ತು ತಮ್ಮ ಮನೆಗಳ ಮೇಲೆ ನಿಂತು ವಿಶೇಷ ಸೌರ ಕನ್ನಡಕಗಳ ಮೂಲಕ ಸಂಕ್ರಮಣ ವೀಕ್ಷಿಸಿ ಸಂಭ್ರಮಿಸಿದರು.

No comments:

Post a Comment