Saturday, June 23, 2012

ಸದಸ್ಯತ್ವ ನೋಂದಣಿ ಆಂದೋಲನ ಜೂನ್ ೨೪ ರಿಂದ ೩೦


                           ಸದಸ್ಯತ್ವ ನೋಂದಣಿ ಆಂದೋಲನ ಜೂನ್ ೨೪ ರಿಂದ ೩೦ 

ರಾಜ್ಯದ ಜನಸಮುದಾಯದಲ್ಲಿ ವಿಜ್ಞಾನ, ವೈಜ್ಞಾನಿಕ ಚಿಂತನೆ, ಸಾರ್ವತ್ರಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ಕುರಿತಂತೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜೂನ್ ೨೪ ರಿಂದ ೩೦ ರ ವರೆಗೆ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕೈಗೊಂಡಿದೆ. ಸಮಿತಿಯ ಉದ್ದೇಶಗಳನ್ನು ಒಪ್ಪುವ ಹಾಗೂ ಜನಸಮೂಹದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲು ಕಾರ್ಯಕರ್ತರಾಗಿ ಕೆಲಸ ಮಾಡಲು ಇಚ್ಚಿಸುವ ಎಲ್ಲರೂ  ಸದಸ್ಯರಾಗಲು ಸಮಿತಿ ಮನವಿ ಮಾಡಿದೆ. ಸಮಿತಿಯ ಎಲ್ಲ ಘಟಕಗಳೂ ರಾಜ್ಯದಾದ್ಯಂತ ಈ ಒಂದು ವಾರದ ಅವಧಿಯಲ್ಲಿ ಮನೆಮನೆಗೆ, ಕಛೇರಿಗಳಿಗೆ, ಶಾಲೆಗಳಿಗೆ ತೆರಳಿ ಸದಸ್ಯರನ್ನು ನೋಂದಾಯಿಸಲಿದ್ದಾರೆ. ಕೆಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಿ ಗಣ್ಯರಿಂದ ಸದಸ್ಯತ್ವ ಪಡೆಯುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗುತ್ತಿದೆ.  ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಪಾಳ್ಯದಲ್ಲಿ ೨೪.೦೬.೨೦೧೨ರಂದು ಬೆಳಿಗ್ಗೆ ೧೦ಕ್ಕೆ ಗಿಡ ನೆಡುವ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ರಾಜ್ಯ ಪದಾಧಿಕಾರಿಗಳು ಚಾಲನೆ ನೀಡಲಿದ್ದಾರೆ. 

ಇದೇ ಜೂನ್ ೬ ರಂದು ಸಂಭವಿಸಿದ ಶುಕ್ರ ಸಂಕ್ರಮ ವೀಕ್ಷಣೆ ಹಾಗೂ ಅದಕ್ಕೆ ಪೂರಕವಾಗಿ ಸಮಿತಿ ಹತ್ತಾರು ಕಾರ್ಯಾಗಾರಗಳನ್ನು ಸಂಘಟಿಸಿದ್ದು ಇಡೀ ಪ್ರಕ್ರಿಯೆಯಲ್ಲಿ ಸುಮಾರು ಒಂದು ಲಕ್ಷ ಜನರನ್ನು ಮುಟ್ಟಲಾಗಿದೆ. 

ಸದಸ್ಯರಾಗಬಯಸುವವರು ಸಮಿತಿಯನ್ನು ನೇರವಾಗಿ ಸಮಪರ್ಕಿಸಬಹುದಾಗಿದೆ. 
ಸದಸ್ಯತ್ವ ಶುಲ್ಕ ೧೦೦ರೂಗಳಾಗಿದ್ದು ಸದಸ್ಯರಾದವರಿಗೆ ಸಮಿತಿಯ ಪತ್ರಿಕೆ ಕೆಜೆವಿಎಸ್ ನ್ಯೂಸ್ ಅನ್ನು ಪ್ರತಿ ತಿಂಗಳೂ ಕಳಿಸಲಾಗುವುದು ಜೊತೆಗೆ ಸಮಿತಿ ಪ್ರಕಟಿಸುವ ಪುಸ್ತಕಗಳ ಮೇಲೆ ಶೇ.೨೦ರ ರಿಯಾಯ್ತಿ ನೀಡಲಾಗುವುದು.
ಸಂಪರ್ಕ ವಿಳಾಸ: ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ೪ನೇ ಮುಖ್ಯ ರಸ್ತೆ, ರುಕ್ಮಿಣಿನಗರ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩. ದೂರವಾಣಿ: ೯೪೪೮೯೫೭೬೬೬.

ಈ.ಬಸವರಾಜು
ಕಾರ್ಯದರ್ಶಿ

No comments:

Post a Comment